PBKS vs LSG, IPL 2023: ಮೊಹಾಲಿಯ ಐ ಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023 ರ 38 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಬೌಲರ್ ಗಳ ಸ್ಥಿತಿ ಕಳಪೆಯಾಗಿತ್ತು. ಲಕ್ನೋದ ಬ್ಯಾಟ್ಸ್ಮನ್ ಗಳು ಪಂಜಾಬ್ ನ ಬೌಲರ್ ಲೆಕ್ಕವೇ ಅಲ್ಲ ಎಂಬಂತೆ ಬ್ಯಾಟಿಂಗ್ ಮಾಡಿದ್ದರು, ಈ ಮೂಲಕ ಒಟ್ಟಾರೆಯಾಗಿ 20 ಓವರ್ ಗಳಲ್ಲಿ 5 ವಿಕೆಟ್ ಗೆ 257 ರನ್ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಈ ಅಪರೂಪದ ದಾಖಲೆ ಐಪಿಎಲ್ ಇತಿಹಾಸದಲ್ಲಿ ಭರ್ಜರಿಯಾಗಿ ನಿರ್ಮಾಣವಾಗಿದೆ.
ಇದನ್ನೂ ಓದಿ: CSK: ಒಂದೊಮ್ಮೆ ಧೋನಿಯ ನೆಚ್ಚಿನ ಬೌಲರ್ ಆಗಿದ್ದ ಈತ… ಇಂದು ಒಂದೊತ್ತಿನ ಊಟಕ್ಕಾಗಿ ಬಸ್ ಓಡಿಸ್ತಿದ್ದಾನೆ!
ಲಕ್ನೋ ಸೂಪರ್ ಜೈಂಟ್ಸ್ ತಂಡ 200 ರನ್ ಗಳ ಸ್ಕೋರ್ ತಲುಪಿದ ತಕ್ಷಣ ಒಂದು ದಾಖಲೆ ನಿರ್ಮಾಣವಾಗಿತ್ತು. 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಐಪಿಎಲ್ ಇತಿಹಾಸದಲ್ಲಿ ದಾಖಲಾಯಿತು. ಐಪಿಎಲ್ ನಲ್ಲಿ ಇದುವರೆಗೆ 38 ಪಂದ್ಯಗಳು ಮಾತ್ರ ನಡೆದಿವೆ. ಈ 38 ಪಂದ್ಯಗಳಲ್ಲಿ ತಂಡಗಳು 20 ಬಾರಿ 200+ ಅಂಕಗಳನ್ನು ಗಳಿಸಿವೆ. ಈ ಹಿಂದೆ 18 ಬಾರಿ ನಡೆದಿತ್ತು. 2022 ರಲ್ಲಿ, ಒಂದು ಋತುವಿನಲ್ಲಿ ತಂಡಗಳು 18 ಬಾರಿ 200+ ಸ್ಕೋರ್ಗಳನ್ನು ಗಳಿಸಿದ್ದವು.
ಋತುವಿನ ಗರಿಷ್ಠ ಸ್ಕೋರ್!
ಲಖನೌ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಮೂಲಕ ತಂಡವು ತನ್ನ ಅತಿದೊಡ್ಡ ಸ್ಕೋರ್ ನ್ನು ಅಚ್ಚೊತ್ತಿದಂತೆ ಬರೆದಿದೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಆಗಿದೆ. 2013ರಲ್ಲಿ ಬೆಂಗಳೂರು ಮೈದಾನದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ಗೆ 263 ರನ್ ಗಳಿಸಿದ್ದ RCB ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ, ಐಪಿಎಲ್ ಇನ್ನಿಂಗ್ಸ್ ನ ಎರಡನೇ ಅತಿ ಹೆಚ್ಚು ಬೌಂಡರಿಗಳು ಅಂದರೆ 27 ಬೌಂಡರಿ, 14 ಸಿಕ್ಸರ್ ಗಳನ್ನು ಬಾರಿಸಲಾಗಿವೆ.
ಇದನ್ನೂ ಓದಿ: Video: ತಂದೆಯನ್ನೇ ಮೀರಿಸಿ ಬಾನೆತ್ತರಕ್ಕೆ ಸಿಕ್ಸರ್ ಬಾರಿಸಿದ Arjun Tendulkar! ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ?
ಲಕ್ನೋ ಸೂಪರ್ ಜೈಂಟ್ಸ್ನ ಬ್ಯಾಟ್ಸ್ಮನ್ ಗಳು ಪಂಜಾಬ್ ನ ಎಲ್ಲಾ ಬೌಲರ್ಗಳನ್ನು ಲೆಕ್ಕಿಸದೆ ಬ್ಯಾಟಿಂಗ್ ಮಾಡಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ತಂಡದ ಪರ ಗರಿಷ್ಠ 74 ರನ್ ಗಳಿಸಿದ್ದರು. 40 ಎಸೆತಗಳ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಅವರನ್ನು ಹೊರತುಪಡಿಸಿ, ಆರಂಭಿಕ ಆಟಗಾರ ಕೈಲ್ ಮೇಯರ್ಸ್ 24 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಗಳ ಸಹಾಯದಿಂದ 54 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಯುವ ಆಟಗಾರ ಆಯುಷ್ ಬಡೋನಿ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ವಿಕೆಟ್ ಕೀಪರ್ ನಿಕೋಲಸ್ ಪೂರನ್ 19 ಎಸೆತಗಳನ್ನು ಎದುರಿಸಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 45 ರನ್ ಸೇರಿಸಿದರು. ದೀಪಕ್ ಹೂಡಾ ಅವರ ಇನ್ನಿಂಗ್ಸ್ ನಲ್ಲಿ 2 ಬೌಂಡರಿಗಳ ಸಹಾಯದಿಂದ 11 ರನ್ ಗಳಿಸಿ ಅಜೇಯರಾಗಿ ಮರಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.