ರಕ್ತದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತು ಹೊರ ಹಾಕುತ್ತದೆ ಈ ಪುಟ್ಟ ಹಣ್ಣು!

Cherry Health Benefits:ಇದು ನಿಮ್ಮ ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಬಹಳ ಪ್ರಯೋಜನಗಳನ್ನು ನೀಡುತ್ತದೆ. 

Written by - Ranjitha R K | Last Updated : Jun 3, 2024, 01:32 PM IST
  • ಚೆರ್ರಿ ನೋಡಲು ಬಹಳ ಆಕರ್ಷಕವಾಗಿರುವ ಹಣ್ಣು.
  • ಈ ಚಿಕ್ಕ ಹಣ್ಣುಗಳನ್ನು ಪ್ರಪಂಚದಾದ್ಯಂತ ಸೇವಿಸಲಾಗುತ್ತದೆ.
  • ಮಕ್ಕಳಿಗೆ ಚೆರ್ರಿ ಹಣ್ಣು ಎಂದರೆ ತುಂಬಾ ಇಷ್ಟ.
ರಕ್ತದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅನ್ನು ಕಿತ್ತು ಹೊರ ಹಾಕುತ್ತದೆ ಈ ಪುಟ್ಟ ಹಣ್ಣು!  title=

Cherry Health Benefits : ಚೆರ್ರಿ ನೋಡಲು ಬಹಳ ಆಕರ್ಷಕವಾಗಿರುವ ಹಣ್ಣು. ಈ ಚಿಕ್ಕ ಹಣ್ಣುಗಳನ್ನು ಪ್ರಪಂಚದಾದ್ಯಂತ ಸೇವಿಸಲಾಗುತ್ತದೆ. ಚೆರ್ರಿಗಳನ್ನು ಕೇಕ್ ಮತ್ತು ಕುಕೀಗಳನ್ನು ಅಲಂಕರಿಸಲು ಮತ್ತು ಜಾಮ್ ತಯಾರಿಸಲು ಬಳಸಲಾಗುತ್ತದೆ.ಮಕ್ಕಳಿಗೆ ಚೆರ್ರಿ ಹಣ್ಣು ಎಂದರೆ ತುಂಬಾ ಇಷ್ಟ. ಚೆರ್ರಿ ಹಣ್ಣು ರುಚಿಯಲ್ಲಿ ಸಿಹಿಯಾಗಿರುತ್ತದೆ.ಇದು ನಿಮ್ಮ ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಬಹಳ ಪ್ರಯೋಜನಗಳನ್ನು ನೀಡುತ್ತದೆ. 

ಹೃದಯದ ಆರೋಗ್ಯವನ್ನು ಕಾಪಾಡಬಹುದು : 
ಚೆರ್ರಿ ಹಣ್ಣುಗಳು ಪೊಟ್ಯಾಷಿಯಂನ ಆಗರವಾಗಿದೆ.ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಸೋಡಿಯಂ ಅನ್ನು ಕಡಿಮೆಯಾಗುತ್ತದೆ. ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಹೀಗಾಗಿ ಕೆಟ್ಟ ಕೊಲೆಸ್ಟ್ರಾಲ್ ನ ಅಡ್ಡಪರಿಣಾಮಗಳಿಂದ  ಹೃದಯವನ್ನು ರಕ್ಷಿಸುತ್ತದೆ.ಈ ರೀತಿ ಚೆರ್ರಿ ತಿನ್ನುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ. 

ಇದನ್ನೂ ಓದಿ : ನಿತ್ಯ ಕೇವಲ 2 ಲವಂಗ ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ನಿದ್ರಾಹೀನತೆಯಿಂದ ಪರಿಹಾರ : 
ಮೆಲಟೋನಿನ್ ಚೆರ್ರಿ ಹಣ್ಣುಗಳಲ್ಲಿ ಕಂಡುಬರುತ್ತದೆ.ಇದು ನಿದ್ರೆಯನ್ನು ಹೆಚ್ಚಿಸಲು ಕೆಲಸ ಮಾಡುವ ಒಂದು ರೀತಿಯ ಹಾರ್ಮೋನ್ ಆಗಿದೆ.ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದಾದರೆ ಚೆರ್ರಿ ಹಣ್ಣನ್ನು ಸೇವಿಸಬಹುದು.

ಒತ್ತಡ ನಿವಾರಣೆ :
ಚೆರ್ರಿ ಹಣ್ಣನ್ನು ಸೇವಿಸುವುದರಿಂದ ಮಾನಸಿಕವಾಗಿಯೂ ಉತ್ತಮವಾಗಲು ಸಹಾಯ ಮಾಡುತ್ತದೆ.ಚೆರ್ರಿ ತಿನ್ನುವುದು ನಿಮ್ಮ ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದು ಒತ್ತಡವನ್ನು ಹೆಚ್ಚಿಸುವ ಹಾರ್ಮೋನ್. ಕಾರ್ಟಿಸೋಲ್ ಅನ್ನು ಕಡಿಮೆ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. 

ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತವೆ : 
ಈ ಚಿಕ್ಕ ಹಣ್ಣುಗಳಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾಗಿ ಉತ್ತಮ ಜ್ಞಾಪಕಶಕ್ತಿಗೆ ಚೆರ್ರಿ ಸಹಾಯಕ. 

ಇದನ್ನೂ ಓದಿ :General Knowledge : ಪಪ್ಪಾಯ ಹಣ್ಣಿನ ಜೊತೆ ಈ ಹಣ್ಣನ್ನು ಸೇವಿಸಿದರೆ ಸಾವು ಸಂಭವಿಸುವ ಸಾಧ್ಯತೆಯೂ ಇದೆಯಂತೆ !

ಮಧುಮೇಹದಿಂದ ಮುಕ್ತಿ :
ಚೆರ್ರಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಹಣ್ಣು. ಆಹಾರದ ಫೈಬರ್ ಈ ಹಣ್ಣುಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ  ತ್ವರಿತವಾಗಿ ಹೆಚ್ಚಾಗಲು ಬಿಡುವುದಿಲ್ಲ. ಇದು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

(ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News