World Test Championship final 2023: ಐಪಿಎಲ್ 2023 ರಲ್ಲಿ ತಂಡದ 2 ಆಟಗಾರರು ತಮ್ಮ ಮಾರಕ ಫಾರ್ಮ್ ನೊಂದಿಗೆ ಮ್ಯಾನೇಜ್ ಮೆಂಟ್ನ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈ ಇಬ್ಬರೂ ಆಟಗಾರರು WTC ಫೈನಲ್ ನಲ್ಲಿ ಭಾರತ ತಂಡದ ಭಾಗವಾಗಿದ್ದು, ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
Yashasvi Jaiswal and Yujuvendra Chahal IPL Historic Records: ರಾಜಸ್ಥಾನ್ ರಾಯಲ್ಸ್ ಮತ್ತು ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೊನೆಯ ದಿನವೇ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು 187 ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿದೆ. 2013 ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದ ಅವರು, ಈ ಹಂತವನ್ನು ತಲುಪಲು ಸುಮಾರು 10 ವರ್ಷಗಳು ತೆಗೆದುಕೊಂಡಿದ್ದಾರೆ.
IPL 2023 News, MS Dhoni: ಮಹೇಂದ್ರ ಸಿಂಗ್ ಧೋನಿ, “ಈ ಪಿಚ್ನಲ್ಲಿ ಕೆಲವು ಶಾಟ್ ಗಳನ್ನು ಆಡಬಾರದಿತ್ತು. ಮೊಯಿನ್ ಮತ್ತು ಜಡೇಜಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಒಳ್ಳೆಯ ಸಂಗತಿ. ಎಲ್ಲರೂ ಬ್ಯಾಟಿಂಗ್ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವು ಬೌಂಡರಿ ಮತ್ತು ಸಿಕ್ಸರ್ ಗಳನ್ನು ಹೊಡೆಯುವುದು ನನ್ನ ಕೆಲಸ ಎಂದು ಹೇಳಿದ್ದಾರೆ.
KL Rahul: 2023ರ ಐಪಿಎಲ್ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ತೊಡೆಯ ಗಾಯಕ್ಕೆ ಒಳಗಾಗಿದ್ದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಇದೀಗ ತಮ್ಮ ಸರ್ಜರಿ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Harshal Patel Cricket: ಟೀಮ್ ಇಂಡಿಯಾದಿಂದ ಕೈಬಿಟ್ಟ ನಂತರ, ಈಗ ಈ ಆಟಗಾರ ಐಪಿಎಲ್ 2023 ರಲ್ಲೂ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾನೆ. ಭಾರತದ ಈ ಆಟಗಾರನು ಐಪಿಎಲ್ 2023 ರಲ್ಲಿ ಪಡೆಯುತ್ತಿರುವ ಸುವರ್ಣಾವಕಾಶಗಳನ್ನು ಕೆಟ್ಟದಾಗಿ ವ್ಯರ್ಥ ಮಾಡುತ್ತಿದ್ದಾನೆ. ಇದೇ ಕಾರಣದಿಂದ ಈ ಆಟಗಾರನ ವೃತ್ತಿಜೀವನವು ಕೊನೆಗೊಳ್ಳುವ ಅಂಚಿನಲ್ಲಿದೆ.
CSK vs MI IPL 2023: ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್ ನಲ್ಲಿ ಅಂತಿಮವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2023 ರ 49 ನೇ ಪಂದ್ಯದಲ್ಲಿ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಅವರು 18 ರನ್ ನೀಡಿ 2 ವಿಕೆಟ್ ಪಡೆದರು. ಇದಕ್ಕೂ ಮೊದಲು, ಐಪಿಎಲ್ 2021 ರ ಫೈನಲ್ ನಲ್ಲಿ ದೀಪಕ್ ಚಹಾರ್ ಒಂದು ವಿಕೆಟ್ ಪಡೆದಿದ್ದರು.
Rajasthan Royals vs Gujarat Titans: ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ ಗಳಿಂದ ಸೋಲು ಅನುಭವಿಸಬೇಕಾಯಿತು. ಈ ಸೋಲಿನ ಜೊತೆಗೆ, ಪಂದ್ಯದ ನಂತರ ಸಂಜು ಸ್ಯಾಮ್ಸನ್ ಬ್ಯಾಟ್ಸ್ಮನ್ ಗಳ ಮೇಲೆ ಕೋಪದಿಂದ ಗುಡುಗಿದರು
DC vs RCB IPL 2023 Match: ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಮತ್ತೊಮ್ಮೆ ಮೋಡ ಕವಿದ ವಾತಾವರಣ ಇದೆ. ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಮಳೆ ಬೀಳದಿದ್ದರೆ ಪಂದ್ಯ ನಡೆಯುತ್ತದೆ, ಇಷ್ಟೇ ಅಲ್ಲದೆ, ಗಂಟೆಗೆ 16 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ತಾಪಮಾನ 26 ರಿಂದ 41 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರಾತ್ರಿ 7.30ರಿಂದ ನಡೆಯಲಿದೆ.
Rajasthan Royals vs Gujarat Titans: ಐಪಿಎಲ್ ನ ಈ ಬಿಗ್ ಮ್ಯಾಚ್ ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಕಳಪೆಯಾಗಿದ್ದು, ಇಡೀ ತಂಡ 118 ರನ್ ಗಳಿಗೆ ಕುಸಿಯಿತು. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ಸಮಯದಲ್ಲಿ, ಟ್ರೆಂಟ್ ಬೌಲ್ಟ್ ಅವರ ಬ್ಯಾಟ್ ನಿಂದ ಅದ್ಭುತ ಸಿಕ್ಸರ್ ಒಂದು ಕಂಡುಬಂದಿತ್ತು.
IPL 2023 News: IPL 2023ರ ಋತುವಿನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಇವರನ್ನು ಮುಂದಿನ ಸೀಸನ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದುವರೆಗೆ ಈ ಸೀಸನ್ ನಲ್ಲಿ 47 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 3 ಭಾರತೀಯ ಆಟಗಾರರ ಪ್ರದರ್ಶನವು ತುಂಬಾ ಕೆಟ್ಟದಾಗಿತ್ತು. ಆ ಮೂರು ಆಟಗಾರರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.
IPL 2023 News Update: ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಿಮ್ ಡೇವಿಡ್ 14 ಎಸೆತಗಳಲ್ಲಿ 45 ರನ್ ಗಳಿಸಿ ಅಸಾಧ್ಯವಾದ ಜಯವನ್ನು ತಂಡಕ್ಕೆ ತಂದುಕೊಟ್ಟರು. ಮುಂಬೈ ಇಂಡಿಯನ್ಸ್ ತಂಡ 19.3 ಓವರ್ ಗಳಲ್ಲಿ 214 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್’ಗಳ ಜಯ ದಾಖಲಿಸಿತು.
Team India: ಇಬ್ಬರೂ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ನಿರಾಸೆಗೊಳಿಸಿದ್ದಾರೆ. ಹೀಗಿರುವಾಗ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಐಪಿಎಲ್ ನಲ್ಲಿ ಫ್ಲಾಪ್ ಪ್ರದರ್ಶನದ ನಂತರ ಈ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಎಂದನಿಸುತ್ತದೆ
Delhi Capitals vs Sunrisers Hyderabad Highlights: ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗೆ 197 ರನ್ ಗಳಿಸಿತು. ಇದಾದ ಬಳಿಕ ಡೆಲ್ಲಿ ತಂಡ 6 ವಿಕೆಟ್ ಗೆ 188 ರನ್ ಗಳಿಸಿ 9 ರನ್ಗಳಿಂದ ಸೋಲನುಭವಿಸಿತು.
Arjun Tendulkar Nasty Video Viral: ಅರ್ಜುನ್ ತೆಂಡೂಲ್ಕರ್ ಅವರು ಮೊದಲು ಮೂಗಿಗೆ ಬೆರಳು ಹಾಕಿ, ಆಮೇಲೆ ಬಾಯಿಯೊಳಗೆ ಇಟ್ಟುಕೊಳ್ಳುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ
PBKS vs LSG, IPL 2023: ಐಪಿಎಲ್ ನಲ್ಲಿ ಇದುವರೆಗೆ 38 ಪಂದ್ಯಗಳು ಮಾತ್ರ ನಡೆದಿವೆ. ಈ 38 ಪಂದ್ಯಗಳಲ್ಲಿ ತಂಡಗಳು 20 ಬಾರಿ 200+ ಅಂಕಗಳನ್ನು ಗಳಿಸಿವೆ. ಈ ಹಿಂದೆ 18 ಬಾರಿ ನಡೆದಿತ್ತು. 2022 ರಲ್ಲಿ, ಒಂದು ಋತುವಿನಲ್ಲಿ ತಂಡಗಳು 18 ಬಾರಿ 200+ ಸ್ಕೋರ್ಗಳನ್ನು ಗಳಿಸಿದ್ದವು.
ಕ್ಯಾಚ್ ಕೈ ಚೆಲ್ಲಿ ಮ್ಯಾಚ್ ಸೋತ RCB ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCBಗೆ ಸೋಲು KKR ವಿರುದ್ಧ ಮತ್ತೊಂದು ಹೀನಾಯ ಸೋಲು ಬ್ಯಾಟಿಂಗ್ನಲ್ಲಿ ಕೈ ಕೊಟ್ಟ ಡುಪ್ಲೆಸಿ, ಮಾಕ್ಸವೆಲ್ ಬೌಲಿಂಗ್ನಲ್ಲಿ ಕನ್ನಡಿಗ ವೈಶಾಕ್ ಮಿಂಚಿಂಗು
IPL 2023: ಮಂಡಿರಜ್ಜು ಗಾಯದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ (SRH) ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ IPL 2023ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಸ್ವತಃ ಸನ್ ರೈಸರ್ಸ್ ಹೈದರಾಬಾದ್ ತಂಡವೇ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
RCB vs KKR highlights: ಜೇಸನ್ ರಾಯ್ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿ ತಂಡಕ್ಕೆ ಬಿರುಸಿನ ಆರಂಭ ನೀಡಿದರೆ, ರಾಣಾ 21 ಎಸೆತಗಳಲ್ಲಿ 48 ರನ್ ಕಲೆ ಹಾಕಿ ಡೆತ್ ಓವರ್’ನಲ್ಲಿ ತಂಡವು ಬೃಹತ್ ಮೊತ್ತ ಕಲೆ ಹಾಕುವಂತೆ ಮಾಡಿದರು. ಇದರಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿವೆ.
Arjun Tendulkar Six Video: ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು, ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಪ್ರಚಂಡ ಸಿಕ್ಸರ್ ಬಾರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
Mumbai Indians, IPL 2023: ರೋಹಿತ್ ಶರ್ಮಾ ತಮ್ಮ ಮಾರಕ ಅಸ್ತ್ರ ಎಂದು ನಂಬಿಕೆ ಇಟ್ಟಿದ್ದ, ಈ ಆಟಗಾರನ ಕಳಪೆ ಪ್ರದರ್ಶನ ಮುಂಬೈ ಇಂಡಿಯನ್ಸ್ ತಂಡವನ್ನೇ ಮುಳುಗಿಸುತವಂತೆ ಮಾಡಿದೆ. ಈ ಆಟಗಾರನ ಫ್ಲಾಪ್ ಶೋನಿಂದಾಗಿ ಮುಂಬೈ ಇಂಡಿಯನ್ಸ್ ಐಪಿಎಲ್ 2023 ರಲ್ಲಿ ನಿರಾಶಾದಾಯಕ ಸೋಲನ್ನು ಎದುರಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.