ನವದೆಹಲಿ: ಇತ್ತೀಚಿಗೆ ಸೆಲ್ಪಿ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.ಈಗ ಅದಕ್ಕೆ ತಡೆಯೋಡ್ದುವ ನಿಟ್ಟಿನಲ್ಲಿ ಐಐಐಟಿ-ದೆಹಲಿ ನೂತನ ಸೇಪ್ಟೆ(Saftie) ಆಪ್ ವೊಂದನ್ನು ಕಂಡುಹಿಡಿದಿದೆ.
ಈಗ ಈ ಆಪ್ ಕುರಿತಾಗಿ ಪ್ರತಿಕ್ರಿಸಿರುವ ಐಐಐಟಿ-ದೆಹಲಿ ಪ್ರಾಧ್ಯಾಪಕ ಪೋನ್ನುರಂಗಮ ಕುಮಾರಗುರು "ಈ ಆಪ್ ನ್ನು ಸೆಲ್ಪಿ ಸಂಬಂಧಿಸಿ ಸಾವುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಇದರಲ್ಲಿನ ಕ್ಯಾಮರಾ ನೈಜ ಚಿತ್ರವನ್ನು ವಿಶ್ಲೇಷಣೆ ಮಾಡುತ್ತದೆ, ಒಂದು ವೇಳೆ ಆಪಾಯಕಾರಿ ಎನಿಸಿದರೆ ಅದರ ಬಗ್ಗೆ ಸೂಚನೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಆಪ್ ಮೊಬೈಲ್ ಡೇಟಾವನ್ನು ಸ್ವಿಚ್ ಆಫ್ ಇದ್ದಾಗಲೂ ಸಹ ಕಾರ್ಯನಿರ್ವಹಿಸುತ್ತದೆ.ಅದು ನೀವು ನಿಂತಿರುವ ಎತ್ತರದ ವಿಶ್ಲೇಷಣೆ,ಇಮೇಜ್ ಮತ್ತು ಇತರ ವೈಶಿಷ್ಟ್ಯಗಳ ಹಿನ್ನೆಲೆ, ಬಗ್ಗೆ ಮಾಹಿತಿ ನೀಡುತ್ತದೆ.ಉದಾಹರಣೆಗೆ,ನೀವು ಒಂದು ರೈಲ್ವೆ ಟ್ರ್ಯಾಕ್ ಬಳಿ ಇದ್ದರೆ, ನೀರಿನ ಕೊಳದ ಹತ್ತಿರ ನೀವು ಸೆಲ್ಫ್ ಕ್ಲಿಕ್ ಮಾಡುತ್ತಿರುವಾಗ ಒಂದು ವೇಳೆ ನಿಮ್ಮ ಹಿಂಬದಿ ಪ್ರಾಣಿ ಇದ್ದರೆ, ಆಗ ಅದು ನೀವು ಅಸುರಕ್ಷಿತ ಸ್ಥಳದಲ್ಲಿರುವುದಾಗಿ ಎಂದು ಸೂಚನೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದರು.
ಈ ಆಪ್ ನಲ್ಲಿರುವ ಲೋಕೇಶನ್ ನ ಮಾರ್ಕರ್ ಜಗತ್ತಿನಲ್ಲಿರುವ ಒಟ್ಟು 5,500 ಸ್ಥಳಗಳನ್ನು ಅಪಾಯಕಾರಿ ಎಂದು ಹೇಳಿದೆ.ಅದರಲ್ಲಿ 600ಕ್ಕೂ ಅಧಿಕ ಸ್ಥಳಗಳನ್ನು ವೆರಿಫೈಡ್ ಮಾಡಿದೆ.