ಪ್ರಜಾಧ್ವನಿ ಯಾತ್ರೆಯಲ್ಲಿ ದುಡ್ಡು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ದ ಎಫ್ಐಆರ್ ದಾಖಲಾಗಿದೆ.. ಚುನಾವಣಾಧಿಕಾರಿಗಳ ದೂರು ಆಧರಿಸಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಿಂಗಾಯಿತ ಮತ ಬೇಟೆಗೆ ಮುಂದಾದ ಬಿಜೆಪಿ-ಜೆಡಿಎಸ್. ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ಪುತ್ಥಳಿ ಪಾಲಿಟಿಕ್ಸ್. ಮಾಚಹಳ್ಳಿ ಗ್ರಾಮದಲ್ಲಿಂದು ಬಸವೇಶ್ಚರ ಪುತ್ಥಳಿ ಅನಾವರಣ. ಪುತ್ಥಳಿ ಉದ್ಘಾಟನೆ ಮಾಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ. ಜೆಡಿಎಸ್ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಪುತ್ಥಳಿ ನಿರ್ಮಾಣ. 15 ಅಡಿ ಎತ್ತರದ ಕುದುರೆ ಮೇಲೆ ಕುಳಿತ ಬಸವೇಶ್ವರರ ಫೈಬರ್ ಪುತ್ಥಳಿ. ಇಂದಿನ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಗ್ರಾಮದಲ್ಲಿ ಸಿದ್ಧತೆ.
ಮಂಡ್ಯ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ. ದೆಹಲಿ ಕಡೆ ಪ್ರಯಾಣ ಬೆಳಸಿದ ಆತ್ಮಾನಂದ ಟೀಂ. ಮೂಲ ಕಾಂಗ್ರೆಸ್ಸಿಗರ ನಿರ್ಲಕ್ಷ್ಯ ಎಂದು ಅಸಮಾಧಾನ. ವಲಸಿಗ ಕೆ.ಕೆ. ರಾಧಾಕೃಷ್ಣಗೆ ಟಿಕೆಟ್ ನೀಡದಂತೆ ಪಟ್ಟು. ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡುವಂತೆ ಒತ್ತಾಯ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸಲು ಹೊರಟವರಿಗೆ ಬಿಗ್ ಶಾಕ್ ಕಾದಿದೆ.. ಮಂಡ್ಯ ಜಿಲ್ಲೆಯ ರಾಜಕೀಯ ಅಖಾಡಕ್ಕೆ ದೊಡ್ಡಗೌಡ್ರ ಎಂಟ್ರಿಯಾಗಲಿದೆ.. ನಾನೇ ನಾಯಕತ್ವ ವಹಿಸಿಕೊಳ್ತೇನೆ ಎಂದ ಮಾಜಿ ಫ್ರಧಾನಿ HDD ಅಭಯ ನೀಡಿದ್ದಾರೆ ಎನ್ನಲಾಗ್ತಿದೆ.
ತಮ್ಮ ನೆಚ್ಚಿನ ನಾಯಕರಿಗೆ ಹಾರ ಹಾಕಿ ಸಂಭ್ರಮ ಪಡುವುದು ಟ್ರೆಂಡ್ ಆಗಿದೆ. ಆದರೆ ಇಲ್ಲೊಂದು ಹಾರದ ಕಥೆ ಶಿಕ್ಷಾರ್ಹ ಅಪರಾಧಗೆ ಗುರಿಯಾಗಿದೆ ಅಷ್ಟಕ್ಕೂ ಹಾರದ ಹಿಂದಿರುವ ರಹಸ್ಯವೇನು ನೋಡೋಣ ಬನ್ನಿ..
ಮಂಡ್ಯದಲ್ಲಿ ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ.. ಇಲ್ಲಿನ ಜನ ನನಗೆ ಅಭೂತಪೂರ್ವ ಆಶೀರ್ವಾದ ನೀಡಿದ್ದಾರೆ ಎಂದು ಮೋದಿ ಈ ಸತ್ಕಾರಕ್ಕೆ ನಾನು ಆಭಾರಿ ಎಂದಿದ್ದಾರೆ.. ಈ ಹೈವೇಯಿಂದ ಬೆಂಗಳೂರು-ಮೈಸೂರು ಪ್ರಯಾಣದ ಸಮಯ ಕಡಿಮೆಯಾಗಿದೆ ಎಂದರು...
ಪ್ರಧಾನಿ ಮೋದಿ ಇಂದು ವಿಶ್ವನಾಯಕ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ, ಪಾಕ್ ಸಮಸ್ಯೆ ಬಗೆಹರಿಸೋಕೆ ಕೂಡಾ ಇಂದು ಮೋದಿ ಬೇಕಾಗಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ಗೆ ಮೋದಿ ಸಮಾಧಿಯ ಕನಸು.. ಆದ್ರೆ ಜನರ ಆಶೀರ್ವಾದವೇ ಮೋದಿಗೆ ರಕ್ಷಾ ಕವಚ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂಡ್ಯದಲ್ಲಿ ಹೆದ್ದಾರಿ ಉದ್ಘಾಟಿಸಿ ಭಾಷಣ ಮಾಡಿದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು..
ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. 100 ಕೋಟಿಗೂ ಹೆಚ್ಚು ಅನುದಾನ ನೀಡಿ, ಮುಚ್ಚಿಹೋಗಿದ್ದ ಮಂಡ್ಯದ ಸಕ್ಕರೆ ಕಾರ್ಖಾನೆ ಪುನರಾರಂಭಿಸಿದ್ದು ನಮ್ಮ ಸರ್ಕಾರ. ಈ ವರ್ಷ ಎಥನಾಲ್ ಘಟಕವನ್ನು ಮೈಶುಗರ್ ಕಾರ್ಖಾನೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ 10% ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಸರ್ಕಾರ 40% ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ಯಾಕೆ ಉತ್ತರಿಸುತ್ತಿಲ್ಲ ಮೋದಿಜಿ. ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಸಂಸದೆ ಸುಮಲತಾ ಕಳೆದ ಕೆಲವು ದಿನಗಳಿಂದ ಬಿಜೆಪಿಗೆ ಸೇರ್ತಾರಾ ಅಥವಾ ಇಲ್ವಾ ಅನ್ನುವ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಮೂಡಿತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸಂಸದೆ ಸುಮಲತಾ ಕೊನೆಗೂ ಇಂದು ತೆರೆ ಎಳೆದಿದ್ದಾರೆ. ಮಂಡ್ಯದ ತಮ್ಮ ನಿವಾಸದಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಸಿ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ತನ್ನ ಬೆಂಬಲ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ಕೇವಲ ಬೆಂಬಲ ಘೋಷಣೆ ಮಾಡುವುದರ ಮೂಲಕ ಎಚ್ಚರಿಕೆಯ ಹೆಜ್ಜೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.