MLA Satish Reddy : ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸ್ಕೆಚ್ : ದೂರಿನ ಹಿಂದಿದೆಯಾ ಚುನಾವಣೆ ಗಿಮಿಕ್..?

ಶಾಸಕ ಸತೀಶ್ ರೆಡ್ಡಿ‌ ಕೊಲೆಗೆ ರೌಡಿ ವಿಲ್ಸನ್ ಗಾರ್ಡನ್ ನಾಗಾನಿಗೆ ಸುಪಾರಿ ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Written by - VISHWANATH HARIHARA | Last Updated : Feb 15, 2023, 04:52 PM IST
  • ಶಾಸಕ ಸತೀಶ್ ರೆಡ್ಡಿ‌ ಕೊಲೆಗೆ ರೌಡಿ ವಿಲ್ಸನ್ ಗಾರ್ಡನ್ ನಾಗಾನಿಗೆ ಸುಪಾರಿ
  • ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
  • ಠಾಣೆಗೆ ದೂರು ದಾಖಲಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ
MLA Satish Reddy : ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸ್ಕೆಚ್ : ದೂರಿನ ಹಿಂದಿದೆಯಾ ಚುನಾವಣೆ ಗಿಮಿಕ್..? title=

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ‌ ಕೊಲೆಗೆ ರೌಡಿ ವಿಲ್ಸನ್ ಗಾರ್ಡನ್ ನಾಗಾನಿಗೆ ಸುಪಾರಿ ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.  ಶಾಸಕ ಸತೀಶ್ ರೆಡ್ಡಿ ಪಿಎ ಹರೀಶ್ ಬಾಬು ಕೋರ್ಟ್ ನಲ್ಲಿ ಪಿಸಿಆರ್ ಮೂಲಕ ಬೊಮ್ಮನಹಳ್ಳಿ ಠಾಣೆಗೆ ದೂರು ದಾಖಲಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನು ವಿಲ್ಸನ್ ಗಾರ್ಡನ್ ನಾಗ‌ ಹಾಗೂ ಶಾಸಕ ಸತೀಶ್ ರೆಡ್ಡಿ ಇಬ್ಬರು ಕೂಡ ಒಳ್ಳೆ ಸ್ನೇಹವಿದೆ ಎಂಬ ಮಾತಿದೆ.‌ ಆದರೆ ಈ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಬೊಮ್ಮನಹಳ್ಳಿ ಕಾಂಗ್ರೆಸ್ ಆಕಾಂಕ್ಷಿಯೊಬ್ಬರು ನಾಗನನ್ನ ಭೇಟಿ ಮಾಡಿರುವುದು ಈ ಪ್ರಕರಣ ದಾಖಲಾಗಲು ಕಾರಣ ಎನ್ನಲಾಗುತ್ತಿದೆ. ನಾಗನ ಸಹಾಯ ಕೇಳಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸತೀಶ್ ರೆಡ್ಡಿ ಮಣಿಸಲು ಪ್ಲಾನ್ ಮಾಡಿದ್ರಾ ಅನ್ನೋ ಅನುಮಾನ ಕೂಡ ಎದ್ದು ಕಾಣುತ್ತಿದೆ. ಸದ್ಯ ಬಂಧಿತರಲ್ಲಿ ಒಬ್ಬ ಅಪ್ರಾಪ್ತನಾಗಿದ್ದು,ಗಿರೀಶ್ ಎಂಬ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕ ಹುಡುಗರನ್ನು ಇಟ್ಟುಕೊಂಡು ಬೆಂಗಳೂರಿನ ಡಾನ್ ಪಟ್ಟಿಯಲ್ಲಿರುವ ವಿಲ್ಸನ್ ಗಾರ್ಡನ್ ನಾಗ ಕೊಲೆ ಯೋಚನೆ ಮಾಡಿದ್ನಾ ಎಂಬ  ಅನುಮಾನ ಕೂಡ ಕಾಡುತ್ತಿದೆ.

ಇದನ್ನೂ ಓದಿ : ಬೆಳ್ಳಿ ಚೈನ್‌ ಗಿಫ್ಟ್‌ ಕೊಟ್ರೂ ಬಂಗಾರದ್ದು ಬೇಕು ಎಂದ ಗೆಳತಿ ಹತ್ಯೆ..!

ಅದೇನೆ ಇರ್ಲಿ ಸದ್ಯ ತನಿಖೆ ಕೈಗೊಂಡಿರುವ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯೆಯನ್ನ ಬಯಲಿಗೆಳೆಯಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News