ಆಕರ್ಷಕ ಮಹಿಳೆಯರ ಸೆಲ್ಫಿ ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ- ವರದಿ

   

Last Updated : Aug 27, 2018, 07:10 PM IST
ಆಕರ್ಷಕ ಮಹಿಳೆಯರ ಸೆಲ್ಫಿ ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ- ವರದಿ  title=

ನವದೆಹಲಿ: ಮಹಿಳೆಯರು ಆಕರ್ಷಕ ಸೇಲ್ಪಿಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡುವುದು ಸಂಗತಿ ಈಗ ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ ಎಂದು ಸಂಶೋಧನಾ ಅಧ್ಯಯನವೊಂದು ತಿಳಿಸಿದೆ.

ಈ ಕುರಿತಾದ ಸಂಶೋಧನಾ ಲೇಖನವೊಂದು ಈಗ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಪ್ರಕಟವಾಗಿದೆ.ಈ ಅಧ್ಯಯನ ಹೇಳುವಂತೆ  ಮಹಿಳೆಯರು ಆಕರ್ಷಕ ಸೇಲ್ಪಿಗಳನ್ನು ತೆಗೆದುಕೊಳ್ಳುವುದು ಸಮಾಜದ ಏಣಿ ಶ್ರೇಣಿಯಲ್ಲಿ ಸ್ಪರ್ಧಿಸಲು ಎಂದು ತಿಳಿಸಿದೆ.

ಈ ವಿಷಯದ ಕುರಿತಾಗಿ ಅಧ್ಯಯನ ಮಾಡಿರುವ ಸಿಡ್ನಿ ಮೂಲದ ವಿವಿಯ ಖಾಂಡಿಸ್ ಬ್ಲೇಕ್ ಅವರು "ನಾವು ಅಧ್ಯಯನದ ಮೂಲಕ ಕಂಡು ಹಿಡಿದಿರುವುದೆಂದರೆ ಆರ್ಥಿಕ ಅಸಮಾನತೆ ಎಲ್ಲಿ ಹೆಚ್ಚಾಗಿದೆ ಅಲ್ಲಿ ಮಹಿಳೆಯರು ಮಹಿಳೆಯರು ಹೆಚ್ಚಾಗಿ ಸೆಕ್ಸಿಯಾಗಿ ಸೆಲ್ಫಿಗಳನ್ನು ತೆಗೆದುಕೊಂಡು ಆನ್ ಲೈನ್ ಪೋಸ್ಟ್ ಮಾಡುತ್ತಿದ್ದಾರೆ" ಎಂದು ಅಧ್ಯಯನ ತಿಳಿಸಿದೆ. 

ಸುಮಾರು 113 ದೇಶಗಳಲ್ಲಿ ಸುಮಾರು 10 ಸಾವಿರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಅಧ್ಯಯನ ಮಾಡಿದೆ.ಈ ಪೋಸ್ಟ್ ಗಳಲ್ಲಿ ಹೆಚ್ಚಾಗಿ ಸೆಕ್ಸಿ,ಹಾಟ್ ಎಂದು ಪೋಸ್ಟ್ ಮಾಡಿರುವುದನ್ನು ಅದು ಪತ್ತೆ ಹಚ್ಚಿದೆ.

ಆರ್ಥಿಕ ಅಸಮಾನತೆಯು ಸ್ಪರ್ಧೆ ಹಾಗೂ ಉತ್ಸುಕತೆಯನ್ನು ಹೆಚ್ಚಿಸುತ್ತದೆ ಆ ಮೂಲಕ ಪ್ರತಿಯೋಬ್ಬರು ಕೂಡ ಸಮಾಜದ ಶ್ರೇಣಿಯಲ್ಲಿ ಇತರರಿಗಿಂತ ಉತ್ತಮರಾಗಲು ಬಯಸುತ್ತಾರೆ   ಎಂದು ಅದು ತಿಳಿಸಿದೆ.
 

Trending News