Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ!

Trending News: ಬ್ರೆಜಿಲ್ ನಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನು ನಿಬ್ಬೆರಗಾಗಿಸಿದೆ. ಇಲ್ಲಿ ಮಹಿಳೆಯೊಬ್ಬರು ಮೊದಲು ಬೊಂಬೆಯೊಂದನ್ನು ಮದುವೆಯಾಗಿದ್ದು, ಇದೀಗ ಗರ್ಭಿಣಿಯಾಗಿದ್ದಾಳೆ. ಈ ಸುದ್ದಿ ಕೇಳಿ ಸಾಕಷ್ಟು ಜನರು ನಿಬ್ಬೆರಗಾಗಿದ್ದಾರೆ.   

Written by - Nitin Tabib | Last Updated : Apr 14, 2023, 06:41 PM IST
  • ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ ಮೊರೆಸ್ ಇದನ್ನು ಘೋಷಿಸಿದ್ದಾರೆ.
  • ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ನೋಡಿದ್ದಾರೆ.
  • ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ! title=
ವೈರಲ್ ಸುದ್ದಿ!

Shocking News: ಈ ಜಗತ್ತಿನಲ್ಲಿ ಯಾವಾಗ ಯಾವ ವಿಷಯ ನೋಡಲು ಮತ್ತು  ಕೇಳಲು ಸಿಗುತ್ತದೆ ಎಂಬ ಸಂಗತಿ ಹೇಳಲಾಗದು. ಅನೇಕ ಬಾರಿ ನೋಡಲು ಸಿಗುವ ಹಾಗೂ ಕೇಳಲು ಸಿಗುವ ಕೆಲ ಸಂಗತಿಗಳ ಮೇಲೆ  ನಂಬಲು ಯಾರಿಗಾದರೂ ಕೂಡ ಸ್ವಲ್ಪ ಕಷ್ಟ ಸಾಧ್ಯವೇ ಹೌದು. ಇಂತಹುದೇ ಒಂದು ಪ್ರಕರಣ  ಬ್ರೆಜಿಲ್ ನಿಂದ ಹೊರಹೊಮ್ಮಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಏಕೆಂದರೆ, ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಬೊಂಬೆಯೊಂದಿಗೆ ವಿವಾಹ ಮಾಡಿಕೊಂಡು ತಾನು ತಾಯಿಯಾಗಲಿದ್ದೇನೆ ಮತ್ತು ಅದು ಕೂಡ ಎರಡನೇ ಬಾರಿಗೆ ಎಂದು ಹೇಳಿಕೊಂಡಿದ್ದಾಳೆ. ಕೇಳಿ ನಿಮಗೂ ಶಾಕ್ ಆಗಿರಬಹುದಲ್ಲ?  ಖಂಡಿತ ಕೇಳಿದವರಿಗೆ ಶಾಕ್ ಆಗುತ್ತೆ. ಹಾಗಾದರೆ ಬನ್ನಿ, ಸಂಪೂರ್ಣ ವಿಷಯ ಏನು ಎಂದು ತಿಳಿಯೋಣ?

ಇದನ್ನೂ ಓದಿ-Pakistan ದಿವಾಳಿಯಾಗುವುದು ಬಹುತೇಕ ಪಕ್ಕಾ! ವಿಶ್ವದ ಯಾವುದೇ ಶಕ್ತಿ ಉಳಿಸಲು ಸಾಧ್ಯವಿಲ್ಲ

ಬ್ರೆಜಿಲ್‌ನ ಈ 37 ವರ್ಷದ ಮಹಿಳೆಯ ಹೆಸರು ಮಿರಿವೊನ್ ರೋಚಾ ಮೊರೇಸ್. ಮೊರೇಸ್ ತನ್ನ ವಿಶಿಷ್ಟ ವಿವಾಹದ ಬಗ್ಗೆ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಏಕೆಂದರೆ, ಅವರು ಒಂದು ಬೊಂಬೆಯ ಜೊತೆಗೆ ವಿವಾಹ ಮಾಡಿಕೊಂಡಿದ್ದಾರೆ. ಬೊಂಬೆಯ ವಿವಾಹ ಯಾಕೆ ಅಂತ ನೀವು  ಯೋಚಿಸುತ್ತಿರಬೇಕು? ಹಾಗಾದರೆ ಇದರ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ. ವಾಸ್ತವದಲ್ಲಿ, ಮೊರೇಸ್ ಅವರ ತಾಯಿ ಅವರಿಗಾಗಿಯೇ ವಿಶೇಷವಾಗಿ ಈ ಗೊಂಬೆಯನ್ನು ತಯಾರಿಸಿದ್ದರು. ಆ ಬೊಂಬೆಯ ಹೆಸರು ಮಾರ್ಸೆಲೋ. ಇದಾದ ನಂತರ ಮೊರೇಸ್ ಮಾರ್ಸೆಲೋ ಜೊತೆಗೆ ವಿವಾಹ ಮಾಡಿಕೊಂಡಿದ್ದರು. ಮೊರೇಸ್ ತಮ್ಮ ವೈವಾಹಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿರುವುದಾಗಿ ಹೇಳುತ್ತಾರೆ. ಮೊದ ಮೊದಲು ತಮ್ಮ  ಪತಿ ಕೂಡ ಮೋಸ ಮಾಡುತ್ತಿದ್ದಾನೆ ಎಂದು ಅವರು ಆರೋಪಿಸಿದ್ದರು. ಆದರೆ, ಈಗ ಉಭಯರ ನಡುವೆ ಎಲ್ಲವೂ ಸರಿಯಾಗಿದ್ದು. ಇತ್ತೀಚೆಗಷ್ಟೇ ತಾವು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಬಾರಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅವರು ಘೋಷಿಸಿದ್ದಾರೆ.

ಇದನ್ನೂ ಓದಿ-Guinness Record: 32 ವರ್ಷಗಳಲ್ಲಿ 100 ಕ್ಕೂ ಅಧಿಕ ವಿವಾಹಗಳನ್ನು ಮಾಡಿಕೊಂಡ ವ್ಯಕ್ತಿ, ಒಬ್ಬಳಿಗೂ ವಿಚ್ಛೇದನೆ ನೀಡಿಲ್ಲವಂತೆ!

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ ಮೊರೆಸ್ ಇದನ್ನು ಘೋಷಿಸಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ನೋಡಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲ ಟೆಸ್ಟಿಂಗ್ ಕಿಟ್ ಫಲಿತಾಂಶವನ್ನೂ ವಿಡಿಯೋದಲ್ಲಿ ಮಹಿಳೆ ಬಹಿರಂಗಗೊಳಿಸಿದ್ದಾಳೆ. ಈಗ ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗರ್ಭಿಣಿಯಾಗಿರುವ ಮೊರೇಸ್‌ಗೆ ಕೆಲವರು ಅಭಿನಂದನೆ ಸಲ್ಲಿಸಿದರೆ, ಕೆಲವರು ಗೇಲಿ ಮಾಡುತ್ತಿದ್ದಾರೆ. ಇದೇ ವೇಳೆ ಕೆಲವರು ಅದನ್ನು ಹುಚ್ಚುತನಕ್ಕೆ ಸಹ ಹೇಳುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು, ಕಾಮೆಂಟ್ ಮೂಲಕ ಖಂಡಿತ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News