ಲೋಕಾಯುಕ್ತ ಸಂಸ್ಥೆ ಜನರ ಪರವಾಗಿದೆ, ಲಂಚ ಕೇಳಿದ್ರೆ ಮಾಹಿತಿ ನೀಡಿ: ನ್ಯಾ. ಬಿ.ಎಸ್.ಪಾಟೀಲ್

Karnataka Lokayukta: ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಜನರು ಲೋಕಾಯುಕ್ತ ಸಂಸ್ಥೆ ಜೊತೆಗೆ ಕೈಜೋಡಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದಾರೆ.

Written by - Puttaraj K Alur | Last Updated : Mar 3, 2023, 12:44 PM IST
  • ಲೋಕಾಯುಕ್ತ ಸಂಸ್ಥೆ ಜನರ ಪರವಾಗಿದ್ದು, ಲಂಚ ಕೇಳಿದ್ರೆ ನಮಗೆ ಮಾಹಿತಿ ನೀಡಿ
  • ಲಂಚ ಕೇಳುವವರ ವಿರುದ್ಧ ದೂರು ನೀಡಿದ್ರೆ ನಾವು ಅವರನ್ನು ಟ್ರ್ಯಾಪ್ ಮಾಡುತ್ತೇವೆ
  • ಭ್ರಷ್ಟಾಚಾರಿಗಳ ವಿರುದ್ಧ ಗುಡುಗಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್
ಲೋಕಾಯುಕ್ತ ಸಂಸ್ಥೆ ಜನರ ಪರವಾಗಿದೆ, ಲಂಚ ಕೇಳಿದ್ರೆ ಮಾಹಿತಿ ನೀಡಿ: ನ್ಯಾ. ಬಿ.ಎಸ್.ಪಾಟೀಲ್ title=
'ಲಂಚ ಕೇಳಿದ್ರೆ ಮಾಹಿತಿ ನೀಡಿ'

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಜನರ ಪರವಾಗಿದ್ದು, ಲಂಚ ಕೇಳಿದ್ರೆ ನಮಗೆ ಮಾಹಿತಿ ನೀಡಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಪ್ರಶಾಂತ್ 40 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು.

ಇದೇ ವಿಚಾರವಾಗಿ ಮಾತನಾಡಿರುವ ನ್ಯಾ.ಬಿ.ಎಸ್.ಪಾಟೀಲ್, ‘ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಜನರು ಲೋಕಾಯುಕ್ತ ಸಂಸ್ಥೆ ಜೊತೆಗೆ ಕೈಜೋಡಿಸಬೇಕು’ ಎಂದು ಹೇಳಿದ್ದಾರೆ. ‘ಲಂಚ ಕೇಳುವವರು ಒಂದಲ್ಲಾ ಒಂದು ದಿನ ಸಿಕ್ಕೇ ಸಿಗುತ್ತಾರೆ. ಇದರಿಂದ ಜನರು ಹೆಲ್ಪ್ ಲೆಸ್ ಆಗಬೇಕಾಗಿಲ್ಲ, ಲೋಕಾಯುಕ್ತ ಸಂಸ್ಥೆ ನಿಮ್ಮ ಪರವಾಗಿದೆ, ಲಂಚ ಕೇಳಿದ್ರೆ ಮಾಹಿತಿ ನೀಡಿ, ನಾವು ಅವರನ್ನು ಟ್ರ್ಯಾಫ್ ಮಾಡ್ತೇವೆ. ಲಂಚತನವನ್ನು ಹೋಗಲಾಡಿಸಲು ನಮ್ಮೊಂದಿಗೆ ಕೈ ಜೋಡಿಸಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Lokayukta : ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕನ ಮಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ!

‘ಎಲ್ಲಿ ಭ್ರಷ್ಟಾಚಾರ ನಡೆಯುತ್ತೋ ಅದರ ಬಗ್ಗೆ ಜನರು ಮಾಹಿತಿ ನೀಡಬೇಕು. ನಿನ್ನೆಯ ಘಟನೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಶಾಸಕರ ಮನೆಯಲ್ಲೂ ಹಣ ಪತ್ತೆ ಯಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ, ತಪ್ಪಿತಸ್ಥರ ಮೇಲೆ ಕ್ರಮ  ತೆಗೆದುಕೊಳ್ತೇವೆ. ನಮ್ಮ ಅಧಿಕಾರಿಗಳು ಶ್ರಮ ವಹಿಸಿ ಕಾರ್ಯಚರಣೆ ನಡೆಸಿದ್ದಾರೆ. ದೂರುದಾರ ಕೆಲಸವನ್ನು ನಾನು ಶ್ಲಾಘಿಸುತ್ತೇನೆ. ಎಲ್ಲಾ ಜನರಲ್ಲೂ ಇಂತಹ ಮನೋಭಾವನೆ ಬರಬೇಕು. ಇದರಿಂದ ಭ್ರಷ್ಟಚಾರವನ್ನು ಹೋಗಲಾಡಿಸಬಹುದು’ ಎಂದು ಹೇಳಿದ್ದಾರೆ.

‘ಲೀಗಲ್ ಕೆಲಸ ಮಾಡಿಸಿಕೊಳ್ಳಲು ಅಕ್ರಮ ಕೆಲಸ ಮಾಡಬಾರದು. ಯಾವುದೇ ಸರ್ಕಾರಿ ಕೆಲಸಕ್ಕೆ ಲಂಚವನ್ನು ಕೊಡಬೇಡಿ. ಪ್ರಕರಣ ಸಂಬಂಧ ಈಗಾಗಲೇ 5 ಜನರನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಭ್ರಷ್ಟಾಚಾರದಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗುತ್ತೆ. ಕಾನೂನು ಕಣ್ಣಿಗೆ ಎಲ್ಲರೂ ಒಂದೆ. ಎಲ್ಲರನ್ನು ಕಾನೂನು ಪ್ರಕಾರವಾಗಿಯೇ ವಿಚಾರಣೆ ನಡೆಸಲಾಗುತ್ತದೆ’ ಎಂದು ಲೋಕಾ ನ್ಯಾ. ಬಿ.ಎಸ್.ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಸಿಹಿ ತಿಂಡಿ ಎಂದು ಇರುವೆ ಪೌಡರ್ ತಿಂದು ಬಾಲಕ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News