Wi-Fi Password: ಇಂಟರ್ನೆಟ್ ಇಲ್ಲದೆ ನಮ್ಮ ಜೀವನ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಈ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ನಮ್ಮ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಇಂಟರ್ನೆಟ್ ಸಹಾಯದಿಂದ ಕೆಲವು ಕೆಲಸಗಳನ್ನು ನಾವಿರುವಲ್ಲಿಯೇ ಸುಲಭವಾಗಿ ಪೂರ್ಣಗೊಳಿಸಬಹುದು. ಸಾಮಾನ್ಯವಾಗಿ, ನಾವು ಅಧ್ಯಯನ, ಮನರಂಜನೆ, ಶಾಪಿಂಗ್ ಅಥವಾ ಯಾವುದೇ ಕೆಲಸಕ್ಕಾಗಿ ಗೂಗಲ್ ಅನ್ನು ಹುಡುಕುತ್ತೇವೆ. ಇದಕ್ಕೆ ಇಂಟರ್ನೆಟ್ ಬೇಕೇ ಬೇಕು.
ನಾವು ಫೋನ್ನಲ್ಲಿ ಕಾರ್ಯನಿರ್ವಹಿಸಲು ಇಂಟರ್ನೆಟ್ (ಫೋನ್ ಡಾಟಾ) ಸಾಕಾಗುತ್ತದೆ. ಆದರೆ, ಕಚೇರಿಯಲ್ಲಿ ಗಂಟೆಗಟ್ಟಲೆ ಕೆಲಸ ಮಾಡಲು, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ದೊಡ್ಡ ಸಾಫ್ಟ್ವೇರ್ ಅನ್ನು ಬಳಸಲು ಹೆಚ್ಚಿನ ವೇಗದ ಇಂಟರ್ನೆಟ್ ಅಗತ್ಯವಿರುವುದರಿಂದ ವೈ-ಫೈ ಬೇಕಾಗುತ್ತದೆ. ವೈ-ಫೈ ವೇಗದ ಇಂಟರ್ನೆಟ್ ಒದಗಿಸುವುದರಿಂದ ಆನ್ಲೈನ್ ನಲ್ಲಿ ಕೆಲಸಗಳನ್ನು ಸುಲಭವಾಗಿ ಮತ್ತು ವೇಗವಾಗಿ ಪೂರ್ಣಗೊಳಿಸಬಹುದು. ಹಾಗಾಗಿಯೇ, ಒಂದು ನಿಮಿಷ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೂ ನಾವು ತೊಂದರೆಗೆ ಒಳಗಾಗುತ್ತೇವೆ.
ಇದನ್ನೂ ಓದಿ- Kinetic Green: ಕೈನೆಟಿಕ್ ಗ್ರೀನ್ ಇ-ಲೂನಾ ಬಿಡುಗಡೆ ₹9.5ನಲ್ಲಿ ನೀಡುತ್ತೇ 110 ಮೈಲೇಜ್
ಹಲವು ವೇಳೆ ಎಷ್ಟೇ ಪ್ರಯತ್ನಿಸಿದರೂ ವೈ-ಫೈ ಪಾಸ್ವರ್ಡ್ ನೆನಪೇ ಆಗುವುದಿಲ್ಲ. ಪ್ರತಿಯೊಬ್ಬರೂ ಕೂಡ ಒಂದಲ್ಲಾ ಒಂದು ಸಮಯದಲ್ಲಿ ಪಾಸ್ವರ್ಡ್ ಮರೆತೇ ಇರುತ್ತಾರೆ. ಆದರೆ, ಈ ಬಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ನಿಮ್ಮ ಲ್ಯಾಪ್ಟಾಪ್ನಲ್ಲಿ ಸೇವ್ ಮಾಡಿರುವ ಪಾಸ್ವರ್ಡ್ ಅನ್ನು ನೀವು ಸುಲಭವಾಗಿ ಹೇಗೆ ಪತ್ತೆಹಚ್ಚಬಹುದು ಎಂಬ ಸುಲಭ ಟ್ರಿಕ್ ಅನ್ನು ನಾವು ನಿಮಗೆ ಹೇಳುತ್ತೇವೆ.
ಇದನ್ನೂ ಓದಿ- AI- ಚಾಲಿತ ಗ್ರಾಹಕ ಬೆಂಬಲ ವೈಶಿಷ್ಟ್ಯ ಪರಿಚಯಿಸಲು ಮುಂದಾದ ವಾಟ್ಸಾಪ್
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಮರೆತಿರುವ ವೈ-ಫೈ ಪಾಸ್ವರ್ಡ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು:
ಹಂತ 1: ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ವೈ-ಫೈಗೆ ಸಂಪರ್ಕಿಸಿ.
ಹಂತ 2: ಮೊದಲಿಗೆ Control Pannel ತೆರೆಯಿರಿ ಮತ್ತು ನೆಟ್ವರ್ಕ್ ಮತ್ತು ಹಂಚಿಕೆ ಕೇಂದ್ರದ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ View Network Status and Tasks ಮೇಲೆ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಸಾಧನವನ್ನು ಸಂಪರ್ಕಿಸಿರುವ ವೈ-ಫೈ ಅನ್ನು ಇಲ್ಲಿ ನೀವು ನೋಡುತ್ತೀರಿ.
ಹಂತ 5: ಪಾಸ್ವರ್ಡ್ ತಿಳಿಯಲು ವೈ-ಫೈ ನೆಟ್ವರ್ಕ್ ಮೇಲೆ ಕ್ಲಿಕ್ ಮಾಡಿ ಅಥವಾ ರೈಟ್ ಕ್ಲಿಕ್ ಮಾಡಿ.
ಹಂತ 6: ಕ್ಲಿಕ್ ಮಾಡಿದಾಗ ನೀವು Wi-Fi ಸ್ಥಿತಿಯ ಬಾಕ್ಸ್ ಅನ್ನು ನೋಡುತ್ತೀರಿ.
ಹಂತ 7: ಇಲ್ಲಿ ನೀಡಿರುವ ವೈರ್ಲೆಸ್ ಪ್ರಾಪರ್ಟೀಸ್ ಮೇಲೆ ಕ್ಲಿಕ್ ಮಾಡಿ.
ಹಂತ 8: ಇಲ್ಲಿ, ಸಂಪರ್ಕ ಮತ್ತು ಭದ್ರತೆ ಎಂಬ 2 ಆಯ್ಕೆಗಳು ಗೋಚರಿಸುತ್ತವೆ. ಇದರಲ್ಲಿ ಭದ್ರತೆಯ ಮೇಲೆ ಕ್ಲಿಕ್ ಮಾಡಿ.
ಹಂತ 9: ಈ ಬಾಕ್ಸ್ನಲ್ಲಿ ನೀವು ವೈ-ಫೈ ಭದ್ರತೆಯ ಹಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ.
ಹಂತ 10: ಇಲ್ಲಿ ನೀಡಿರುವ ನೆಟ್ವರ್ಕ್ ಸೆಕ್ಯುರಿಟಿ ಕೀಯಲ್ಲಿ ಡಾಟ್ ಫಾರ್ಮ್ಯಾಟ್ನಲ್ಲಿ ಪಾಸ್ವರ್ಡ್ ಅನ್ನು ಬರೆಯಲಾಗಿರುತ್ತದೆ.
ಹಂತ 11: ನೆಟ್ವರ್ಕ್ ಸೆಕ್ಯುರಿಟಿ ಕೀ ಕೆಳಗೆ, ಅಕ್ಷರಗಳನ್ನು ತೋರಿಸು ಆಯ್ಕೆಗಾಗಿ ಟಿಕ್ ಬಾಕ್ಸ್ ಬಟನ್ ಇರುತ್ತದೆ.
ಹಂತ 12: ಇಲ್ಲಿ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ವೈ-ಫೈ ಪಾಸ್ವರ್ಡ್ ಅನ್ನು ನೋಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.