Smartphone Tips: ಸ್ಮಾರ್ಟ್‌ಫೋನ್‌ ಅತಿಯಾಗಿ ಹೀಟ್ ಆಗಲು ನಿಮ್ಮ ಈ ತಪ್ಪುಗಳು ಕಾರಣವಿರಬಹುದು

Smartphone Overheating Problem:  ಪ್ರಸ್ತುತ ಬಹುತೇಕ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್‌ ಇದ್ದೇ ಇರುತ್ತದೆ. ಈ ಸ್ಮಾರ್ಟ್‌ಫೋನ್‌ ಓವರ್ ಹೀಟ್ ಆಗುವುದನ್ನು ನೀವು ಗಮನಿಸಿರಬಹುದು. ಆದರೆ, ಸ್ಮಾರ್ಟ್‌ಫೋನ್‌ ಅತಿಯಾಗಿ ಹೀಟ್ ಆಗಲು ನಮ್ಮ ಸಾಮಾನ್ಯ ತಪ್ಪುಗಳು ಕಾರಣ ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Feb 7, 2024, 07:49 AM IST
  • ನಮಗೆ ತಿಳಿದೋ/ತಿಳಿಯದೆಯೋ ಮಾಡುವ ಕೆಲವು ಸಾಮಾನ್ಯ ಕೆಲಸಗಳು ಸ್ಮಾರ್ಟ್‌ಫೋನ್‌ ಅತಿಯಾಗಿ ಬಿಸಿಯಾಗಲು ಅಥವಾ ಅದು ಸ್ಫೋಟಗೊಳ್ಳಲು ಕಾರಣವಾಗಬಹುದು.
  • ಅಂತಹ ತಪ್ಪುಗಳು ಯಾವುವು? ಸ್ಮಾರ್ಟ್‌ಫೋನ್‌ ಅತಿಯಾಗಿ ಬಿಸಿಯಾಗುವುದನ್ನು ತಡೆಯಲು ಎಂದು ಮಾಡಬೇಕು ಎಂದು ತಿಳಿಯೋಣ...
Smartphone Tips: ಸ್ಮಾರ್ಟ್‌ಫೋನ್‌ ಅತಿಯಾಗಿ ಹೀಟ್ ಆಗಲು ನಿಮ್ಮ ಈ ತಪ್ಪುಗಳು ಕಾರಣವಿರಬಹುದು  title=

Smartphone Overheating Problem: ಈ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಕೇವಲ ಕರೆ, ಸಂದೇಶಗಳಿಗಷ್ಟೇ ಸೀಮಿತವಾಗಿದ್ದ ಫೋನ್ ಇದೀಗ ಪ್ರತಿ ಕೆಲಸಕ್ಕೂ ತುಂಬಾ ಅಗತ್ಯವಾದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವ ವಿಷಯಗಳನ್ನು ನಮ್ಮ ಬೆರಳ ತುದಿಯಲ್ಲಿಯೇ ಲಭ್ಯವಾಗುವಂತೆ ಮಾಡಿರುವ ಸ್ಮಾರ್ಟ್‌ಫೋನ್‌ ಬ್ಯಾಂಕಿಂಗ್, ಕಚೇರಿ ಕೆಲಸಗಳು, ಗೇಮ್, ಮನರಂಜನೆ ಹೀಗೆ ವಿವಿಧ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದೆ. ಇಷ್ಟೆಲ್ಲಾ ಕೆಲಸ ನಿರ್ವಹಿಸುವ ಸ್ಮಾರ್ಟ್‌ಫೋನ್‌ ಬಿಸಿಯಾಗುವುದು ಸಾಮಾನ್ಯವೆ. ಆದರೆ, ಸ್ಮಾರ್ಟ್‌ಫೋನ್‌ ಅತಿಯಾಗಿ ಬಿಸಿಯಾಗುವುದು ತುಂಬಾ ಹಾನಿಕಾರಕವಾಗಿದೆ. ಇದು ಬ್ಯಾಟರಿ ಲೈಫ್ ಕಡಿಮೆ ಮಾಡುವುದರ ಜೊತೆಗೆ ಫೋನಿನ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಇದು ಫೋನ್ ಸ್ಫೋಟಗೊಳ್ಳುವ ಅಪಾಯಕ್ಕೂ ಕಾರಣವಾಗಬಹುದು. 

ನಮಗೆ ತಿಳಿದೋ/ತಿಳಿಯದೆಯೋ ಮಾಡುವ ಕೆಲವು ಸಾಮಾನ್ಯ ಕೆಲಸಗಳು ಸ್ಮಾರ್ಟ್‌ಫೋನ್‌ ಅತಿಯಾಗಿ ಬಿಸಿಯಾಗಲು ಅಥವಾ ಅದು ಸ್ಫೋಟಗೊಳ್ಳಲು ಕಾರಣವಾಗಬಹುದು.  ಅಂತಹ ತಪ್ಪುಗಳು ಯಾವುವು? ಸ್ಮಾರ್ಟ್‌ಫೋನ್‌ ಅತಿಯಾಗಿ ಬಿಸಿಯಾಗುವುದನ್ನು ತಡೆಯಲು ಎಂದು ಮಾಡಬೇಕು ಎಂಬುದನ್ನು ತಿಳಿಯೋಣ... 

ಸ್ಮಾರ್ಟ್‌ಫೋನ್‌ ಅತಿಯಾಗಿ ಬಿಸಿಯಾಗದಂತೆ ತಡೆಯಲು ಈ ತಪ್ಪುಗಳಾಗದಂತೆ ಇರಲಿ ಎಚ್ಚರ: 
* ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ: 

ನಮಗೆ ಅಗತ್ಯವಿದ್ದಾಗ ಅರ್ಥಾತ್ ಏನಾದರೂ ಕೆಲಸವಿದ್ದಾಗ ಸ್ಮಾರ್ಟ್‌ಫೋನ್‌ ಬಳಸಬೇಕು. ಕೆಲವೊಮ್ಮೆ ಮನರಂಜನೆ, ಗೇಮ್ ಗಾಗಿ ಫೋನ್ ಬಳಸುವುದು ತಪ್ಪೇನಲ್ಲ. ಆದರೂ, ದೀರ್ಘಕಾಲದವರೆಗೆ ಫೋನ್‌ನಲ್ಲಿ ಆಟಗಳನ್ನು ಆಡುತ್ತಿದ್ದರೆ ಅಥವಾ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರೆ ಸ್ಮಾರ್ಟ್‌ಫೋನ್‌ ಅತಿಯಾಗಿ ಹೀಟ್ ಆಗಬಹುದು. ಇವು ಫೋನ್‌ನ ಪ್ರೊಸೆಸರ್ ಮತ್ತು ಗ್ರಾಫಿಕ್ಸ್ ಕಾರ್ಡ್‌ನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುವುದರಿಂದ ಫೋನ್ ಅಧಿಕವಾಗಿ ಬಿಸಿಯಾಗುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ- ಫೋನ್ ಚಾರ್ಜ್ ಮಾಡುವಾಗ ನೆನಪಿರಲಿ 40-80 ನಿಯಮ

* ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವೇಳೆ ಮಾಡುವ ತಪ್ಪು: 
ನಮ್ಮಲ್ಲಿ ಕೆಲವರು ಫೋನ್ ಚಾರ್ಜ್ ಮಾಡುವಾಗಲೂ ಫೋನ್ ಅನ್ನು ಬಳಸುತ್ತಾರೆ. ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಆಗುತ್ತಿರುವಾಗ ಅದನ್ನು ಬಳಸಬೇಡಿ. ಚಾರ್ಜ್ ಮಾಡುವಾಗ ಫೋನ್ ಅನ್ನು ಬಳಸುವುದರಿಂದ ಅದರ ಬ್ಯಾಟರಿಯು ಹೆಚ್ಚು ಬಿಸಿಯಾಗಬಹುದು. ಕೆಲವೊಮ್ಮೆ ಇದು ಸ್ಫೋಟಕ್ಕೂ ಕಾರಣವಾಗಬಹುದು. 

* ತಪ್ಪಾದ ಚಾರ್ಜರ್ ಬಳಕೆ: 
ವಾಸ್ತವವಾಗಿ, ಫೋನ್ ಚಾರ್ಜ್ ಸ್ವಲ್ಪ ಕಡಿಮೆಯಾದರೂ ಸಾಕು ಅದನ್ನು ತಕ್ಷಣ ಚಾರ್ಜ್ ಮಾಡುವ ಅಭ್ಯಾಸ ನಮ್ಮಲ್ಲಿ ಕೆಲವರಿಗೆ ಇರುತ್ತದೆ. ಮಾತ್ರವಲ್ಲ, ಮೊಬೈಲ್ ಅನ್ನು ಸಿಕ್ಕ ಸಿಕ್ಕ ಚಾರ್ಜರ್ ಗಳಲ್ಲಿ ಚಾರ್ಜ್ ಮಾಡುತ್ತಿರುತ್ತಾರೆ. ಆದರೆ,  ಬೇರೆ ಯಾವುದೇ ಚಾರ್ಜರ್ ಅನ್ನು ಬಳಸುವುದರಿಂದ ಫೋನ್‌ನ ಬ್ಯಾಟರಿಯು ಹೆಚ್ಚು ಬಿಸಿಯಾಗಬಹುದು. ಇದನ್ನು ತಪ್ಪುಸಲು ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು, ಯಾವಾಗಲೂ ಅದರೊಂದಿಗೆ ಬರುವ ಚಾರ್ಜರ್ ಅನ್ನು ಬಳಸಿ.

* ತೀವ್ರ ಶಾಖದಲ್ಲಿ ಬಳಕೆ: 
ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿ ವಾತಾವರಣದಲ್ಲಿ ವಾಹನಗಳಲ್ಲಿ ಇಡಬೇಡಿ. ವಿಪರೀತ ಶಾಖದಲ್ಲಿ ಫೋನ್ ಅನ್ನು ಬಳಸುವುದರಿಂದ ಫೋನ್ ಬ್ಯಾಟರಿ ಹೆಚ್ಚು ಹೀಟ್ ಆಗುತ್ತದೆ. 

* ಅಪ್ಡೇಟ್ ಮಾಡದಿರುವುದು: 
ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆಗಾಗ್ಗೆ ಅಪ್ಡೇಟ್ ಮಾಡದಿರುವುದು ಕೂಡ ಫೋನ್ ಅಧಿಕವಾಗಿ ಹೀಟ್ ಆಗಲು ಕಾರಣವಿರಬಹುದು. ಇದನ್ನು ತಪ್ಪಿಸಲು ಸ್ಮಾರ್ಟ್‌ಫೋನ್‌ನ ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಶನ್‌ಗಳನ್ನು ಯಾವಾಗಲೂ ಅಪ್ಡೇಟ್ ಮಾಡುವುದು ಕೂಡ ಅತ್ಯಗತ್ಯ. 

ಇದನ್ನೂ ಓದಿ- Smartphone Hang Problem: ಪದೇ ಪದೇ ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

* ಕವರ್ ಬಳಕೆ: 
ಸ್ಮಾರ್ಟ್‌ಫೋನ್ ರಕ್ಷಣೆಗೆ ಫೋನ್ ಕವರ್ ಬಳಕೆ ಅಗತ್ಯವೇ. ಆದರೂ, ಸ್ಮಾರ್ಟ್‌ಫೋನ್‌ಗೆ ಯಾವಾಗಲೂ ಸರಿಯಾದ ಕವರ್ ಬಳಸಿ. ಯಾವುದಾದರೂ ದಪ್ಪ ಅಥವಾ ಕಳಪೆ ಗುಣಮಟ್ಟದ ಕವರ್ ಫೋನ್ ಬಳಸುವುದರಿಂದ ಫೋನ್ ಬಳಸುವಾಗ ಅದರ ಶಾಖ ಹೆಚ್ಚಾಗಬಹುದು. 

* ವೈರಸ್‌ಗಳು ಮತ್ತು ಮಾಲ್‌ವೇರ್ ಅಪಾಯ: 
ವೈರಸ್‌ಗಳು ಮತ್ತು ಮಾಲ್‌ವೇರ್‌ಗಳು ಫೋನ್‌ನ ಪ್ರೊಸೆಸರ್‌ನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು, ಇದು ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಇದನ್ನು ತಪ್ಪಿಸಲು ವೈರಸ್‌ಗಳು ಮತ್ತು ಮಾಲ್‌ವೇರ್‌ಗಳಿಂದ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಿ. 

* ಹಿನ್ನೆಲೆ ಅಪ್ಲಿಕೇಶನ್‌ಗಳು: 
ಕೆಲವೊಮ್ಮೆ ನಾವು ಬಳಸದಿದ್ದರೂ ಸಹ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿರುತ್ತೇವೆ. ಇವುಗಳನ್ನು ನಾವು ಬಳಸದೇ ಇದ್ದರೂ ಸಹ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್‌ಗಳು ಫೋನ್‌ನ ಪ್ರೊಸೆಸರ್‌ನ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಹಾಗಾಗಿ, ಫೋನ್ ಅತಿಯಾಗಿ ಹೀಟ್ ಆಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News