Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023 ರಲ್ಲಿ ತನ್ನ ತಂಡಕ್ಕೆ ಬ್ರಹ್ಮಾಸ್ತ್ರಕ್ಕಿಂತ ಮಿಗಿಲಾದ ಓರ್ವ ಬೌಲರ್’ನನ್ನು ಸೇರಿಸಿಕೊಂಡಿದೆ. ಈತ ಬೇರಾರೂ ಅಲ್ಲ, ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಈತನ ಮಾರಣಾಂತಿಕ ಬೌಲಿಂಗ್’ಗೆ ಇಂದು ಪಂಜಾಬ್ ತತ್ತರಿಸಿ ಹೋಗಿದೆ.
Rajasthan Royals: ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೋಸ್ ಬಟ್ಲರ್. ಈತ ತಮ್ಮದೇ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾನೆ. ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ಕೋಪಗೊಳ್ಳುವಂತಹ ಹೇಳಿಕೆಯನ್ನು ಆತ ನೀಡಿದ್ದಾನೆ ಎನ್ನಲಾಗಿದೆ.
Urvashi Rautela ipl : ದೇವಲೋಕ ಅಪ್ಸರೆ ಬಂದು ಸ್ಟೇಡಿಯಮ್ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಿರುವಂತೆ ಇದೆ ಅಲ್ವಾ... ಬ್ಯಾಕ್ ತೋರಿಸಿ ಯಾರು ಈಕೆ..? ಅಂತ ಕೇಳ್ತಿದ್ದೀರಲ್ಲ.. ಹೇಗೆ ಗೆಸ್ ಮಾಡೋದು ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಆ ಸಂದರಿ ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ಜಸ್ಟ್ ಕೆಳಗೆ ಕೊಟ್ಟಿರೋ ಸುದ್ದಿ ಓದಿ.. ನಿಮಗೆ ಅರ್ಥ ಆಗುತ್ತೆ.
RR vs LSG: ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ಬ್ಯಾಟಿಂಗ್ ಬಹಳ ನಿಧಾನವಾಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಇದರ ನಂತರ ಕಣಕ್ಕಿಳಿದ ರಾಜಸ್ಥಾನ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಕ್ನೋ ಪರ ಬೌಲಿಂಗ್ ಮಾಡಿದ ಆವೇಶ್ ಖಾನ್ 4 ಓವರ್ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು
Sachin Tendulkar Video: ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಪರ ಐಪಿಎಲ್-2023ರಲ್ಲಿ ಈ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 2 ಓವರ್’ಗಳಲ್ಲಿ 17 ರನ್ ಬಿಟ್ಟುಕೊಟ್ಟಿದ್ದರು. ಆದರೆ ಮಂಗಳವಾರ ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ವಿರುದ್ಧದ ಎರಡನೇ ಪಂದ್ಯದಲ್ಲಿ 18 ರನ್’ಗಳಿಗೆ 1 ವಿಕೆಟ್ ಪಡೆದರು.
RR vs LSG IPL 2023: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ (LSG) ನ ವಿಕೆಟ್ ಕೀಪರ್ ಕಂ ಬ್ಯಾಟ್ಸ್’ಮನ್ ಕ್ವಿಂಟನ್ ಡಿ ಕಾಕ್ ಈ ಸೀಸನ್’ನಲ್ಲಿ ಮೊದಲ ಅವಕಾಶ ಪಡೆಯಲು ಕಾಯುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್ ಅವರು ಟಿ20ಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ 2023ರ ಐಪಿಎಲ್’ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ.
LSG vs RR IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16ರ 26 ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs RR) ನಡುವೆ ಇಂದು ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನೊಬ್ಬ ತನ್ನ ಪತ್ನಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾನಂತೆ. ಅಷ್ಟೇ ಅಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಆತ ವಿಶೇಷ ಸಂದೇಶವನ್ನೂ ಬರೆದು ಕಣ್ಣೀರು ಹಾಕಿದ್ದಾನೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಜಿಯೋ ಸಿನಿಮಾ ವೀಕ್ಷಕರ ವೀಕ್ಷಣೆಯ ದಾಖಲೆಯನ್ನು ಮುರಿದಿದೆ. ಪಂದ್ಯದ ವೇಳೆ ಸಂಖ್ಯೆ 2.4 ಕೋಟಿಗೂ ಅಧಿಕ ವೀಕ್ಷಕರಿಂದ ವೀಕ್ಷಣೆ ಪಡೆದಿದೆ. ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಫ್ಲಾಟ್ಫಾರ್ಮ್ ಜಿಯೋ ಸಿನಿಮಾದಲ್ಲಿ ಇದುವರೆಗಿನ ಅತಿ ಹೆಚ್ಚು ವೀಕ್ಷಕರ ವೀಕ್ಷಣೆಯಾಗಿದೆ.
Cricketer Death: 20 ವರ್ಷದ ಯುವ ಕ್ರಿಕೆಟಿಗ ಬ್ರಿಟನ್’ನ ಸ್ಕೆಲ್ಮರ್ಸ್ಡೇಲ್ ಕ್ರಿಕೆಟ್ ಕ್ಲಬ್ ಪರ ಆಡಿದ್ದ ಕ್ರಿಸ್ಟೋಫರ್ ಟ್ರಂಪ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳಿ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಕಳೆದ ವಾರ ಶುಕ್ರವಾರ ರಾತ್ರಿ ಸ್ಕೆಲ್ಮರ್ಸ್’ಡೇಲ್’ನ ಕಾಬ್ಸ್ ಬ್ರೌ ಲೇನ್ ಬಳಿ ಕ್ರಿಸ್ಟೋಫರ್ ಆಡಿ ಎ1 ಅನ್ನು ಡ್ರೈವ್ ಮಾಡುತ್ತಿದ್ದರು. ಆಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
RCB vs CSK: ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು. ಇದಾದ ಬಳಿಕ ಗೆಲುವಿನ ಗುರಿ ತಲುಪಲು ಆರ್ಸಿಬಿ ತಂಡ ಮುನ್ನಡೆಯಿತು, ಆದರೆ 20 ಓವರ್’ನಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಶಕ್ತವಾಯಿತು.
Cricketer who played one match in IPL: ಕೆಲವು ಆಟಗಾರರಿಗೆ ಐಪಿಎಲ್’ನಲ್ಲಿ ಹೆಚ್ಚು ಆಡಲು ಅವಕಾಶ ಸಿಗುತ್ತಿಲ್ಲ. ಇಂದು ನಾವು ಐಪಿಎಲ್’ನಲ್ಲಿ ಒಂದು ಪಂದ್ಯವನ್ನು ಆಡಿ, ಬಳಿಕ ವೃತ್ತಿಜೀವನವನ್ನು ಕೊನೆಗೊಳಿಸಿದ ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Jos Buttler Proposed by Girl: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಇಂದು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ರಾಜಸ್ಥಾನ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ಸ್ಟಾರ್ ಓಪನರ್ ಜೋಸ್ ಬಟ್ಲರ್ ಅವರನ್ನು ಅಭಿಮಾನಿಯೊಬ್ಬರು ಭೇಟಿ ಮಾಡಿದ್ದಾರೆ.
IPL 2023: ಐಪಿಎಲ್ 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಂಕಟೇಶ್ ಅಯ್ಯರ್ ಇದುವರೆಗಿನ ಪಂದ್ಯಗಳಲ್ಲಿ ಅದ್ಭುತ ಸೃಷ್ಟಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 83 ರನ್’ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಇದಾದ ಬಳಿಕ ಭಾನುವಾರ (ಏಪ್ರಿಲ್ 16) ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ 49 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
MI vs KKR: ಐಪಿಎಲ್-2023ರ 22ನೇ ಪಂದ್ಯ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.
Virat Kohli vs Sourav Ganguly: ಆಟ ಮುಗಿದ ತಕ್ಷಣ ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸಾಂಪ್ರದಾಯಿಕವಾಗಿ ಹ್ಯಾಂಡ್ಶೇಕ್ ಮಾಡಲು ಬಂದರು. ಆದರೆ ಆ ಸಂದರ್ಭದಲ್ಲಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಇದ್ದ ಕೊಹ್ಲಿ, ಡೆಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಜೊತೆ ಇದ್ದ ಗಂಗೂಲಿಯವರನ್ನು ಗುರಾಯಿಸಿ ನೋಡಿ, ಹ್ಯಾಂಡ್ ಶೇಕ್ ಕೊಡದೆ ಮುಂದೆ ನಡೆದರು.
MS Dhoni: ಎಂ ಎಸ್ ಧೋನಿ ಎಂದರೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಕೀರ್ತಿ ಕ್ಯಾಪ್ಟನ್ ಕೂಲ್’ ಗೆ ಸೇರುತ್ತದೆ. ಅಷ್ಟೇ ಅಲ್ಲದೆ ಕ್ರಿಕೆಟ್’ನ ಮೂರು ಸ್ವರೂಪದಲ್ಲೂ ಚಾಂಪಿಯನ್ ಪ್ರಶಸ್ತಿ ಗೆದ್ದ ಏಕೈಕ ನಾಯಕ ಇವರು. ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ.
ಮ್ಯಾಚ್ ವೀಕ್ಷಿಸುವ ನೆಪದಲ್ಲಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಆರೋಪಿಗಳು, ಕೂತು ಹೊರಗಿನ ವ್ಯಕ್ತಿಗಳೊಂದಿಗೆ ದಂಧೆ ನಡೆಸುತ್ತಿದ್ದರು. ಲೈವ್ ಮ್ಯಾಚ್ಗೂ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಸಮಯಕ್ಕೂ ಕೆಲವು ಕ್ಷಣಗಳು ವ್ಯತ್ಯಾಸವಿದ್ದು ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳುತ್ತಿದ್ದರು.
Ben Stokes Injury Update: ಚೆನ್ನೈ ತಂಡ ಐಪಿಎಲ್-2023ರಲ್ಲಿ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದಿದ್ದರೆ ಎರಡು ಪಂದ್ಯಗಳು ಸೋತಿವೆ. ಚೆನ್ನೈ ತನ್ನ ತವರು ನೆಲ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸಿತ್ತು. ಈಗ ತಂಡವು ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಪ್ರಿಲ್ 17 ರಂದು ಆಡಬೇಕಾಗಿದೆ.
LSG Players Emotional Story: ಇತ್ತೀಚೆಗೆ ಆರ್ ಸಿ ಬಿ ವಿರುದ್ಧ ಕೊನೆಯ ಓವರ್’ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಈತ ತಂಡದ ಗೆಲುವಿಗೆ ಕೊಡುಗೆ ನೀಡಿದ್ದ. ಲಕ್ನೋ ಸೂಪರ್ ಜೈಂಟ್ಸ್ (ಎಲ್ ಎಸ್ ಜಿ) ಪರ ಆಡುತ್ತಿರುವ ನಿಕೋಲಸ್ ಪೂರನ್ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
Sunil Gavaskar on MS Dhoni: ಭಾರತದಲ್ಲಿ ಸದ್ಯ ಐಪಿಎಲ್ 16 ನೇ ಸೀಸನ್ ನಡೆಯುತ್ತಿದೆ. ಈ ಕ್ರೇಜ್ ಮಧ್ಯೆ, ಸುನಿಲ್ ಗವಾಸ್ಕರ್ ಅನುಭವಿ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಧೋನಿ ಪ್ರಸ್ತುತ ಐಪಿಎಲ್ 16 ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಸಿ ಎಸ್ ಕೆ ತಂಡದಲ್ಲಿ 200 ಪಂದ್ಯಗಳನ್ನು ಓರ್ವ ನಾಯಕನಾಗಿ ಮುನ್ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.