Google Chrome OS ನ ಹಳೆ ಆವೃತ್ತಿ ಅಪಾಯಕಾರಿ ತಾಂತ್ರಿಕ ದೋಷಗಳನ್ನು ಹೊಂದಿದೆ ಎಂದು ಸರ್ಕಾರಿ ಸಂಸ್ಥೆ ಸರ್ಟ್-ಇನ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ದೋಷದ ಲಾಭವನ್ನು ಪಡೆದುಕೊಳ್ಳುವ ಮೂಲಕ, ಹ್ಯಾಕರ್ಗಳು ನಿಮ್ಮ ಕಂಪ್ಯೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ನಿಮ್ಮ ಖಾಸಗಿ ದತ್ತಾಂಶವನ್ನು ಪ್ರವೇಶಿಸಬಹುದು. ನಿಮ್ಮ ಸಿಸ್ಟಂನಲ್ಲಿ ಲಭ್ಯವಿರುವ ಡತಾಂಶವನ್ನು ಸುರಕ್ಷಿತವಾಗಿಡಲು ನೀವು ಬಯಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ನಿಮ್ಮ Chrome ಬ್ರೌಸರ್ ಅನ್ನು ಅಪ್ಡೇಟ್ ಮಾಡಿ.(Technology News In Kannada)
CyberDost, ಮೊದಲು Twitter ನಲ್ಲಿ ಮತ್ತು ಈಗ X ನಲ್ಲಿ, ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ನಡೆಸುತ್ತಿರುವ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಆಗಿದೆ. ಇಂಟರ್ನೆಟ್ನಲ್ಲಿ ಸುರಕ್ಷಿತವಾಗಿರಲು ಇದು ನಮಗೆ ಮಾರ್ಗಗಳನ್ನು ಹೇಳುತ್ತದೆ. CyberDost ಮೂಲಕ ನಿಮ್ಮ ಡೇಟಾ, ಮೊಬೈಲ್, ಕಂಪ್ಯೂಟರ್ ಮತ್ತು ಖಾತೆಗಳನ್ನು (ಬ್ಯಾಂಕ್ ಖಾತೆಗಳನ್ನು ಒಳಗೊಂಡಂತೆ) ಕಳ್ಳರಿಂದ ಹೇಗೆ ರಕ್ಷಿಸುವುದು ಎಂಬುದನ್ನು ನೀವು ಕಲಿಯಬಹುದು. ಇತ್ತೀಚೆಗೆ CyberDost ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ವಿಶೇಷ ಸಲಹೆಯನ್ನು ಹಂಚಿಕೊಂಡಿದೆ. ನಿಮ್ಮ ಫೋನ್ ಅನ್ನು ವೈರಸ್ಗಳು ಮತ್ತು ಅಪಾಯಕಾರಿ ಪ್ರೋಗ್ರಾಂಗಳಿಂದ (ಮಾಲ್ವೇರ್) ರಕ್ಷಿಸಲು, ನಿಮ್ಮ ಫೋನ್ನಲ್ಲಿ ನೀವು "Google Play Protect" ಅನ್ನು ಆನ್ ಮಾಡಬೇಕು ಎಂದು ಸಲಹೆ ನೀಡಿದೆ.
Effects of Cell Phone: ದಿನಕ್ಕೆ 4 ಗಂಟೆಗೂ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವುದರಿಂದ ಹೆಚ್ಚು ಒತ್ತಡ, ಆತ್ಮಹತ್ಯಾ ಯೋಚನೆ, ಮಾದಕ ದ್ರವ್ಯ ಸೇವನೆ ಮಾಡುವುದು ಕಂಡು ಬಂದಿದೆ. ಕಡಿಮೆ ಬಾರಿ ಫೋನ್ ಬಳಕೆ ಮಾಡುವವರಲ್ಲಿ ಇಂತಹ ಯೋಚನೆಗಳು ಕಡಿಮೆ ಎಂಬುದು ಬಹಿರಂಗವಾಗಿದೆ.
BHIM ಪಾವತಿಗಳ ಅಪ್ಲಿಕೇಶನ್ ಪ್ರಸ್ತುತ ₹750 ವರೆಗೆ ಕ್ಯಾಶ್ಬ್ಯಾಕ್ ನೀಡುತ್ತಿದೆ, ಆದರೆ ಅದನ್ನು ಪಡೆಯಲು ಕೆಲವೇ ವಾರಗಳು ಮಾತ್ರ ಉಳಿದಿವೆ. ಈ ರಿಯಾಯಿತಿಯು Google Pay ಆರಂಭದಲ್ಲಿ ಮಾಡಿದಂತೆಯೇ ಹೊಸ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನವಾಗಿದೆ. ಆದರೆ ಇದಕ್ಕಾಗಿ ಷರತ್ತುಗಳನ್ನು ಪೂರೈಸಬೇಕು. ಹೆಚ್ಚುವರಿಯಾಗಿ, 1% ಹೆಚ್ಚುವರಿ ಕ್ಯಾಶ್ಬ್ಯಾಕ್ ಸಹ ಇದೆ.
BHIM ಕ್ಯಾಶ್ಬ್ಯಾಕ್ ಕೊಡುಗೆಗಳು
Wi-Fi Password: ಹಲವು ವೇಳೆ ಎಷ್ಟೇ ಪ್ರಯತ್ನಿಸಿದರೂ ವೈ-ಫೈ ಪಾಸ್ವರ್ಡ್ ನೆನಪೇ ಆಗುವುದಿಲ್ಲ. ಆದರೆ, ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Kinetic Green e-Luna: ಹಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ಕೈನೆಟಿಕ್ ಗ್ರೀನ್ ಇ-ಲೂನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬಾರಿ ಕಂಪನಿಯು ಈ ಬೈಕ್ ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.
Apple iPhone Update: ಆಪಲ್ ಕಂಪನಿಯು ಶೀಘ್ರದಲ್ಲೇ ಹೊಸ ಅಂಡರ್ವಾಟರ್ ಮೋಡ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ತನ್ಮೂಲಕ, ಐಫೋನ್ ಬಳಕೆದಾರರು ನೀರಿನಲ್ಲಿಯೂ ಕೂಡ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಪೇಟೆಂಟ್ನಲ್ಲಿ ಹೊಸ ಮೋಡ್ ಫಸ್ಟ್ ಲುಕ್ ಗಮಹಿಸಲಾಗಿದ್ದು, ಈ ಹೊಸ ವೈಶಿಷ್ಟ್ಯವನ್ನು iPhone 16 ಸರಣಿಯ ಫೋನ್ಗಳಲ್ಲಿ ಕಾಣುವ ಸಾಧ್ಯತೆಯನ್ನು ವರ್ತಿಸಲಾಗಿದೆ. (Technology News In Kannada)
Google Maps News Feature: ಗೂಗಲ್ ಮ್ಯಾಪ್ಸ್ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತು ಐಒಎಸ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಇತ್ತೀಚಿನ ನವೀಕರಣಗಳೊಂದಿಗೆ ಇದನ್ನು ಹೊರತರಲಾಗುತ್ತಿದೆ. ಅದರಿಂದ ಇದೀಗ ನೀವು ಗೂಗಲ್ ಮ್ಯಾಪ್ಸ್ ನಲಿ ಹವಾಮಾನ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. (Technology News In Kannada)
Whatsapp AI-Powered Customer Support Feature: ಜನಪ್ರಿಯ ಮೆಟಾ-ಮಾಲೀಕತ್ವದ ಚಾಟ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ವಾಟ್ಸಾಪ್ ಕಂಪನಿಯು ಬಳಕೆದಾರರಿಗೆ ಮತ್ತೊಂದು ಅದ್ಭುತ AI- ಚಾಲಿತ ಗ್ರಾಹಕ ಬೆಂಬಲ ವೈಶಿಷ್ಟ್ಯವನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
Harmful Apps: ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಕೆಲವು ಅಪ್ಲಿಕೇಶನ್ಗಳು ಅಪಾಯಕಾರಿ ಮಾಲ್ವೇರ್ಗೆ ಲಿಂಕ್ ಮಾಡಿರುವುದನ್ನು ಭದ್ರತಾ ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯಬಹುದು ಮತ್ತು ಫೋನ್ ಕರೆಗಳನ್ನು ರೆಕಾರ್ಡ್ ಮಾಡಬಹುದು ಎಂದು ತೋರುತ್ತದೆ. ಆದ್ದರಿಂದ, ನೀವು ಈಗಾಗಲೇ ಈ ಮಾಲ್ವೇರ್ ಅನ್ನು ಹರಡುವ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ, ತಕ್ಷಣವೇ ಅವುಗಳನ್ನು ನಿಮ್ಮ ಸ್ಮಾರ್ಟ್ಫೋನ್ನಿಂದ ಅನ್ಇನ್ಸ್ಟಾಲ್ ಮಾಡಲು ಸೂಚಿಸಲಾಗುತ್ತದೆ.
Smartphone Overheating Problem: ಪ್ರಸ್ತುತ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಈ ಸ್ಮಾರ್ಟ್ಫೋನ್ ಓವರ್ ಹೀಟ್ ಆಗುವುದನ್ನು ನೀವು ಗಮನಿಸಿರಬಹುದು. ಆದರೆ, ಸ್ಮಾರ್ಟ್ಫೋನ್ ಅತಿಯಾಗಿ ಹೀಟ್ ಆಗಲು ನಮ್ಮ ಸಾಮಾನ್ಯ ತಪ್ಪುಗಳು ಕಾರಣ ಎಂದು ನಿಮಗೆ ತಿಳಿದಿದೆಯೇ?
Tech Tip: ಹಲವು ಬಾರಿ ಸಾಕಷ್ಟು ಹಣ ಖರ್ಚು ಮಾಡಿದರೂ ಕೂಡ ಹಾನಿಗೊಳಗಾದ ನಮ್ಮ ನೆಚ್ಚಿನ ಮನೆಯ ಎಲೆಕ್ಟ್ರಾನಿಕ್ ವಸ್ತು ಸರಿಯಾಗಿ ದುರುಸ್ತಿಯಾಗುವುದಿಲ್ಲ ಮತ್ತು ಜನರು ಅದನ್ನು ದೋಷಯುಕ್ತವೆಂದು ಪರಿಗಣಿಸಿ ಎಸೆಯುತ್ತಾರೆ. ನೀವೂ ಕೂಡ ಅಂತಹ ವಸ್ತುವನ್ನು ಎಸೆಯುತ್ತಿದ್ದರೆ, ಹಾಗೆ ಮಾಡಬೇಡಿ. ಏಕೆಂದರೆ ಈ ಸಮಸ್ಯೆಗೆ ಪರಿಹಾರವನ್ನು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. (Technology News In Kannada)
Upcoming electric SUVs In India:ಮಾರುತಿ ಸುಜುಕಿ ಇವಿಎಕ್ಸ್, ಟಾಟಾ ಹ್ಯಾರಿಯರ್ ಇವಿ ಮತ್ತು ಮಹೀಂದ್ರಾ ಎಕ್ಸ್ಯುವಿ ಇ.8 ಸೇರಿದಂತೆ ಹೆಚ್ಚು ಕಾರುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.
Instagram Hidden Features: ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್ಟಾಗ್ರಾಮ್ ಕೂಡ ಒಂದು. ಮೆಟಾ ಮಾಲಿಕತ್ವದ ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಹಲವು ಹೊಸ ವೈಶಿಷ್ಟ್ಯಗಳು ಸೇರ್ಪಡೆಗೊಂಡಿವೆ. ನೀವೂ ಕೂಡ ಇನ್ಸ್ಟಾಗ್ರಾಮ್ನಲ್ಲಿ ಈ ವೈಶಿಷ್ಟ್ಯಗಳನ್ನು ಗಮನಿಸಿದ್ದೀರಾ!
Zuckerberg's position in the richest people list: ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಈಗ ಬಿಲ್ ಗೇಟ್ಸ್ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೆಟಾದ ಸ್ಟಾಕ್ ಬೆಲೆಯಲ್ಲಿ 22 ಪ್ರತಿಶತ ಏರಿಕೆಯ ಹಿನ್ನಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಇದು ಜುಕರ್ಬರ್ಗ್ ಅವರ ಸಂಪತ್ತನ್ನು $28 ಶತಕೋಟಿಗಿಂತ ಹೆಚ್ಚು ಹೆಚ್ಚಿಸಿದೆ.
Smartphone Tips: ಮೊಬೈಲ್ ಫೋನ್ಗಳಲ್ಲಿ ಬರುವ ಈ ಜಾಹೀರಾತುಗಳಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ಇಂದು ನಾವು ನಿಮಗೆ ಈ ಜಾಹೀರಾತುಗಳನ್ನು ಶಾಶ್ವತವಾಗಿ ನಿರ್ಬಂಧಿಸುವ ಒಂದು ಟ್ರಿಕ್ ಅನ್ನು ನಿಮಗೆ ಹೇಳಿಕೊಡಲಿದ್ದೇವೆ. (Technology News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.