US VISA: ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ.
ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಗುರುವಾರ ಪ್ರಕಟಿಸಿದೆ.
Sudan Crisis: ಎರಡು ಬಣಗಳು ಸುಡಾನ್ನ ಹಲವಾರು ನಗರಗಳಲ್ಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಗಳನ್ನು ನಡೆಸುತ್ತಿವೆ. . ಸುಡಾನ್ ರಾಜಧಾನಿ ಖಾರ್ಟೂಮ್ ಮತ್ತು ಒಮ್ದುರ್ಮನ್ ಸೇರಿದಂತೆ ಅನೇಕ ನಗರಗಳಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
World's Rarest Lizards: ವಿಶ್ವದಲ್ಲಿ ಅತ್ಯಂತ ಅಪರೂಪದ ಜೀವಿಗಳಿವೆ. ಆದರೆ, ವಿಭಿನ್ನ ಕಾರಣಗಳಿಂದಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯವಾಗಿ ಇಂತಹ ಪ್ರಾಣಿಗಳ ಖರೀದಿ ಹಾಗೂ ಮಾರಾಟ ಕಾನೂನುಬಾಹಿರವಾಗಿದೆ. ಆದರೂ ಕೂಡ ಇದೇ ಕಾರಣದಿಂದ ಅವುಗಳ ಮೌಲ್ಯ ಕೂಡ ಹೆಚ್ಚಾಗಿರುತ್ತದೆ. ಗೆಕ್ಕೋ ಹೆಸರಿನ ಹಲ್ಲಿಯ ವಿಷಯದಲ್ಲಿಯೂ ಕೂಡ ಇದೇ ರೀತಿ ಇದೆ. ಬಿಹಾರ ಮತ್ತು ನೇಪಾಳದಲ್ಲಿ ಕಂಡು ಬರುವ ಈ ಅಪರೂಪದ ಹಲ್ಲಿ ಕೋಟ್ಯಾಂತರ ರೂ.ಗಳಿಗೆ ಮಾರಾಟವಾಗುತ್ತದೆ.
Be Alert! ರೈಲಿನಲ್ಲಿ ಪ್ರಯಾಣ ನಡೆಸುವಾಗ ಇಲಾಖೆ ಜಾರಿಗೊಳಿಸಿರುವ ಕೆಲವು ವಿಶೇಷ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಮತ್ತು ಅನುಸರಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀವು ಜೈಲಿಗೆ ಹೋಗಬಹುದು. ರೈಲಿನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರೀತಿ ಮಾಡುವವರ ವಿರುದ್ಧ ರೈಲ್ವೆ ಕಠಿಣ ಕ್ರಮ ಕೈಗೊಳ್ಳಲಿದೆ.
What is Leg Lengthening : ಮೋಸೆಸ್ ಪ್ರಸ್ತುತ ಮೊದಲಿಗಿಂತ ಐದು ಇಂಚು ಎತ್ತರವಾಗಿದ್ದಾನೆ. ಮೋಸೆಸ್ ಕುಳ್ಳ ಇದ್ದ ಕಾರಣ ಅವರ ಲವ್ ಲೈಪ್ ಚನ್ನಾಗಿರಲಿಲ್ಲವಂತೆ ಅಲ್ಲದೆ, ಆಗಾಗ್ಗೆ "ಕುಳ್ಳ" ಎಂದು ಗೇಲಿ ಮಾಡುತ್ತಿದ್ದರಂತೆ. ಇದೀಗ ಅವರು ಎತ್ತರ ಹೆಚ್ಚಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೊಂದಿದ್ದಾರೆ.
Push ups world record : 33 ವರ್ಷ ವಯಸ್ಸಿನ ಲ್ಯೂಕಾಸ್ ಒಂದು ಗಂಟೆಯೊಳಗೆ 3,206 ಪುಷ್-ಅಪ್ಗಳನ್ನು ಮಾಡಿದ್ದಾರೆ. ಇದಕ್ಕೂ ಮೊದಲು, ಏಪ್ರಿಲ್ 2022ರಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ 3,182 ಪುಶ್-ಅಪ್ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈಗ ಲ್ಯೂಕಾಸ್ ಡೇನಿಯಲ್ ದಾಖಲೆ ಬ್ರೇಕ್ ಮಾಡಿದ್ದಾರೆ.
ದಕ್ಷಿಣ ಯುಎಸ್ ರಾಜ್ಯ ಟೆಕ್ಸಾಸ್ನಲ್ಲಿರುವ ಡೈರಿ ಫಾರ್ಮ್ನಲ್ಲಿ ಸ್ಪೋಟದಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸುಮಾರು 18 ಸಾವಿರ ಜಾನುವಾರಗಳು ಸಾವನ್ನಪ್ಪಿವೆ. ಇದೆ ವೇಳೆ ಓರ್ವ ರೈತ ಕೂಡ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Trending News: ಬ್ರೆಜಿಲ್ ನಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನು ನಿಬ್ಬೆರಗಾಗಿಸಿದೆ. ಇಲ್ಲಿ ಮಹಿಳೆಯೊಬ್ಬರು ಮೊದಲು ಬೊಂಬೆಯೊಂದನ್ನು ಮದುವೆಯಾಗಿದ್ದು, ಇದೀಗ ಗರ್ಭಿಣಿಯಾಗಿದ್ದಾಳೆ. ಈ ಸುದ್ದಿ ಕೇಳಿ ಸಾಕಷ್ಟು ಜನರು ನಿಬ್ಬೆರಗಾಗಿದ್ದಾರೆ.
Donald Trump: ಟ್ರಂಪ್ ಮತ್ತು ಅವರ ಕುಟುಂಬವು ತಮ್ಮ ನಿವ್ವಳ ಮೌಲ್ಯ, ಹೋಟೆಲ್ಗಳು & ಗಾಲ್ಫ್ ಕೋರ್ಸ್ಗಳಂತಹ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಬ್ಯಾಂಕ್ಗಳನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ರಹಸ್ಯ ಕಡತಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದು, ಅದರಲ್ಲಿ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಮಿಲಿಟರಿ ಲೆಕ್ಕಾಚಾರಗಳು, ವಿವಿಧ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿಐಎ ನೀಡಿದ ವರದಿಗಳೂ ಸೇರಿದ್ದವು. ಈ ಕಡತಗಳು ಮೊದಲು ರಷ್ಯಾದಲ್ಲಿ ಹೆಚ್ಚಾಗಿ ಬಳಸಲಾಗುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಹರಿದಾಡಿ, ಆ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದವು.
ಶ್ರೀಮಂತ ವ್ಯಕ್ತಿಗಳು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸಲು ಕಾರಿಗೆ ಬಳಸುವ ಫ್ಯಾನ್ಸಿ ನಂಬರ್ಗಳನ್ನು ಯುಎಇಯಲ್ಲಿ ಹರಾಜು ಹಾಕಲಾಗುತ್ತದೆ. 2008ರಲ್ಲಿ ಅಬುಧಾಬಿಯಲ್ಲಿ ‘ನಂಬರ್ 1’ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ 117 ಕೋಟಿ ರೂ.ಗೆ ಹರಾಜಾಗಿತ್ತು.
ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯನ್ನು ಚೀನಾ ಸೋಮವಾರ ವಿರೋಧಿಸಿದೆ ಮತ್ತು ಇದು ಪ್ರದೇಶದ ಮೇಲೆ ಚೀನಾದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
Happy Siblings Day 2023: ಸಹೋದರಿ ತನ್ನ ಕಿರಿಯ ಸಹೋದರನನ್ನು ಓರ್ವ ತಾಯಿಯಂತೆ ಆರೈಕೆ ಮಾಡುತ್ತಾಳೆ ಮತ್ತು ಪ್ರತಿ ತೊಂದರೆಯ ವಿಷಯದಲ್ಲಿ ಆತನಿಗೆ ಸಹಾಯ ಮಾಡುತ್ತಾಳೆ, ಇನ್ನೊಂದೆಡೆ ಸಹೋದರನು ತನ್ನ ಸಹೋದರಿಯನ್ನು ಪ್ರತಿ ತಿರುವಿನಲ್ಲಿಯೂ ರಕ್ಷಿಸುತ್ತಾನೆ. ಒಡಹುಟ್ಟಿದವರ ದಿನವನ್ನು ವಿಶ್ವದ ಎಲ್ಲಾ ಒಡಹುಟ್ಟಿದವರ ಅವಿನಾಭಾವ ಸಂಬಂಧಕ್ಕೆ ಸಮರ್ಪಿಸಲಾಗಿದೆ.
ಭಾನುವಾರದಂದು ಚೀನಾದ ಆಗ್ನೇಯ ಫುಜಿಯಾನ್ ಪ್ರಾಂತ್ಯದ ತೈವಾನ್ ಎದುರು ಪಿಂಗ್ಟಾನ್ ದ್ವೀಪದಲ್ಲಿ ಪ್ರವಾಸಿ ದೋಣಿ ಮತ್ತು ಚೀನಾದ ಧ್ವಜಗಳ ಹಿಂದೆ ಒಬ್ಬ ವ್ಯಕ್ತಿ ಜೆಟ್ಟಿಯ ಮೇಲೆ ನಿಂತಿದ್ದಾನೆ.
ಶನಿವಾರದಂದು ದಕ್ಷಿಣ ಥೈಲ್ಯಾಂಡ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಅಧಿಕಾರಿಗಳು ಇನ್ನೂ ಶಂಕಿತರಿಗಾಗಿ ಹುಡುಕುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Pakistan Economy: ಪಾಕಿಸ್ತಾನ ದಿವಾಳಿಯಾಗುವತ್ತ ವೇಗವಾಗಿ ಚಲಿಸುತ್ತಿದೆ. ಇದರ ಹಿಂದಿನ ದೊಡ್ಡ ಕಾರಣ ಇದೀಗ ಬೆಳಕಿಗೆ ಬಂದಿದೆ. ಥಿಂಕ್ ಟ್ಯಾಂಕ್ ಆಗಿರುವ ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ಮಹತ್ವದ ಸಂಗತಿಯೊಂದನ್ನು ಬಹಿರಂಗಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.