Viral Video: ಪ್ರಸ್ತುತ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್ಫೋನ್ಗಳದ್ದೇ ಹಾವಳಿ. ಸ್ಮಾರ್ಟ್ಫೋನ್ ಜನರನ್ನು ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲವೇನೋ ಎಂಬ ಹಂತಕ್ಕೆ ಜನ ತಲುಪಿದ್ದಾರೆ. ಇದಲ್ಲದೆ, ಸೆಲ್ಫಿ ಗೀಳು ಕೂಡ ಜನರಲ್ಲಿ ಹೆಚ್ಚಾಗಿದೆ.
ಸೆಲ್ಫಿ ಗೀಳಿನಿಂದಾಗಿ ಸಂಭವಿಸುವ ಅನಾಹುತಗಳ ಬಗ್ಗೆ ನಿತ್ಯ ಒಂದಿಲ್ಲೊಂದು ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ. ಕೆಲವು ಬಾರಿ ಈ ಸೆಲ್ಫಿ ಗೀಳಿನಿಂದಾಗಿ ಕೆಲವರು ಪ್ರಾಣ ಕಳೆದುಕೊಂಡಿರುವ ಭಯಾನಕ ಘಟನೆಗಳ ಬಗ್ಗೆಯೂ ನಾವು ನೋಡಿದ್ದೇವೆ. ಇಷ್ಟಾದರೂ ಕೂಡ ಜನರಲ್ಲಿ ಸೆಲ್ಫಿ ಬಗೆಗಿನ ವ್ಯಾಮೋಹ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಕೊಪ್ಪಳದ ಮುನಿರಾಬಾದ್ ಜಲಾಶಯ ಭರ್ತಿಯಾಗಿದೆ. ಸೇತುವೆಗಳ ಮೇಲೆ ಅಪಾಯಮಟ್ಟ ಮೀರಿ ನೀರು ಹರಿಯುತ್ತಿದೆ. ಹೀಗಿದ್ದರೂ ಜಲಾಶಯ ಬಳಿ ಯುವಕ ಯುವತಿಯರು, ಪ್ರವಾಸಿಗರು ಚೆಲ್ಲಾಟ ಆಡ್ತಿದ್ದಾರೆ. ಕ್ರಸ್ಟ್ಗೇಟ್ ಕೂಗಳತೆ ದೂರದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ತಿದ್ದಾರೆ.
ಒಂದು ಕಡೆ ಮೂವರು ಯುವಕರು ರಸ್ತೆ ಅಪಘಾತ ಸಾಯುತ್ತಿದ್ದರೆ ಇನ್ನೊಂದೆಡೆಗೆ ರಾಜಸ್ತಾನದ ಯುವಕನೊಬ್ಬ ಅವರಿಗೆ ಸಹಾಯ ಮಾಡುವ ಬದಲಾಗಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಆ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾನೆ.
ಚಲಿಸುತ್ತಿರುವ ರೈಲಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ, ಆದರೆ ರೈಲಿನ ಮೂಲಕ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ. ಯುವಕನ ಆತ್ಮಚರಿತ್ರೆ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಪಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.