Happy Siblings Day 2023: ನಾಳೆ ರಾಷ್ಟ್ರೀಯ ಒಡಹುಟ್ಟಿದವರ ದಿನ, ಏನಿದರ ವಿಶೇಷತೆ, ಇಲ್ಲಿ ತಿಳಿದುಕೊಳ್ಳಿ

Happy Siblings Day 2023: ಸಹೋದರಿ ತನ್ನ ಕಿರಿಯ ಸಹೋದರನನ್ನು ಓರ್ವ ತಾಯಿಯಂತೆ ಆರೈಕೆ ಮಾಡುತ್ತಾಳೆ ಮತ್ತು ಪ್ರತಿ ತೊಂದರೆಯ ವಿಷಯದಲ್ಲಿ ಆತನಿಗೆ ಸಹಾಯ ಮಾಡುತ್ತಾಳೆ, ಇನ್ನೊಂದೆಡೆ ಸಹೋದರನು ತನ್ನ ಸಹೋದರಿಯನ್ನು ಪ್ರತಿ ತಿರುವಿನಲ್ಲಿಯೂ ರಕ್ಷಿಸುತ್ತಾನೆ. ಒಡಹುಟ್ಟಿದವರ ದಿನವನ್ನು ವಿಶ್ವದ ಎಲ್ಲಾ ಒಡಹುಟ್ಟಿದವರ ಅವಿನಾಭಾವ ಸಂಬಂಧಕ್ಕೆ ಸಮರ್ಪಿಸಲಾಗಿದೆ.   

Written by - Nitin Tabib | Last Updated : Apr 9, 2023, 07:46 PM IST
  • 1998 ರಿಂದ ಅಮೆರಿಕಾದ ಒಟ್ಟು 49 ರಾಜ್ಯಗಳಲ್ಲಿ ಒಡಹುಟ್ಟಿದವರ ದಿನವನ್ನು ಆಚರಿಸಲಾಗುತ್ತದೆ,
  • ಆದರೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ದಿನಕ್ಕೆ ಜಯಿಂಟ್ ರೆಸಲ್ಯೂಷನ್ ದೊರೆತಿಲ್ಲ.
  • ಒಡಹುಟ್ಟಿದವರ ದಿನವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾನ್ಯತೆ ಪಡೆದ ರಜಾದಿನವನ್ನಾಗಿ ಮಾಡಲು ಎವರ್ಟ್ಸ್ ಫೌಂಡೇಶನ್ ಶ್ರಮಿಸುತ್ತಿದೆ.
Happy Siblings Day 2023: ನಾಳೆ ರಾಷ್ಟ್ರೀಯ ಒಡಹುಟ್ಟಿದವರ ದಿನ, ಏನಿದರ ವಿಶೇಷತೆ, ಇಲ್ಲಿ ತಿಳಿದುಕೊಳ್ಳಿ title=
ಒಡಹುಟ್ಟಿದವರ ದಿನ

Siblings Day 2023: ಈ ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಅಣ್ಣ-ತಂಗಿಯರ ಸಂಬಂಧವು ತುಂಬಾ ವಿಶೇಷವಾಗಿದೆ, ಏಕೆಂದರೆ ಈ ಸಂಬಂಧದಲ್ಲಿ ದ್ವೇಷ, ಅಸೂಯೆ ಮತ್ತು ವೈಮನಸ್ಸಿನ ಜೊತೆಗೆ, ಸಾಕಷ್ಟು ಪ್ರೀತಿಯೂ ಇರುತ್ತದೆ. ಮನೆಯಲ್ಲಿ ಏನಾದರೂ ಹೊಸದು ಬಂದಾಗ, ಸಹೋದರರು ಮತ್ತು ಸಹೋದರಿಯರು ಪರಸ್ಪರ ಜಗಳವಾಡಬಹುದು, ಆದರೆ ಕಾಳಜಿಯ ವಿಷಯಕ್ಕೆ ಬಂದಾಗ, ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆರೈಕೆಯ ಜೊತೆಗೆ ಇಬ್ಬರೂ ಪರಸ್ಪರ ಪ್ರೀತಿಯನ್ನು ಸಹ ಹರಿಸುತ್ತಾರೆ. ಪ್ರೀತಿ, ಸಂಘರ್ಷ ಮತ್ತು ಕಾಳಜಿಯ ಭಾವನೆಗಳಿಂದ ತುಂಬಿದ ಸಹೋದರ-ಸಹೋದರಿ ಸಂಬಂಧವನ್ನು ಆಚರಿಸಲು ಪ್ರತಿ ವರ್ಷ ಏಪ್ರಿಲ್ 10 ರಂದು ಒಡಹುಟ್ಟಿದವರ ದಿನವನ್ನು ಆಚರಿಸಲಾಗುತ್ತದೆ. ಸಹೋದರ ಮತ್ತು ಸಹೋದರಿಯರ ಸಂಬಂಧವು ಸಾಕಷ್ಟು ಸ್ನೇಹತನದಿಂದ ಕೂಡಿದ  ಸಂಬಂಧವಾಗಿದೆ, ಅವರು ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಾರೆ.

ಸಹೋದರಿಯು ತನ್ನ ಸಹೋದರನನ್ನು ತಾಯಿಯಂತೆ ಆರೈಕೆ ಮಾಡಿ, ಆತನಿಗೆ ಪ್ರತಿ ತೊಂದರೆಯಲ್ಲಿ ಸಹಾಯ ಮಾಡಿದರೆ, ಸಹೋದರನು ತನ್ನ ಸಹೋದರಿಯನ್ನು ಜೀವನದ ಪ್ರತಿ ತಿರುವಿನಲ್ಲಿಯೂ ರಕ್ಷಿಸುತ್ತಾನೆ.ಹೀಗಾಗಿ ಒಡಹುಟ್ಟಿದವರ ದಿನವನ್ನು ಪ್ರಪಂಚದ ಎಲ್ಲಾ ಒಡಹುಟ್ಟಿದವರ ಅವಿನಾಭಾವ ಸಂಬಂಧಕ್ಕೆ ಸಮರ್ಪಿಸಲಾಗಿದೆ. ವಿಶ್ವದ ಎಲ್ಲಾ ಸಂಬಂಧಗಳಲ್ಲಿ ಸಹೋದರ-ಸಹೋದರಿ ಸಂಬಂಧವು ವಿಭಿನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಬಾಲ್ಯದಲ್ಲಿ ಗೊಂಬೆಗಳ ಜಗಳದಿಂದ ಹಿಡಿದು ಅಕ್ಕನ ಮದುವೆಯವರೆಗೆ ಅಣ್ಣ-ತಂಗಿಯರ ಬಾಂಧವ್ಯದಲ್ಲಿ ಅನೇಕ ಸುಂದರ ಕ್ಷಣಗಳು ಸುಂದರ ನೆನಪುಗಳಾಗುತ್ತವೆ. ಈ ಸಂಬಂಧದಲ್ಲಿ ಸಣ್ಣ ವಿಷಯಕ್ಕೆ ಕೋಪಗೊಳ್ಳುವುದು ತುಂಬಾ ಸಾಮಾನ್ಯವಾಗಿದೆ.

ಸಿಬ್ಲಿಂಗ್ ಡೇ ಇತಿಹಾಸ
ನಾವು ಒಡಹುಟ್ಟಿದವರ ದಿನದ ಇತಿಹಾಸವನ್ನು ನೋಡಿದರೆ, ಇದು 10 ಏಪ್ರಿಲ್ 1997 ರಂದು ಅಮೆರಿಕದಲ್ಲಿ ಪ್ರಾರಂಭವಾಯಿತು. ಕ್ಲೌಡಿಯಾ ಎವರ್ಟ್ ಈ ದಿನವನ್ನು ಆಚರಿಸುವ ಕಲ್ಪನೆಯನ್ನು ನೀಡಿದ್ದು ಮಾತ್ರವಲ್ಲದೆ ಅವರು ಸಿಬ್ಲಿಂಗ್ ಫೌಂಡೇಶನ್ ಅನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ, ಇದನ್ನು ಯುಎಸ್ ಕಾಂಗ್ರೆಸ್ ಒಪ್ಪಿಕೊಂಡಿತು. ಅಂದಿನಿಂದ, ಪ್ರತಿ ವರ್ಷ ಏಪ್ರಿಲ್ 10 ರಂದು ಒಡಹುಟ್ಟಿದವರ ದಿನವನ್ನು ಆಚರಿಸಲಾಗುತ್ತದೆ. ಬಾಲ್ಯದಲ್ಲಿ ನಿಧನರಾದ ತನ್ನ ಸಹೋದರ ಅಲನ್ ಮತ್ತು ಸಹೋದರಿ ಲಿಸ್ಟ್ ಅವರ ಗೌರವಾರ್ಥವಾಗಿ ಕ್ಲೌಡಿಯಾ ಈ ದಿನವನ್ನು ಸ್ಥಾಪಿಸಿದ ಎನ್ನಲಾಗುತ್ತದೆ. 

ಇದನ್ನೂ ಓದಿ-The Pope Answers: 'ಸೆಕ್ಸ್ ಒಂದು ಸುಂದರ ಸಂಗತಿ' ಎಂಬ ಪೋಪ್ ಹೇಳಿಕೆಯಿಂದ ಭಾರಿ ಚರ್ಚೆ ಹುಟ್ಟಿಕೊಂಡಿದೆ

ಸಿಬ್ಲಿಂಗ್ ಡೇ ಫೌಂಡೇಷನ್
ಇವರ್ಟ್ ತನ್ನ ಒಡಹುಟ್ಟಿದವರ ಮರಣಾನಂತರ ಸಿಬ್ಲಿಂಗ್ ಡೇ ಫೌಂಡೇಶನ್ ಅನ್ನು ಸ್ಥಾಪಿಸುತ್ತಾರೆ. ಅಂದಿನಿಂದ ಅವರು ಸಿಬ್ಲಿಂಗ್ ಡೇ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಇದನ್ನು 1997 ರಲ್ಲಿ ಸ್ಥಾಪಿಸಲಾಯಿತು ಮತ್ತು 1999 ರಲ್ಲಿ ಲಾಭರಹಿತ ಸ್ಥಾನಮಾನವನ್ನು ಪಡೆದುಕೊಂಡಿತು.

ಇದನ್ನೂ ಓದಿ-Guinness Record: 32 ವರ್ಷಗಳಲ್ಲಿ 100 ಕ್ಕೂ ಅಧಿಕ ವಿವಾಹಗಳನ್ನು ಮಾಡಿಕೊಂಡ ವ್ಯಕ್ತಿ, ಒಬ್ಬಳಿಗೂ ವಿಚ್ಛೇದನೆ ನೀಡಿಲ್ಲವಂತೆ!

ಅಮೆರಿಕದ ಹಲವು ರಾಜ್ಯಗಳಲ್ಲಿ ಆಚರಿಸಲಾಗುತ್ತದೆ
1998 ರಿಂದ ಅಮೆರಿಕಾದ ಒಟ್ಟು 49 ರಾಜ್ಯಗಳಲ್ಲಿ ಒಡಹುಟ್ಟಿದವರ ದಿನವನ್ನು ಆಚರಿಸಲಾಗುತ್ತದೆ, ಆದರೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಈ ದಿನಕ್ಕೆ ಜಯಿಂಟ್ ರೆಸಲ್ಯೂಷನ್ ದೊರೆತಿಲ್ಲ. ಒಡಹುಟ್ಟಿದವರ ದಿನವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾನ್ಯತೆ ಪಡೆದ ರಜಾದಿನವನ್ನಾಗಿ ಮಾಡಲು ಎವರ್ಟ್ಸ್ ಫೌಂಡೇಶನ್ ಶ್ರಮಿಸುತ್ತಿದೆ. ಒಡಹುಟ್ಟಿದವರ ದಿನದ ಪ್ರತಿಷ್ಠಾನವು ವಿಶ್ವಸಂಸ್ಥೆಯ ಸಹಾಯದಿಂದ ಈ ದಿನವನ್ನು ಅಂತರರಾಷ್ಟ್ರೀಯ ರಜಾದಿನವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಬರಾಕ್ ಒಬಾಮಾ ಸೇರಿದಂತೆ ಯುಎಸ್ ಮಾಜಿ ಅಧ್ಯಕ್ಷರು ಒಡಹುಟ್ಟಿದವರ ನಡುವಿನ ಬಾಂಧವ್ಯದ ಮಹತ್ವವನ್ನು ಮತ್ತು ಈ ವಿಶೇಷ ಬಂಧವನ್ನು ಆಚರಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News