Fruits To Control Blood Sugar : ಇಂದಿನ ಕಾಲದಲ್ಲಿ ಮಧುಮೇಹವು ಸಾಮಾನ್ಯ ಸಮಸ್ಯೆಯಾಗಿದೆ.ಈ ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ರೋಗಕ್ಕೆ ಇಂದು ಯುವಕರು, ಮಕ್ಕಳು ಸಹ ಬಲಿಯಾಗುತ್ತಿದ್ದಾರೆ.ನಾವು ಅನುಸರಿಸುತ್ತಿರುವ ತಪ್ಪು ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಕೆಟ್ಟ ಜೀವನಶೈಲಿಯೇ ಇದಕ್ಕೆ ಕಾರಣ.ಮಧುಮೇಹದ ಸಂದರ್ಭದಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.ಇದು ದೇಹಕ್ಕೆ ಮಾರಕವಾಗಬಹುದು. ಇದನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ,ದೇಹದ ಅನೇಕ ಪ್ರಮುಖ ಅಂಗಗಳಿಗೆ ಹಾನಿ ಮಾಡುತ್ತದೆ.ಯಾರಿಗಾದರೂ ಒಮ್ಮೆ ಈ ಕಾಯಿಲೆ ಬಂದರೆ ಅದನ್ನು ಬುಡ ಸಮೇತ ನಿರ್ಮೂಲನೆ ಮಾಡುವುದು ಕಷ್ಟ.ಔಷಧಿಗಳು, ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಮಾತ್ರ ಇದನ್ನು ನಿಯಂತ್ರಿಸಬಹುದು. ಇದಲ್ಲದೆ, ಕೆಲವು ಮನೆಮದ್ದುಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.ಮಧುಮೇಹಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯತ್ತ ಗಮನ ಹರಿಸದಿದ್ದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಔಷಧಿಗಳು ಸಹ ಸರಿಯಾಗಿ ಕೆಲಸ ಮಾಡುವುದಿಲ್ಲ.
ಮಧುಮೇಹ ರೋಗಿಗಳಿಗೆ ಹಣ್ಣು :
ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಹಣ್ಣುಗಳು ಸಿಹಿಯಾಗಿರುವುದರಿಂದ ಮಧುಮೇಹಿಗಳು ಈ ಹಣ್ಣುಗಳನ್ನು ಸೇವಿಸಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ.ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಯಾವ ಹಣ್ಣು ಹೆಚ್ಚು ಸಹಾಯಕ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : Health Tips: ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಲು ಪುರುಷರು ಈ ಆಹಾರ ಸೇವಿಸಿ
ಸೇಬು :
ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವವರಿಗೆ ಸೇಬು ತುಂಬಾ ಪ್ರಯೋಜನಕಾರಿ.ಸೇಬಿನಲ್ಲಿ ಅನೇಕ ವಿಶೇಷ ಪೋಷಕಾಂಶಗಳು ಕಂಡುಬರುತ್ತವೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಾಯ ಮಾಡುತ್ತದೆ.
ಕಿತ್ತಳೆ :
ಅಧಿಕ ರಕ್ತದ ಸಕ್ಕರೆ ರೋಗಿಗಳಿಗೆ ಕಿತ್ತಳೆ ಉತ್ತಮ ಆಯ್ಕೆ.ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಪ್ರತಿದಿನ ಕಿತ್ತಳೆ ಸೇವಿಸುವುದು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ : ಹಾರ್ಟ್ ಬ್ಲೋಕೆಜ್ ಅನ್ನು ಬಹಳ ಬೇಗ ತೆರವುಗೊಳಿಸುತ್ತದೆ ಈ ಎಲೆ ! ಒಮ್ಮೆ ಬಳಸಿ ನೋಡಿ
ಹಸಿರು ಮತ್ತು ಕಪ್ಪು ದ್ರಾಕ್ಷಿ :
ಕಪ್ಪು ಮತ್ತು ಹಸಿರು ದ್ರಾಕ್ಷಿಯನ್ನು ಸೇವಿಸುವುದು ಅಧಿಕ ರಕ್ತದ ಸಕ್ಕರೆ ರೋಗಿಗಳಿಗೂ ಒಳ್ಳೆಯದು.ದ್ರಾಕ್ಷಿಯನ್ನು ಪ್ರತಿದಿನ ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೇಹದಲ್ಲಿ ನೀರಿನ ಅಂಶವನ್ನು ಕೂಡಾ ಕಾಪಾಡುತ್ತದೆ.
ಪೇರಳೆ :
ಹಸಿರು ಮತ್ತು ತಿಳಿ ಹಳದಿ ಪೇರಳೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾತ್ರವಲ್ಲದೆ ಮಧುಮೇಹಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಾರಿನಂಶ ಸೇರಿದಂತೆ ಅನೇಕ ವಿಶೇಷ ಪೋಷಕಾಂಶಗಳು ಪೇರಳೆಯಲ್ಲಿ ಕಂಡುಬರುತ್ತವೆ.
ಇದನ್ನೂ ಓದಿ : ಯೂರಿಕ್ ಆಸಿಡ್ ಹರಳುಗಳನ್ನು ಕರಗಿಸಿ ಮೂತ್ರದ ಮೂಲಕ ಹೊರ ಹಾಕುತ್ತದೆ ಈ ಎಲೆ ! ಕಿಡ್ನಿ ಸ್ಟೋನ್ ಅನ್ನು ಕೂಡಾ ಪುಡಿ ಮಾಡುವುದು
ಬಾಳೆಹಣ್ಣು:
ಮಧುಮೇಹ ರೋಗಿಗಳು ಬಾಳೆಹಣ್ಣನ್ನು ಸೇವಿಸಬಾರದು ಎಂದು ಕೆಲವರು ಹೇಳುತ್ತಾರೆ.ಆದರೆ ಬಾಳೆಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ಬಾಳೆಹಣ್ಣನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.