ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿದ ವ್ಯಕ್ತಿ, ಮುಂದೆ ಆಗಿದ್ದೇನು- ವಾಚ್ ವೈರಲ್ ವಿಡಿಯೋ

Viral Video: ಪ್ರಸ್ತುತ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್ಗಳದ್ದೇ ಹಾವಳಿ.  ಸ್ಮಾರ್ಟ್‌ಫೋನ್ ಜನರನ್ನು ಎಷ್ಟರ ಮಟ್ಟಿಗೆ  ಆವರಿಸಿದೆ ಎಂದರೆ ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲವೇನೋ ಎಂಬ ಹಂತಕ್ಕೆ ಜನ ತಲುಪಿದ್ದಾರೆ. ಇದಲ್ಲದೆ, ಸೆಲ್ಫಿ ಗೀಳು ಕೂಡ ಜನರಲ್ಲಿ ಹೆಚ್ಚಾಗಿದೆ.   

Written by - Yashaswini V | Last Updated : Jan 19, 2023, 01:31 PM IST
  • ಈ ಸೆಲ್ಫಿ ಗೀಳಿನಿಂದಾಗಿ ಕೆಲವರು ಪ್ರಾಣ ಕಳೆದುಕೊಂಡಿರುವ ಭಯಾನಕ ಘಟನೆಗಳ ಬಗ್ಗೆಯೂ ನಾವು ನೋಡಿದ್ದೇವೆ.
  • ಇಷ್ಟಾದರೂ ಕೂಡ ಜನರಲ್ಲಿ ಸೆಲ್ಫಿ ಬಗೆಗಿನ ವ್ಯಾಮೋಹ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
  • ಇತ್ತೀಚೆಗೆ ಸೆಲ್ಫಿಗೆ ಸಂಬಂಧಿಸಿದಂತೆ ವಿದಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿದ ವ್ಯಕ್ತಿ, ಮುಂದೆ ಆಗಿದ್ದೇನು- ವಾಚ್ ವೈರಲ್ ವಿಡಿಯೋ  title=
Viral Video

Viral Video: ಸೆಲ್ಫಿ ಗೀಳಿನಿಂದಾಗಿ ಸಂಭವಿಸುವ ಅನಾಹುತಗಳ ಬಗ್ಗೆ ನಿತ್ಯ ಒಂದಿಲ್ಲೊಂದು ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ. ಕೆಲವು ಬಾರಿ ಈ ಸೆಲ್ಫಿ ಗೀಳಿನಿಂದಾಗಿ  ಕೆಲವರು ಪ್ರಾಣ ಕಳೆದುಕೊಂಡಿರುವ ಭಯಾನಕ ಘಟನೆಗಳ ಬಗ್ಗೆಯೂ ನಾವು ನೋಡಿದ್ದೇವೆ. ಇಷ್ಟಾದರೂ ಕೂಡ ಜನರಲ್ಲಿ ಸೆಲ್ಫಿ ಬಗೆಗಿನ ವ್ಯಾಮೋಹ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಏರಿ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ರೈಲು ನಿಲ್ದಾಣದಲ್ಲಿ ವ್ಯಕ್ತಿಯೋರ್ವ ವಂದೇ ಭಾರತ್ ಎಕ್ಸ್‌ಪ್ರೆಸ್ ಏರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ರೈಲಿನ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚುತ್ತದೆ. ವ್ಯಕ್ತಿ ತಕ್ಷಣ ಬಾಗಿಲು ತೆಗೆಯಲು ಮುಂದಾಗುತ್ತಾರೆ. ಆದರೆ, ಸಾಧ್ಯವಾಗುವುದಿಲ್ಲ. ಹಿಂದೆಯಿಂದ ಟಿಟಿ ಬಂದು ವ್ಯಕ್ತಿಯನ್ನು ಮಾತನಾಡಿಸುತ್ತಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ- Viral Video: ಬೈಕ್ ಸ್ಕಿಡ್‌ ಆಗಿ ಚಲಿಸುತ್ತಿದ್ದ ಬಸ್‌ನ ಕೆಳಗೆ ಸಿಲುಕಿದ ವ್ಯಕ್ತಿ, ಮುಂದೆ...

ವಾಸ್ತವವಾಗಿ, ರಾಜಮಂಡ್ರಿ ರೈಲು ನಿಲ್ದಾಣದಿಂದ ವಿಜಯವಾಡಕ್ಕೆ ತೆರಳಲು ಸಜ್ಜಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಏರಿ ವ್ಯಕ್ತಿಯೋರ್ವ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ರೈಲು ಹೊರಡುವ ಸಮಯವಾಗಿದ್ದರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಂಡಿದೆ. ವ್ಯಕ್ತಿ ಟಿಕೆಟ್ ಖರೀದಿಸದ ಕಾರಣ ತಬ್ಬಿಬ್ಬಾಗಿದ್ದಾರೆ. ಈ ಸಂದರ್ಭದಲ್ಲಿ ಟಿಟಿ ಹಾಗೂ ಸೆಲ್ಫಿ ತೆಗೆದುಕೊಳ್ಳಲು ರೈಲು ಹತ್ತಿದ್ದ ವ್ಯಕ್ತಿಯ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. 

ಇದನ್ನೂ ಓದಿ- Viral Video: ಜಿಮ್‍ನಲ್ಲಿ ವ್ಯಾಯಾಮ ಮಾಡುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು!

ಈ ವೈರಲ್ ವೀಡಿಯೋದಲ್ಲಿ, ಈ ರೈಲು ಬೇರೆಲ್ಲೂ ನಿಲ್ಲುವುದಿಲ್ಲ. ಇದು ಮುಂದೆ ವಿಜಯವಾಡದಲ್ಲೇ ನಿಲ್ಲುವುದು. ಇದು ಆರು ಗಂಟೆಗಳ ಪ್ರಯಾಣ ಎಂದು ಟಿಕೆಟ್ ಕಲೆಕ್ಟರ್ ಹೇಳುತ್ತಿರುವುದನ್ನು ಕಾಣಬಹುದಾಗಿದೆ. 

ಈ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News