ಸೆಲ್ಫಿ ದುರಂತ: ದೊಡ್ಡಬಳ್ಳಾಪುರದಲ್ಲಿ ಮೃತ್ಯು ತಂದ ಸೆಲ್ಫಿ

             

Last Updated : Oct 18, 2017, 10:03 AM IST
ಸೆಲ್ಫಿ ದುರಂತ: ದೊಡ್ಡಬಳ್ಳಾಪುರದಲ್ಲಿ  ಮೃತ್ಯು ತಂದ ಸೆಲ್ಫಿ  title=

ದೊಡ್ಡ ಬಳ್ಳಾಪುರ: ದೊಡ್ಡಬಳ್ಳಾಪುರದ ಚನ್ನಗಿರಿ ಬೆಟ್ಟದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ 19 ವರ್ಷದ ಬಾಲಕ ನವೀನ್ ಮೃತ್ಯುವಿಗೆ ಈಡಾಗಿದ್ದಾನೆ.

ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನವೀನ್ ತನ್ನ ಸಹಪಾಠಿಗಳೊಂದಿಗೆ ಚಿಕ್ಕರಾಯಪ್ಪನ ಹಳ್ಳಿಯಲ್ಲಿನ ಚನ್ನಗಿರಿ ಬೆಟ್ಟಕ್ಕೆ ಪ್ರವಾಸಕ್ಕೆ ತೆರೆಳಿದ್ದ. ಬೆಟ್ಟದಿಂದ ನೀರು ಹರಿಯುತ್ತಿತ್ತು. ನವೀನ್ ಬೆಟ್ಟದ ಮಧ್ಯಭಾಗಕ್ಕೆ ಹತ್ತಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬೆಟ್ಟದ ಮೇಲಿಂದ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

Trending News