Team Indiaದಲ್ಲಿ ಈ ಇಬ್ಬರು ಕಿಲಾಡಿಗಳ ದರ್ಬಾರ್! 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವುದು ಖಚಿತ ಅನ್ಸುತ್ತೆ!

World Test Championship final 2023: ಐಪಿಎಲ್ 2023 ರಲ್ಲಿ ತಂಡದ 2 ಆಟಗಾರರು ತಮ್ಮ ಮಾರಕ ಫಾರ್ಮ್‌ ನೊಂದಿಗೆ ಮ್ಯಾನೇಜ್‌ ಮೆಂಟ್‌ನ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈ ಇಬ್ಬರೂ ಆಟಗಾರರು WTC ಫೈನಲ್‌ ನಲ್ಲಿ ಭಾರತ ತಂಡದ ಭಾಗವಾಗಿದ್ದು, ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

Written by - Bhavishya Shetty | Last Updated : May 16, 2023, 07:15 AM IST
    • ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನಲ್ಲಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್‌ ಗೆ ಲಗ್ಗೆ ಇಟ್ಟಿದೆ.
    • 10 ವರ್ಷಗಳಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
    • ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ
Team Indiaದಲ್ಲಿ ಈ ಇಬ್ಬರು ಕಿಲಾಡಿಗಳ ದರ್ಬಾರ್! 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವುದು ಖಚಿತ ಅನ್ಸುತ್ತೆ! title=
World Test Championship

World Test Championship final 2023: ಭಾರತ ತಂಡವು ಜೂನ್ 7 ರಿಂದ ಲಂಡನ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಅಂತಿಮ (WTC ಫೈನಲ್-2023) ಪಂದ್ಯವನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನಲ್ಲಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್‌ ಗೆ ಲಗ್ಗೆ ಇಟ್ಟಿದೆ. 10 ವರ್ಷಗಳಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಇದನ್ನೂ ಓದಿ: Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್

ಇದೆಲ್ಲದರ ನಡುವೆ ಟೀಂ ಇಂಡಿಯಾಗೆ ಒಂದು ಗುಡ್ ನ್ಯೂಸ್ ಕೂಡ ಹೊರಬಿದ್ದಿದೆ. ಐಪಿಎಲ್ 2023 ರಲ್ಲಿ ತಂಡದ 2 ಆಟಗಾರರು ತಮ್ಮ ಮಾರಕ ಫಾರ್ಮ್‌ ನೊಂದಿಗೆ ಮ್ಯಾನೇಜ್‌ ಮೆಂಟ್‌ನ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈ ಇಬ್ಬರೂ ಆಟಗಾರರು WTC ಫೈನಲ್‌ ನಲ್ಲಿ ಭಾರತ ತಂಡದ ಭಾಗವಾಗಿದ್ದು, ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಟೀಂ ಇಂಡಿಯಾಗೆ ಸಂತಸದ ಸುದ್ದಿ!

ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ನ 62 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದರು. ಈ ಇಬ್ಬರೂ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗಾಗಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಈ ದೊಡ್ಡ ಪಂದ್ಯಕ್ಕೂ ಮುನ್ನ ಈ ಇಬ್ಬರು ಆಟಗಾರರ ಅಮೋಘ ಫಾರ್ಮ್ ಟೀಂ ಇಂಡಿಯಾ ಪಾಲಿಗೆ ಭರ್ಜರಿ ಸುದ್ದಿಯಾಗಿದೆ.

ಐಪಿಎಲ್‌ ನಲ್ಲಿ ಮೊದಲ ಶತಕ ದಾಖಲಿಸಿದ ಗಿಲ್!

23ರ ಹರೆಯದ ಯುವ ಬ್ಯಾಟ್ಸ್‌ ಮನ್ ಶುಭಮನ್ ಗಿಲ್ ಈ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದು, ಸನ್‌ ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಗಿಲ್ 58 ಎಸೆತಗಳಲ್ಲಿ 101 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್‌ ನಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು. ಅವರ ಇನ್ನಿಂಗ್ಸ್‌ ನಿಂದಾಗಿ ತಂಡ 188 ರನ್‌ ಗಳಿಗೆ ತಲುಪಲು ಸಾಧ್ಯವಾಯಿತು. ಶುಭಮನ್ ಗಿಲ್ ಐಪಿಎಲ್ 2023 ರಲ್ಲಿ ಇದುವರೆಗೆ 13 ಪಂದ್ಯಗಳನ್ನಾಡಿದ್ದು, 48.00 ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಜಡೇಜಾ ರೀತಿಯೇ Team Indiaದ ಸರ್ವಶ್ರೇಷ್ಠ ಆಟಗಾರನೀತ! ಆದ್ರೆ ವೃತ್ತಿಜೀವನ ಅಂತ್ಯಗೊಳಿಸಿದ್ದು ಅಕ್ಷರ್ ಪಟೇಲ್!

ಮೊಹಮ್ಮದ್ ಶಮಿ ಸೂಪರ್ ಬೌಲಿಂಗ್:

ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ ನ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡುವಾಗ ಮೊಹಮ್ಮದ್ ಶಮಿ 5.25 ಎಕಾನಮಿಯೊಂದಿಗೆ 21 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2023 ರಲ್ಲಿ, ಶಮಿ ಇದುವರೆಗೆ 13 ಪಂದ್ಯಗಳನ್ನಾಡಿದ್ದು 23 ವಿಕೆಟ್ ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸ್ ನಲ್ಲೂ ಮುಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News