Video: ತಂದೆಯನ್ನೇ ಮೀರಿಸಿ ಬಾನೆತ್ತರಕ್ಕೆ ಸಿಕ್ಸರ್ ಬಾರಿಸಿದ Arjun Tendulkar! ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ?

Arjun Tendulkar Six Video: ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು, ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಪ್ರಚಂಡ ಸಿಕ್ಸರ್ ಬಾರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

Written by - Bhavishya Shetty | Last Updated : Apr 26, 2023, 10:58 AM IST
    • ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು
    • ಪ್ರಚಂಡ ಸಿಕ್ಸರ್ ಬಾರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
    • ಅರ್ಜುನ್ ತೆಂಡೂಲ್ಕರ್ ಅವರ ಸಿಕ್ಸರ್ ನೋಡಿ ಮೋಹಿತ್ ಶರ್ಮಾ ಶಾಕ್ ಆಗಿದ್ದಾರೆ.
Video: ತಂದೆಯನ್ನೇ ಮೀರಿಸಿ ಬಾನೆತ್ತರಕ್ಕೆ ಸಿಕ್ಸರ್ ಬಾರಿಸಿದ Arjun Tendulkar! ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ? title=
Arjun Tendulkar

Arjun Tendulkar Six Video: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮಂಗಳವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಅಪಾಯಕಾರಿ ವೇಗದ ಬೌಲರ್ ಮೋಹಿತ್ ಶರ್ಮಾ ಅವರ ಒಂದು ಎಸೆತದಲ್ಲಿ ಆಕಾಶದ ಎತ್ತರಕ್ಕೆ ಸಿಕ್ಸರ್ ಬಾರಿಸಿದ್ದಾರೆ.

 ಇದನ್ನೂ ಓದಿ: Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು

ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು, ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಪ್ರಚಂಡ ಸಿಕ್ಸರ್ ಬಾರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್‌’ನಲ್ಲಿ, ಮುಂಬೈ ಇಂಡಿಯನ್ಸ್ ಆಲ್‌’ರೌಂಡರ್ ಅರ್ಜುನ್ ತೆಂಡೂಲ್ಕರ್ ಕ್ರೀಸ್‌’ನಲ್ಲಿದ್ದರು. ವೇಗದ ಬೌಲರ್ ಮೋಹಿತ್ ಶರ್ಮಾ ಬೌಲಿಂಗ್ ಮಾಡಲು ಬಂದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್‌’ನಲ್ಲಿ ಮೋಹಿತ್ ಶರ್ಮಾ ಮೊದಲ ಎಸೆತವನ್ನು ಎಸೆದ ತಕ್ಷಣ ಅರ್ಜುನ್ ತೆಂಡೂಲ್ಕರ್ ಆಕಾಶದ ಎತ್ತರಕ್ಕೆ ಸಿಕ್ಸರ್ ಬಾರಿಸಿದರು. ಅರ್ಜುನ್ ತೆಂಡೂಲ್ಕರ್ ಅವರ ಸಿಕ್ಸರ್ ನೋಡಿ ಮೋಹಿತ್ ಶರ್ಮಾ ಶಾಕ್ ಆಗಿದ್ದಾರೆ.

 

ಮುಂಬೈ ಇಂಡಿಯನ್ಸ್ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌’ಗೆ ಬಂದ ಅರ್ಜುನ್ ತೆಂಡೂಲ್ಕರ್ 9 ಎಸೆತಗಳಲ್ಲಿ 13 ರನ್‌’ಗಳ ಇನಿಂಗ್ಸ್ ಆಡಿದರು. ಕುತೂಹಲಕಾರಿ ಸಂಗತಿಯೆಂದರೆ, ಗುಜರಾತ್ ಟೈಟಾನ್ಸ್ ವೇಗದ ಬೌಲರ್ ಮೋಹಿತ್ ಶರ್ಮಾ ಅರ್ಜುನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದರು. ಅರ್ಜುನ್ ತೆಂಡೂಲ್ಕರ್ ಐಪಿಎಲ್‌ನ 4 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ ಮತ್ತು 13 ರನ್ ಗಳಿಸಿದ್ದಾರೆ.

ಅಭಿನವ್ ಮನೋಹರ್ ಮತ್ತು ಡೇವಿಡ್ ಮಿಲ್ಲರ್ ನಡುವಿನ 35 ಎಸೆತಗಳ 71 ರನ್ ಜೊತೆಯಾಟದ ಆಧಾರದ ಮೇಲೆ ದೊಡ್ಡ ಸ್ಕೋರ್ ಗಳಿಸಿದ ನಂತರ, ಗುಜರಾತ್ ಟೈಟಾನ್ಸ್ ನೂರ್ ಅಹ್ಮದ್ ಮತ್ತು ಬೌಲರ್‌ಗಳ ಬಲವಾದ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ಅನ್ನು 55 ರನ್‌ಗಳಿಂದ ಸೋಲಿಸಿತು.

 ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಬುಮ್ರಾ ತರಹದ ಬೌಲರ್! IPLನಲ್ಲಿ ಅಬ್ಬರಿಸುತ್ತಿರುವ ಈತ ಆಟೋ ಡ್ರೈವರ್’ನ ಮಗ

ಪಾಯಿಂಟ್ ಟೇಬಲ್’ನಲ್ಲಿ ಹೀಗಿದೆ ಸ್ಥಾನ!

ಆರು ವಿಕೆಟ್‌ ನಷ್ಟಕ್ಕೆ 207 ರನ್ ಗಳಿಸಿದ ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ 152 ರನ್‌’ಗಳಿಗೆ ಕಟ್ಟಿಹಾಕಿತು. ಈ ಗೆಲುವಿನೊಂದಿಗೆ ಗುಜರಾತ್ ತಂಡ ಏಳು ಪಂದ್ಯಗಳಲ್ಲಿ ಐದು ಗೆಲುವಿನೊಂದಿದೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News