Chikkaballapura Lok Sabha Election Result: ಲೋಕಸಭಾ ಚುನಾವಣೆಯಲ್ಲಿ ಸುಧಾಕರ್'ಗೆ ಜೈಕಾರ ಹಾಕಿದ ಚಿಕ್ಕಬಳ್ಳಾಪುರದ ಮತದಾರರು

Chikkaballapura Lokasabha Election Result 2024: ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ದೇವನಹಳ್ಳಿ, ಗೌರಿ ಬಿದನೂರು, ಹೊಸಕೋಟೆ, ನೆಲಮಂಗಲ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಇಲ್ಲಿ ಕಾಂಗ್ರೆಸ್ ಹರಿಯಾಳು. ಮಾಜಿ ಸಚಿವ ಡಾ. ಕೆ. ಸುಧಾಕರ್ ಬಿಜೆಪಿ ಅಭ್ಯರ್ಥಿ. ಇಬ್ಬರ ನಡುವೆ ತೀವ್ರವಾದ ಪೈಪೋಟಿ ನಡೆದಿದೆ. ಯಾರು ಗೆಲ್ಲುತ್ತಾರೆ ಎನ್ನುವುದಷ್ಟೇ ಈಗ ಉಳಿದಿರುವ ಕುತೂಹಲ. 

Written by - Yashaswini V | Last Updated : Jun 4, 2024, 05:52 PM IST
  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವೂ 1962ರಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು.
  • 1996ರಲ್ಲಿ ಜನತಾದಳ ಹಾಗೂ 2019ರಲ್ಲಿ ಬಿಜೆಪಿ ಮಾತ್ರ ಕಾಂಗ್ರೆಸ್ ಕ್ಷೇತ್ರ ಕಳೆದುಕೊಂಡಿತ್ತು.
  • ಈವರೆಗಿನ 13 ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 1996ರಿಂದ ಸತತವಾಗಿ ಆರು ಚುನಾವಣೆಗಳನ್ನು ಗೆದ್ದಿದ್ದಾರೆ.
Chikkaballapura Lok Sabha Election Result: ಲೋಕಸಭಾ ಚುನಾವಣೆಯಲ್ಲಿ ಸುಧಾಕರ್'ಗೆ ಜೈಕಾರ ಹಾಕಿದ ಚಿಕ್ಕಬಳ್ಳಾಪುರದ ಮತದಾರರು  title=

Chikkaballapura Lokasabha Election Result: 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯಾ ವಿರುದ್ಧ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ 163460   ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಮಾಜಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಈ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿರುವುದಕ್ಕೆ ಡಾ. ಕೆ. ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದು, ದೇಶದ ಕೋಟ್ಯಾಂತರ ಜನತೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಬಯಸಿದ್ದಾರೆ ಎಂದು ಡಾ ಕೆ ಸುಧಾಕರ್ ಹೇಳಿದ್ದಾರೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ವಿಧಾನಸಭೆ ಕ್ಷೇತ್ರವಾರು ಬಿದ್ದ ಹೆಚ್ಚು ಮತಗಳ‌ ವಿವರ ಈ ಕೆಳಕಂಡಂತಿದೆ: 
ಹೊಸಕೋಟೆ :-ಕಾಂಗ್ರೆಸ್ ಪಕ್ಷಕ್ಕೆ 2885 -ಹೆಚ್ಚು ಮತ

ದೇವನಹಳ್ಳಿ :-ಬಿಜೆಪಿ ಪಕ್ಷಕ್ಕೆ  5231 ಮತ ಹೆಚ್ಚಾಗಿ ಬಿದ್ದಿವೆ

ದೊಡ್ಡಬಳ್ಳಾಪುರ :- ಬಿಜೆಪಿ ಪಕ್ಷಕ್ಕೆ 22382 ಹೆಚ್ಚು ಮತ 

ನೆಲಮಂಗಲ :- ಬಿಜೆಪಿ ಪಕ್ಷಕ್ಕೆ - 33255 ಹೆಚ್ಚು ಮತ ಸಂದಾಯ

ಯಲಹಂಕ :- ಬಿಜೆಪಿ ಪಕ್ಷಕ್ಕೆ :- 83537 ಮತ ಹೆಚ್ಚಾಗಿ ಬಿದ್ದಿವೆ

ಚಿಕ್ಕಬಳ್ಳಾಪುರದಲ್ಲಿ :- ಬಿಜೆಪಿ ಪಕ್ಷಕ್ಕೆ - 20941 ಹೆಚ್ಚು ಮತ ಸಂದಿವೆ

ಗೌರಿಬಿದನೂರು:- ಬಿಜೆಪಿ ಪಕ್ಷಕ್ಕೆ- 483 ಮತ ಹೆಚ್ಚಾಗಿ ಬಿದ್ದಿವೆ

ಬಾಗೆಪಲ್ಲಿಯಲ್ಲಿ :- ಕಾಂಗ್ರೆಸ್ ಪಕ್ಷಕ್ಕೆ - 1300 ಹೆಚ್ಚು ಮತ ಬಿದ್ದಿವೆ..

ಮೊದಲ ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ 8199 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 4269 ಮತಗಳನ್ನು ಪಡೆದಿದ್ದಾರೆ.  ಬಿಜೆಪಿ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ಗೆ 3930 ಮತಗಳ ಮುನ್ನಡೆ ಸಾಧಿಸಿದ್ದಾರೆ. 

ದೇಶದ ಎರಡನೇ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಮತದಾನ ನಡೆದಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತಎಣಿಕೆ ಮಂಗಳವಾರ (ಜೂನ್ 4) ನಗರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿ ನಡೆಯಲಿದೆ. ಇಂದು ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ಬೀಗವನ್ನು ಅಭ್ಯರ್ಥಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ತೆಗೆಯಲಾಗುತ್ತದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಎವಿಎಂ ಯಂತ್ರಗಳನ್ನು ಮತಎಣಿಕೆ ಕೊಠಡಿಗಳಿಗೆ ತಂದು 8 ಗಂಟೆಗೆ ಸರಿಯಾಗಿ ಎಣಿಕೆ ಕಾರ್ಯವನ್ನು ಆರಂಭಿಸಲಾಗುತ್ತದೆ.

ಚಿಕ್ಕಬಳ್ಳಾಪುರದಲ್ಲಿ 2019ರಲ್ಲಿ ಬಿಜೆಪಿ ಅಭ್ಯರ್ಥಿ ಬಿಎನ್ ಬಚ್ಚೇಗೌಡ (BJP candidate BN Bachegowda) ಅವರು 7,45,912 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಹುರಿಯಾಳು ಎಂ ವೀರಪ್ಪ ಮೊಯ್ಲಿ ಅವರು 5,63,802 ಮತ ಪಡೆದಿದ್ದರು. ಇದರಿಂದಾಗಿ 182,110 ಬಿಜೆಪಿ ಪಾಲಾಗಿತ್ತು. ಬಿಜೆಪಿ ಅಭ್ಯರ್ಥಿ ಬಿಎನ್ ಬಚ್ಚೇಗೌಡ 1,82,110 ಮತಗಳ ಅಂತರದಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಗೆಲುವು ಸಾಧಿಸಿದ್ದರು. ಈ ಸಲ ಹಳೆಯ ಹುಲಿಗಳಾದ ಬಿಎನ್ ಬಚ್ಚೇಗೌಡ ಮತ್ತು ಎಂ ವೀರಪ್ಪ ಮೊಯ್ಲಿ ಇಬ್ಬರೂ ಕಣದಲ್ಲಿಲ್ಲ. ಈ ಸಲದ ಹೋರಾಟ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ (Raksha Ramaiah) ಮತ್ತು ಮಾಜಿ ಸಚಿವ ಡಾ. ಕೆ. ಸುಧಾಕರ್ (Dr K Sudhakar) ನಡುವೆ. ಇಬ್ಬರೂ ತೀವ್ರವಾದ ಪೈಪೋಟಿ ನೀಡುವ ಸಾಮರ್ಥ್ಯ ಇರುವ ಅಭ್ಯರ್ಥಿಗಳೇ. ಆದುದರಿಂದ ಈ ಸಲ ಚಿಕ್ಕಬಳ್ಳಾಪುರದ ಫಲಿತಾಂಶ ಹೆಚ್ಚು ಕುತೂಹಲವನ್ನು ಹುಟ್ಟುಹಾಕಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವೂ (Chikkaballapur Lok Sabha Constituency) 1962ರಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. 1996ರಲ್ಲಿ ಜನತಾದಳ ಹಾಗೂ 2019ರಲ್ಲಿ ಬಿಜೆಪಿ ಮಾತ್ರ ಕಾಂಗ್ರೆಸ್ ಕ್ಷೇತ್ರ ಕಳೆದುಕೊಂಡಿತ್ತು. ಈವರೆಗಿನ 13 ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 1996ರಿಂದ ಸತತವಾಗಿ ಆರು ಚುನಾವಣೆಗಳನ್ನು ಗೆದ್ದಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಮತ್ತು ಬಲಿಜ ಸಮುದಾಯದ ಮತಗಳು ನಿರ್ಣಯಾಕವಾಗಿವೆ. ಬಿಜೆಪಿ ಅಭ್ಯರ್ಥಿ ಸುಧಾಕರ್ ಒಕ್ಕಲಿಗರು. ಕಾಂಗ್ರೆಸ್ ಹುರಿಯಾಳು ರಕ್ಷಾ ರಾಮಯ್ಯ ಬಲಿಜ ಸಮುದಾಯದ ಯುವ ನೇತಾರ. ಹಾಗಾಗಿ ಈ ಸಲ ಇಲ್ಲಿ ಯಾವ ರೀತಿಯ ಜಾತಿ ಲೆಕ್ಕಾಚಾರ ನಡೆಯಬಹುದು ಎನ್ನುವ ಕುತೂಹಲವೂ ಎದ್ದು ಕಾಣುತ್ತಿದೆ. 

ಇದನ್ನೂ ಓದಿ- Chamarajanagar Lok Sabha Election Result: ಚಾಮರಾಜನಗರದಲ್ಲಿ ಯಾರಿಗೆ ಒಲಿಯಲಿದೆ ವಿಜಯಮಾಲೆ!

ಮತದಾನ ಪ್ರಮಾಣ:
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ದೇವನಹಳ್ಳಿ, ಗೌರಿ ಬಿದನೂರು, ಹೊಸಕೋಟೆ, ನೆಲಮಂಗಲ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 15,25,19976.98 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ಬಾರಿಗಿಂತ ಶೇಕಡಾ 0.24ರಷ್ಟು ಮತದಾನವಾಗಿದೆ. ಅದು ಯಾರಿಗೆ ಅನುಕೂಲ ಆಗುತ್ತೆ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ- ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಮತ್ತೆ ಅರಳುತ್ತಾ ಕಮಲ? ಯಾರಿಗೆ ವಿಜಯಮಾಲೆ?

ಮತಎಣಿಕೆ ಕೇಂದ್ರದ ಸುತ್ತಾ ನಿಷೇಧಾಜ್ಞೆ 
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಈಗಾಗಲೇ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಸಿ.ಆರ್.ಪಿಸಿ 1973ರ ಕಲಂ 144ರ ಪ್ರಕಾರ ಮತಎಣಿಕೆ ಕೇಂದ್ರದ ಸುತ್ತಾ 200 ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಸಾರ್ವಜನಿಕರ ಶಾಂತಿ, ನೆಮ್ಮದಿ ಕದಡುವ ಕಾನೂನು ಸುವ್ಯವಸ್ಥೆಗೆ ಭಂಗ ಬರಬಾರದೆಂದು ಚಾಮರಾಜನಗರ ಜಿಲ್ಲೆಯಾದ್ಯಂತ ಮೆರವಣಿಗೆ, ಸಭೆ, ಸಮಾರಂಭ, ಪಟಾಕಿ, ಸಿಡಿಸುವುದು, ಗುಂಪುಗೂಡುವುದು ನಿಷೇಧಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News