Be Alert! ರೈಲಿನಲ್ಲಿ ಪ್ರವಾಸ ಮಾಡುವಾಗ ಈ ಕೆಲ್ಸಾ ಮಾಡ್ಬೇಡಿ, ಇಲ್ದಿದ್ರೆ...?

Be Alert! ರೈಲಿನಲ್ಲಿ ಪ್ರಯಾಣ ನಡೆಸುವಾಗ ಇಲಾಖೆ ಜಾರಿಗೊಳಿಸಿರುವ ಕೆಲವು ವಿಶೇಷ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಮತ್ತು ಅನುಸರಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀವು ಜೈಲಿಗೆ ಹೋಗಬಹುದು. ರೈಲಿನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರೀತಿ ಮಾಡುವವರ ವಿರುದ್ಧ ರೈಲ್ವೆ ಕಠಿಣ ಕ್ರಮ ಕೈಗೊಳ್ಳಲಿದೆ.  

Written by - Nitin Tabib | Last Updated : Apr 15, 2023, 07:22 PM IST
  • ಅವುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ರೈಲಿನಲ್ಲಿ ಅಶ್ಲೀಲ ವೀಡಿಯೊಗಳು ಅಥವಾ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರೆ,
  • ಅವನ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ.
  • ಇದಲ್ಲದೇ ರೈಲಿನಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನೂ ಕೂಡ ನಿಲ್ಲಿಸಲು ಸೂಚಿಸಲಾಗಿದೆ.
Be Alert! ರೈಲಿನಲ್ಲಿ ಪ್ರವಾಸ ಮಾಡುವಾಗ ಈ ಕೆಲ್ಸಾ ಮಾಡ್ಬೇಡಿ, ಇಲ್ದಿದ್ರೆ...? title=
ರೇಲ್ವೆ ಅಲರ್ಟ್ !

Be Alert: ರೈಲಿನಲ್ಲಿ ಪ್ರಯಾಣ ನಡೆಸುವುದು ಹೆಚ್ಚು ಆರಾಮದಾಯಕ, ಜೇಬಿಗೆ ಹೊರೆ ಕಡಿಮೆ ಮತ್ತು ಸುರಕ್ಷಿತ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ರೈಲು ಸಾರ್ವಜನಿಕ ಆಸ್ತಿಯಾಗಿದೆ ಮತ್ತು ಈ ಸಾರ್ವಜನಿಕ ಆಸ್ತಿಯನ್ನು ಬಳಸುವಾಗ ಸರ್ಕಾರವು ಹೊರಡಿಸಿದ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಯುನೈಟೆಡ್ ಕಿಂಗ್ಡಮ್ ರೈಲ್ವೇ ಸಂಸ್ಥೆಯು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ರೈಲಿನಲ್ಲಿ ಅಶ್ಲೀಲ ವೀಡಿಯೊಗಳು ಅಥವಾ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರೆ, ಅವನ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ. ಇದಲ್ಲದೇ ರೈಲಿನಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನೂ ಕೂಡ ನಿಲ್ಲಿಸಲು ಸೂಚಿಸಲಾಗಿದೆ. ಜನರ ಮಧ್ಯೆ  ಘರ್ಷಣೆಯನ್ನು ಉಂಟುಮಾಡುವ ಇಂತಹ ವಿಷಯಗಳನ್ನು ರೈಲಿನಲ್ಲಿ ಪ್ರಯಾಣಿಸುವಾಗ ಚರ್ಚಿಸುವುದನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಯನ್ನು ನಾರ್ದರ್ನ್ ರೈಲ್ ಎಂಬ ಬ್ರಿಟಿಷ್ ರೈಲ್ವೇ ಕಂಪನಿ ಹೊರಡಿಸಿದೆ.

ಇದನ್ನೂ ಓದಿ-Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ!

ಆಕ್ಷೇಪಾರ್ಹ ವಿಷಯಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು
ಬ್ರಿಟನ್‌ನ ನಾರ್ದರ್ನ್ ರೈಲ್ವೇಸ್ ಕಂಪನಿಯು ಫ್ರೆಂಡ್ಲಿ ವೈಫೈ ಜೊತೆಗೆ ಸೇರಿ ತನ್ನ ಕೆಲಸವನ್ನು ಮಾಡುತ್ತದೆ. ಕಂಪನಿಯು ತನ್ನ ವ್ಯಾಪ್ತಿಯಲ್ಲಿರುವ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲಿನಲ್ಲಿ ಯಾರಾದರೂ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇದಲ್ಲದೆ, ಪ್ರಯಾಣದ ಸಮಯದಲ್ಲಿ ಪ್ರಚೋದನಕಾರಿ ವಿಷಯಗಳ ಚರ್ಚೆಯ ಮೇಲೆ ಕಡಿವಾಣ ಹಾಕಲಾಗಿದೆ. ಇತರರಿಗೆ ಅನಾನುಕೂಲವನ್ನುಂಟುಮಾಡುವಂತಹ ಯಾವುದೇ ವಿಷಯವನ್ನು ತಪ್ಪಿಸಬೇಕು. ರೈಲು ಪ್ರಯಾಣದ ಸಮಯದಲ್ಲಿ ಕೆಲವರು ಇತರರು ಕೇಳಲು ಮತ್ತು ನೋಡಲು ಯೋಗ್ಯವಲ್ಲದ  ಇಂತಹ ವಿಷಯಗಳನ್ನು ಹುಡುಕುತ್ತಾರೆ. ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟ್ರಿಸಿಯಾ ವಿಲಿಯಮ್ಸ್ ಹೇಳಿದ್ದಾರೆ. ಈಗ ರೈಲಿನಲ್ಲಿ ಅಂತಹ ಎಲ್ಲಾ ವಿಷಯಗಳನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-New Kiss Device: ದೂರದಲ್ಲಿರುವ ಗರ್ಲ್ ಫ್ರೆಂಡ್ ಅಥವಾ ಪತ್ನಿಗೆ ಅಸಲಿ ಮುತ್ತು ಕೊಡಬೇಕೇ?... ವಿಡಿಯೋ ನೋಡಿ!

ಮಹಿಳೆಯೊಂದಿಗಿನ ಘಟನೆಯ ನಂತರ ಈ ನಿರ್ಧಾರವು ಹೊರಬಂದಿದೆ
ಏಪ್ರಿಲ್ 4 ರಂದು, ಉತ್ತರ ರೈಲ್ವೆಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿತ್ತು ಎಂಬ ಸಂಗತಿ ಇಲ್ಲಿ ಗಮನಾರ್ಹ, ನಂತರ ರೈಲ್ವೆ ಸಂಸ್ಥೆ ಈ ಮಾರ್ಗಸೂಚಿಗಳನ್ನು ನೀಡಿದೆ. ಏಪ್ರಿಲ್ 4 ರಂದು ಮಹಿಳೆ ಉತ್ತರ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ವ್ಯಕ್ತಿಯೊಬ್ಬ ಮಹಿಳೆಗೆ ಅಶ್ಲೀಲ ಸನ್ನೆ ಮಾಡಿದ್ದು, ನಿರಾಕರಿಸಿದರೂ ಮಹಿಳೆಯ ಫೋಟೋ ತೆಗೆದಿದ್ದಾನೆ. ಇದನ್ನು ವಿರೋಧಿಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉಳಿದ ಪ್ರಯಾಣಿಕರು ಪ್ರತಿಭಟನೆ ನಡೆಸಿದಾಗ ಕಿಡಿಗೇಡಿ ಪರಾರಿಯಾಗಿದ್ದಾನೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News