ಟೆಕ್ಸಾಸ್‌ನಲ್ಲಿ ಆಕಸ್ಮಿಕ ಭಾರಿ ಸ್ಫೋಟ, 18,000 ಜಾನುವಾರುಗಳು ಬಲಿ

ದಕ್ಷಿಣ ಯುಎಸ್ ರಾಜ್ಯ ಟೆಕ್ಸಾಸ್‌ನಲ್ಲಿರುವ ಡೈರಿ ಫಾರ್ಮ್‌ನಲ್ಲಿ ಸ್ಪೋಟದಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸುಮಾರು 18 ಸಾವಿರ ಜಾನುವಾರಗಳು ಸಾವನ್ನಪ್ಪಿವೆ. ಇದೆ ವೇಳೆ ಓರ್ವ ರೈತ ಕೂಡ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Written by - Zee Kannada News Desk | Last Updated : Apr 14, 2023, 07:16 PM IST
  • ಒಮ್ಮೆ ನಾವು ಈ ದುರಂತದ ಕಾರಣ ಮತ್ತು ಸುತ್ತಲಿನ ಸತ್ಯಗಳನ್ನು ತಿಳಿದಿದ್ದೇವೆ,
  • ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ,
  • ಆ ಮೂಲಕ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಬಹುದು
ಟೆಕ್ಸಾಸ್‌ನಲ್ಲಿ ಆಕಸ್ಮಿಕ ಭಾರಿ ಸ್ಫೋಟ, 18,000 ಜಾನುವಾರುಗಳು ಬಲಿ title=
Photo: AFP

ಟೆಕ್ಸಾಸ್‌: ದಕ್ಷಿಣ ಯುಎಸ್ ರಾಜ್ಯ ಟೆಕ್ಸಾಸ್‌ನಲ್ಲಿರುವ ಡೈರಿ ಫಾರ್ಮ್‌ನಲ್ಲಿ ಸ್ಪೋಟದಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸುಮಾರು 18 ಸಾವಿರ ಜಾನುವಾರಗಳು ಸಾವನ್ನಪ್ಪಿವೆ. ಇದೆ ವೇಳೆ ಓರ್ವ ರೈತ ಕೂಡ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದತಿ: ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತ-ಸಿದ್ದು

"ಇದು ಟೆಕ್ಸಾಸ್ ನಲ್ಲಿ ಕೊಟ್ಟಿಗೆಗೆ ಬೆಂಕಿ ಹತ್ತಿಕೊಂಡಿದೆ ಮತ್ತು ಸ್ವಚ್ಛಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು" ಎಂದು ಟೆಕ್ಸಾಸ್ ಕೃಷಿ ಆಯುಕ್ತ ಸಿಡ್ ಮಿಲ್ಲರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸೋಮವಾರ ರಾತ್ರಿ ಟೆಕ್ಸಾಸ್ ಪ್ಯಾನ್‌ಹ್ಯಾಂಡಲ್‌ನ ಡಿಮಿಟ್ ಪಟ್ಟಣದ ಸಮೀಪವಿರುವ ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದೆ ವೇಳೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯನ್ನು ರಕ್ಷಿಸಿ ಲುಬ್ಬಾಕ್‌ನಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕ್ಯಾಸ್ಟ್ರೋ ಕೌಂಟಿ ಶೆರಿಫ್ ಕಚೇರಿ ಫೇಸ್‌ಬುಕ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ : ನಾಲ್ವರು ದಂಧೆಕೋರರ ಬಂಧನ

"ಒಮ್ಮೆ ನಾವು ಈ ದುರಂತದ ಕಾರಣ ಮತ್ತು ಸುತ್ತಲಿನ ಸತ್ಯಗಳನ್ನು ತಿಳಿದಿದ್ದೇವೆ, ಈಗ ನಾವು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ, ಆ ಮೂಲಕ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಬಹುದು" ಎಂದು ಅವರು ಹೇಳಿದರು.ಮೀಥೇನ್ ಸ್ಫೋಟದಿಂದಾಗಿ ಬೆಂಕಿ ಹೊತ್ತಿಕೊಂಡು ನಂತರ ಹರಡಿರಬಹುದು" ಎಂದು ಅವರು ಹೇಳಿದರು.

"ಫಾರ್ಮ್‌ಗಳು ಕಾಮನ್‌ಸೆನ್ಸ್ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಾಣಿಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಟೆಕ್ಸಾಸ್ ದುರಂತವನ್ನು ಉಲ್ಲೇಖಿಸಿ ಯುನೈಟೆಡ್ ಸ್ಟೇಟ್ಸ್‌ನ ಅತ್ಯಂತ ಹಳೆಯ ಪ್ರಾಣಿ ಕಲ್ಯಾಣ ದತ್ತಿಗಳಲ್ಲಿ ಒಂದಾದ ಪ್ರಾಣಿ ಕಲ್ಯಾಣ ಸಂಸ್ಥೆ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News