ಭಾರತವನ್ನು ವಿಶ್ವದ ಗುರು ಎಂದ ಉಕ್ರೇನ್ ಉಪ ವಿದೇಶಾಂಗ ಸಚಿವೆ..!

ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಮಧ್ಯೆ, ಉಕ್ರೇನ್ ಉಪ ವಿದೇಶಾಂಗ ಸಚಿವೆ ಎಮಿನ್ ಡಿಜೆಪ್ಪಾರ್ ಅವರು ಸೋಮವಾರದಂದು ಭಾರತವನ್ನು ವಿಶ್ವದ ಗುರು ಎಂದು ಕರೆದಿದ್ದಾರೆ.

Written by - Manjunath N | Last Updated : Apr 11, 2023, 12:40 AM IST
  • ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸುತ್ತದೆ.
  • ವಿಶೇಷವಾಗಿ ಅರ್ಥಶಾಸ್ತ್ರ,ಇಂಧನ ಮತ್ತು ಪರಮಾಣು ನೀತಿಯ ಕ್ಷೇತ್ರಗಳಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸುತ್ತದೆ
ಭಾರತವನ್ನು ವಿಶ್ವದ ಗುರು ಎಂದ ಉಕ್ರೇನ್ ಉಪ ವಿದೇಶಾಂಗ ಸಚಿವೆ..! title=

ಹೊಸದಿಲ್ಲಿ: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಮಧ್ಯೆ, ಉಕ್ರೇನ್ ಉಪ ವಿದೇಶಾಂಗ ಸಚಿವೆ ಎಮಿನ್ ಡಿಜೆಪ್ಪಾರ್ ಅವರು ಸೋಮವಾರದಂದು ಭಾರತವನ್ನು ವಿಶ್ವದ ಗುರು ಎಂದು ಕರೆದಿದ್ದಾರೆ.ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅವರು, ಜಾಗತಿಕವಾಗಿ ನವದೆಹಲಿಯು ವಿಶ್ವಾದ್ಯಂತ ಶಾಂತಿ ಮತ್ತು ನ್ಯಾಯವನ್ನು ಉತ್ತೇಜಿಸುವಲ್ಲಿ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಮಿನ್ ಝೆಪ್ಪಾರ್, "ಜಾಗತಿಕವಾಗಿ ಭಾರತ ನಿಜವಾಗಿಯೂ ವಿಶ್ವ ಗುರು ಎಂದು ಹೇಳಿದರು.

ಇದನ್ನೂ ಓದಿ: "ನಾಯಕರನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ಬಿಜೆಪಿಯಿಂದ ಪಟ್ಟಿ ಬಿಡುಗಡೆ ವಿಳಂಬ"

ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸುತ್ತದೆ,ವಿಶೇಷವಾಗಿ ಅರ್ಥಶಾಸ್ತ್ರ,ಇಂಧನ ಮತ್ತು ಪರಮಾಣು ನೀತಿಯ ಕ್ಷೇತ್ರಗಳಲ್ಲಿ ಭಾರತವು ಸಕ್ರಿಯ ಪಾತ್ರವನ್ನು ವಹಿಸುತ್ತದೆ ಎಂದು ಝೆಪ್ಪರ್ ಆಶಿಸಿದರು.ರಷ್ಯಾ-ಉಕ್ರೇನ್ ಸಂಘರ್ಷವು ನ್ಯಾಟೋ ಅಥವಾ ಯುನೈಟೆಡ್ ಸ್ಟೇಟ್ಸ್ ಬಗ್ಗೆ ಅಲ್ಲ,ಆದರೆ ನ್ಯಾಯದ ಬಗ್ಗೆ ಎಂದು ಹೇಳಿದರು. ಇನ್ನೂ ಮುಂದುವರೆದು ಮಾತನಾಡಿ ಅವರು ರಷ್ಯಾ ನನ್ನ ದೇಶದ ಅಸ್ತಿತ್ವವನ್ನು ಪ್ರಶ್ನಿಸುತ್ತಿದೆ.ತಮ್ಮ 1,500 ವರ್ಷಗಳ ಇತಿಹಾಸದಲ್ಲಿ ಬೇರೆ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದರು.

ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದಾರೆ.ಭಾರತವು ಮುಖ್ಯವಾಗಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿಲ್ಲ ಮತ್ತು ಬಿಕ್ಕಟ್ಟನ್ನು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: CRPF Exam: ಕನ್ನಡ ನಿರ್ಲಕ್ಷ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ, ಮರು ಪರೀಕ್ಷೆಗೆ ಆಗ್ರಹ

ಭಾರತ-ರಷ್ಯಾ ಇಂಧನ ಸಂಬಂಧಗಳ ಬಗ್ಗೆ ಕೇಳಿದಾಗ, ಉಕ್ರೇನ್‌ನ ಮೊದಲ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿಯಾಗಿರುವ ಡಿಜೆಪ್ಪರ್, ಯಾವುದೇ ಒಂದು ದೇಶದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ಇಂಧನ ಮತ್ತು ಮಿಲಿಟರಿ ಒಪ್ಪಂದಗಳು ಸೇರಿದಂತೆ ತನ್ನ ಸಂಪನ್ಮೂಲಗಳನ್ನು ವೈವಿಧ್ಯಗೊಳಿಸಲು ನವದೆಹಲಿಯನ್ನು ಒತ್ತಾಯಿಸಿದರು.ಇತರ ದೇಶಗಳೊಂದಿಗಿನ ಆರ್ಥಿಕ ಸಂಬಂಧಗಳಲ್ಲಿ ಭಾರತಕ್ಕೆ ಸೂಚನೆ ನೀಡುವ ಸ್ಥಿತಿಯಲ್ಲಿ ನಾವು ಇಲ್ಲ" ಎಂದು ಅವರು ಹೇಳಿದರು.

ಭಾರತವು ತನ್ನ ಶಕ್ತಿ ಸಂಪನ್ಮೂಲಗಳು, ಮಿಲಿಟರಿ ಒಪ್ಪಂದಗಳು ಮತ್ತು ರಾಜಕೀಯ ಸಂವಹನಗಳನ್ನು ವೈವಿಧ್ಯಗೊಳಿಸುವಲ್ಲಿ ಪ್ರಾಯೋಗಿಕವಾಗಿರಬೇಕು ಎಂದು ಅವರು ಹೇಳಿದರು.ಉಕ್ರೇನ್ ಸಂಘರ್ಷ ಆರಂಭವಾದ ನಂತರ ಉಕ್ರೇನ್ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News