ಒಂದೇ ಸಮನೆ ಅಗ್ಗವಾಯಿತು Xiaomiಯ ಅತ್ಯಂತ ದುಬಾರಿ ಫೋನ್ !80 ಸಾವಿರ ಬೆಲೆಯ ಫೋನಿನ ಈಗಿನ ದರ ಇಷ್ಟೇ !

ಈ ಫೋನಿನ ಬೆಲೆಯನ್ನು  5,000 ರೂಪಾಯಿಯಷ್ಟು ಕಡಿ ಮಾಡಲಾಗಿದೆ. ಈ ಬೆಲೆ ಕಡಿತದ ನಂತರ ಇದೀಗ ಈ ಫೋನ್  ಕೇವಲ 74,999  ರೂ. ಗೆ ಖರೀದಿಸಬಹುದು.

Written by - Ranjitha R K | Last Updated : Feb 7, 2024, 03:44 PM IST
  • Xiaomi 13 Pro ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದಲ್ಲಿ ಬಿಡುಗಡೆ
  • ಈ ಫೋನ್ ಬೆಲೆಯಲ್ಲಿ ಭಾರೀ ಕಡಿತ
  • ಅಗ್ಗವಾಗಿದೆ ದುಬಾರಿ ಫೋನ್
ಒಂದೇ ಸಮನೆ ಅಗ್ಗವಾಯಿತು Xiaomiಯ ಅತ್ಯಂತ ದುಬಾರಿ ಫೋನ್ !80 ಸಾವಿರ ಬೆಲೆಯ  ಫೋನಿನ ಈಗಿನ ದರ ಇಷ್ಟೇ ! title=

ಬೆಂಗಳೂರು : Xiaomi ತನ್ನ ಅತ್ಯಂತ ಶಕ್ತಿಶಾಲಿ ಫೋನ್ Xiaomi 13 Pro ಅನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತು. ಈಗ ಅದರ ಬೆಲೆ  5,000 ರೂಪಾಯಿಯಷ್ಟು ಕಡಿಮೆಯಾಗಿದೆ. ಈ ಫೋನ್ Snapdragon 8 Gen 2 ಪ್ರೊಸೆಸರ್ ಮತ್ತು ಹೊಸ Android 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಲೈಕಾ ಸಹಯೋಗದಲ್ಲಿ ತಯಾರಿಸಲಾದ ಅತ್ಯುತ್ತಮ ಕ್ಯಾಮೆರಾ ಮತ್ತು 120W ವೇಗದಲ್ಲಿ ಫೋನ್ ಚಾರ್ಜ್ ಮಾಡುವ ಸೌಲಭ್ಯ ಇದರ ವಿಶೇಷತೆಯಾಗಿದೆ. 

Xiaomi 13 Pro ಬೆಲೆ ಕಡಿತ : 
Xiaomi 13 Pro ಸ್ಮಾರ್ಟ್‌ಫೋನ್ ಈ ಹಿಂದೆ  79,999 ರೂ.ಗೆ ಲಭ್ಯವಿತ್ತು. ಆದರೆ ಈಗ ಅದರ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಈ ಫೋನಿನ ಬೆಲೆಯನ್ನು  5,000 ರೂಪಾಯಿಯಷ್ಟು ಕಡಿ ಮಾಡಲಾಗಿದೆ. ಈ ಬೆಲೆ ಕಡಿತದ ನಂತರ ಇದೀಗ ಈ ಫೋನ್  ಕೇವಲ 74,999  ರೂ. ಗೆ ಖರೀದಿಸಬಹುದು.ಈ ಫೋನ್ 12GB RAM ಮತ್ತು 256GB  ಸ್ಟೋರೇಜ್ ನೊಂದಿಗೆ ಬರುತ್ತದೆ. ಫಾಸ್ಟ್ ಪ್ರೊಸೆಸರ್ ಮತ್ತು ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿಯೂ ಈ ಫೋನಿನ ಹೊಸ ಬೆಲೆ ಗೋಚರಿಸುತ್ತದೆ.

ಇದನ್ನೂ ಓದಿ : AI- ಚಾಲಿತ ಗ್ರಾಹಕ ಬೆಂಬಲ ವೈಶಿಷ್ಟ್ಯ ಪರಿಚಯಿಸಲು ಮುಂದಾದ ವಾಟ್ಸಾಪ್

Xiaomi 13 Pro ವಿಶೇಷಣಗಳು :
Xiaomi 13 Pro 6.73 ಇಂಚುಗಳ ದೊಡ್ಡ ಮತ್ತು ಪ್ರಕಾಶಮಾನವಾದ ಡಿಸ್ಪ್ಲೇಯನ್ನು  ಹೊಂದಿದೆ. ಇದು ಅತ್ಯಂತ ಸ್ಪಷ್ಟ ಮತ್ತು ಸುಂದರವಾದ ಚಿತ್ರಗಳನ್ನು ತೋರಿಸುತ್ತದೆ (1440x3200 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ). ಇದು ಸ್ಮೂತ್ ಸ್ಕ್ರೀನ್ ಹೊಂದಿದ್ದು,  (120Hz ವರೆಗೆ ರಿಫ್ರೆಶ್ ರೇಟ್ ) ಸೂರ್ಯನ ಬೆಳಕಿನಲ್ಲಿಯೂ ಗೋಚರಿಸುವಷ್ಟು ಪ್ರಕಾಶಮಾನವಾಗಿರುತ್ತದೆ (1900 nits ಪೀಕ್ ಬ್ರೈಟ್ ನೆಸ್ ). ಪರದೆಯ ಮೀ ಸ್ಕ್ರಾಚ್ ಆಗದಂತೆ ತಡೆಯಲು ಗೊರಿಲ್ಲಾ ಗ್ಲಾಸ್ ಅನ್ನು ಬಳಸಲಾಗಿದೆ.

Xiaomi 13 Pro ಫೋನ್ ಅತ್ಯಂತ ಫಾಸ್ಟ್ ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು "Snapdragon 8 Generation 2" ಎಂದು ಕರೆಯಲಾಗುತ್ತದೆ. ಅಲ್ಲದೆ, ಇದು 12GB RAM ಅನ್ನು ಹೊಂದಿದೆ, ಇದರಿಂದ ನೀವು ಯಾವುದೇ ಸಮಸ್ಯೆ ಇಲ್ಲದೆ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್‌ಗಳನ್ನು ಚಲಾಯಿಸಬಹುದು. ಇದು 256GB ಸ್ಟೋರೇಜ್ ಹೊಂದಿದೆ. ಇದರಲ್ಲಿ ನೀವು ಸಾಕಷ್ಟು ಫೋಟೋಗಳು, ವೀಡಿಯೊಗಳು ಮತ್ತು ಹಾಡುಗಳನ್ನು ಇರಿಸಬಹುದು. ಈ ಫೋನ್ ಇತ್ತೀಚಿನ "Android 13" ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.  

Xiaomi 13 ಪ್ರೊ ಕ್ಯಾಮೆರಾ :
ಇದು ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದ್ದು, ಲಿಮಾ ತಂತ್ರಜ್ಞಾನವನ್ನು ಹೊಂದಿದೆ. 50MP ಮೇನ್ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿವೆ. ಮುಂಭಾಗದಲ್ಲಿ, ಸೆಲ್ಫಿಗಾಗಿ 32MP ಕ್ಯಾಮೆರಾ ಕೂಡ ಇದೆ.

ಇದನ್ನೂ ಓದಿ : Harmful apps: ನಿಮ್ಮ ಫೋನ್ ನಲ್ಲಿ ಈ ಆಪ್ ಗಳಿವೆಯೇ..? ತಕ್ಷಣ ಡಿಲೀಟ್‌ ಮಾಡಿ

Xiaomi 13 Pro ಅನ್ನು ಧೂಳು ಮತ್ತು ನೀರಿನಿಂದ ರಕ್ಷಿಸಲು ವಿಶೇಷ ಲೇಪನವನ್ನು ನೀಡಲಾಗಿದೆ (IP68 ರೇಟಿಂಗ್). ಇದು  4,820 mAh ಬ್ಯಾಟರಿಯನ್ನು ಹೊಂದಿದ್ದು ಅದು ಇಡೀ ದಿನ ಇರುತ್ತದೆ. ವಿಶೇಷವೆಂದರೆ ಇದನ್ನು ಅತ್ಯಂತ ವೇಗವಾಗಿ ಚಾರ್ಜ್ ಮಾಡಬಹುದು. ಇದು 120W ವೈರ್ಡ್ ಚಾರ್ಜರ್‌ನೊಂದಿಗೆ ಕೆಲವೇ ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಅದನ್ನು ವೈರ್‌ಲೆಸ್ ಚಾರ್ಜರ್‌ನಲ್ಲಿ (50W) ಕೂಡಾ ಚಾರ್ಜ್ ಮಾಡಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News