Karnataka Assembly Elections 2023: ಶಿರಸಿಯ ಸ್ಪೀಕರ್ ಕಚೇರಿಗೆ ಆಗಮಿಸಿದ ಎಂ ಪಿ ಕುಮಾರ ಸ್ವಾಮಿ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಂ ಪಿ ಕುಮಾರ ಸ್ವಾಮಿ ಅವರು, ಮೂರು ಬಾರಿ ಮೂಡಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಆದರೆ ಈ ಬಾರಿ ಬಿಜೆಪಿ ಪಕ್ಷದ ಕೆಲ ನಾಯಕರಿಂದಾಗಿ ಟಿಕೆಟ್ ಕೈ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕನ ಆಪ್ತ ಟೆಂಡರ್ ಕಮಿಷನ್ ದರ ಫಿಕ್ಸ್ ಮಾಡಿದ ಆರೋಪ ಕೇಳಿ ಬಂದಿದೆ.. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಆಪ್ತ ಗುತ್ತಿಗೆದಾರರಿಂದ ಲಕ್ಷ ಲಕ್ಷ ರೂಪಾಯಿ ಪಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಪರಪ್ಪನ ಅಗ್ರಹಾರ ಜೈಲಿಗೆ ಮಾಡಾಳ್ ವಿರೂಪಾಕ್ಷಪ್ಪ ಶಿಫ್ಟ್. ಬಿಜೆಪಿ ಶಾಸಕನನ್ನ ಜೈಲಿಗೆ ಕರೆತಂದ ಲೋಕಾ ಅಧಿಕಾರಿಗಳು. ಜೈಲಿನ ಆಸ್ಪತ್ರೆಯಲ್ಲಿ ವಿರೂಪಾಕ್ಷಪ್ಪನಿಗೆ ಆರೋಗ್ಯ ತಪಾಸಣೆ. ಆರೋಗ್ಯ ತಪಾಸಣೆ ಬಳಿಕ ಜೈಲಿನ ಕೊಠಡಿಗೆ ಮಾಡಾಳ್ ಶಿಫ್ಟ್.
ಬಿಜೆಪಿ ಶಾಸಕರಿಗೆ ಡಿಕೆಶಿ ಕರೆ ಮಾಡಿ ಆಹ್ವಾನ ನೀಡಿರೋ ವಿಚಾರ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಿಜೆಪಿಯ 18 ಶಾಸಕರನ್ನು ಕರೆದುಕೊಂಡು ಹೋದರಲ್ಲಾ ಆಗ ಅವರ ನೈತಿಕತೆ ಎಲ್ಲಿಗೆ ಹೋಗಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಹಕಾರ ಕೊಡ್ತೀನಿ. ಯಾವಾಗ ಅಧಿಕಾರಿಗಳು ಕರೆದ್ರೂ ವಿಚಾರಣೆಗೆ ಹಾಜರಾಗ್ತೀನಿ ಎಂದು ವಿಚಾರಣೆ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿಕೆ ನೀಡಿದ್ದಾರೆ.
ಪ್ರಶಾಂತ್ ಮಾಡಾಳ್ ಹೆಸರಿನಲ್ಲಿ ಬೇನಾಮಿ ಆಸ್ತಿಯಿರುವ ಬಗ್ಗೆ ಆರೋಪಿ ಸಿದ್ದೇಶ್ ಮಾಹಿತಿ ನೀಡಿದ್ದು ಇದರ ಬಗ್ಗೆ ತನಿಖೆ ಮಾಡಲು ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪ್ರಶಾಂತ್ ಮಡಾಳ್, ಸುರೇಂದ್ರ, ಹಾಗೂ ಸಿದ್ದೇಶ್ ಆರೋಪಿಗಳಾಗಿದ್ದಾರೆ.
ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ 5 ದಿನ ಕಳೆಯಿತು. ಈ ವೇಳೆ ಕೋಟಿ.. ಕೋಟಿ.. ಹಣ ಸಿಕ್ಕಿತ್ತು.. ಆದರೆ ಹಣದ ಬಗ್ಗೆ ಶಾಸಕ ಮಾಡಾಳ್ ಇಲ್ಲಿವರೆಗೂ ಸ್ಪಷ್ಟನೆ ಕೊಟ್ಟಿಲ್ಲ. ತಲೆತಪ್ಪಿಸಿಕೊಂಡು ಓಡಾಡುತ್ತಿರುವ ಎಂಎಲ್ಎ ಇಂದು ನೀರಿಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೋರೆ ಹೊಗಿದ್ದಾರೆ.
Siddaramaiah: ತಿ.ನರಸೀಪುರದಲ್ಲಿ ಸಂವಿಧಾನವನ್ನು ಕುರಿತು ಮಾತಾನಾಡಿದ ಸಿದ್ದರಾಮಯ್ಯ, ಸಂವಿಧಾನವನ್ನು ವಿರೋಧ ಮಾಡುವರೆಂದರೆ ಆರ್ ಎಸ್ಎಸ್ ಹಾಗೂ ಹಿಂದೂ ಮಹಾಸಭಾದವರು ಮತ್ತು ಸನಾತನ ಧರ್ಮದ ಪೋಷಕರು.
Janardhana Reddy: ಯಾರನ್ನೋ ಸೋಲಿಸಲು ನಾನು ಪಕ್ಷ ಕಟ್ಟಿಲ್ಲ, ಗೆಲ್ಲುವ ಕಡೆಗಳಲ್ಲಿ ಮಾತ್ರ ಹೆಜ್ಜೆ ಇಡ್ತಿದ್ದೇನೆ. ಗೆಲ್ಲುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡ್ತೀನಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಗಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
Amit Shah: ಮಾರ್ಚ್ 12 ರಂದು ಹೊನ್ನಾಳಿಗೆ ಆಗಮಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಹೊನ್ನಾಳಿ ತಾಲೂಕಿನ ಪಕ್ಕದ ಕ್ಷೇತ್ರವಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರ ವಾಗಿದೆ.
ಶಾಸಕನ ಪುತ್ರನ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿತ್ತು. ಲೋಕಾಯುಕ್ತ ಬೇಟೆಗೆ ಅಪ್ಪ ಮಗ ಸದ್ಯ ಥಂಡ ಹೊಡೆದಿದ್ರು. ಇದೇ ಕೇಸ್ನ ತನಿಖೆಯನ್ನ ಲೋಕಾಯುಕ್ತ ಚುರುಕುಗೊಳಿಸಿದೆ. ಮಗ ಜೈಲು ಪಾಲಾದ್ರೆ ಅಪ್ಪನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮಧ್ಯೆ ಮತ್ತಷ್ಟು ಬೆಚ್ಚಿ ಬೀಳೊ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ. ಐಟಿ ಹಾಗೂ ಇಡಿ ಶಾಸಕರ ಕುಟುಂಬಸ್ಥರಿಗೆ ಶಾಕ್ ನೀಡಲು ಮುಂದಾಗಿದೆ.
Karnataka Bribe case: ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿದಂತೆ ಬೇರೆ ಬೇರೆ ಕಡೆ ಲೋಕಾಯುಕ್ತ ಪೊಲೀಸರು ಆಕ್ಟಿವ್ ಅಗಿದ್ದಾರೆ. ಯಾವುದೇ ಕ್ಷಣದಲ್ಲಿ ಮಾಡಾಳು ವಿರೂಪಾಕ್ಷಪ್ಪರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
Karnataka Bribe Case: ಲಂಚದ ಮಾಹಿತಿ ಕಲೆ ಹಾಕಿದ ಬಳಿಕ ಪ್ರಕರಣದ ಬಗ್ಗೆ ಇಡಿಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಪ್ರಕರಣದ ಪ್ರಾಥಮಿಕ ತನಿಖೆಯ ವರದಿ ಸಹಿತ ಇಡಿಗೆ ಮಾಹಿತಿ ನೀಡಲಿದ್ದಾರೆಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.