ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್‌ ಆಯ್ಕೆ..!

Juices for Health: ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ...  

Written by - Zee Kannada News Desk | Last Updated : Jun 27, 2024, 11:21 AM IST
  • ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು.
  • ಸೌಂದರ್ಯವನ್ನು ಹೆಚ್ಚಿಸಲು ಅಗ್ಗದ ಮಾರ್ಗವೂ ಇದೆ. ಅದೂ ನಮ್ಮ ಅಡುಗೆ ಮನೆಯಲ್ಲಿಯೇ ಇದೆ.
  • ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳನ್ನು ಕರೀದಿಸಿ ಬಳಸುತ್ತಾರೆ.
ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್‌ ಆಯ್ಕೆ..! title=

Juices for Health: ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ...

ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳನ್ನು ಕರೀದಿಸಿ ಬಳಸುತ್ತಾರೆ. ಈ ಕಾರಣದಿಂದಾಗಿ, ಫಲಿತಾಂಶಗಳನ್ನು ತಕ್ಷಣವೇ ಕಾಣಬಹುದು. ಆದರೆ ಅವುಗಳಲ್ಲಿರುವ ರಾಸಾಯನಿಕಗಳು ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹಾಳುಮಾಡುವುದರೊಂದಿಗೆ ಕ್ಯಾನ್ಸರ್‌ ನಂತಹ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ. 

ಇದನ್ನೂ ಓದಿ: ಹೆಚ್ಚಾಗಿ ನೀರು ಕುಡಿಯುವುದರಿಂದ ಏನೆಲ್ಲಾ ಅಪಾಯಗಳಿವೆ ಗೊತ್ತಾ..?

ಸೌಂದರ್ಯವನ್ನು ಹೆಚ್ಚಿಸಲು ಅಗ್ಗದ ಮಾರ್ಗವೂ ಇದೆ. ಅದೂ ನಮ್ಮ ಅಡುಗೆ ಮನೆಯಲ್ಲಿಯೇ ಇದೆ. ಅದು ಯಾವುದು ಗೊತ್ತಾಗಬೇಕಾ ಮುಂದೆ ಓದಿ:

ಬಿಳಿ ಮಜ್ಜಿಗೆ:
ಮಜ್ಜಿಗೆಯೊಂದಿಗೆ ತುಂಬಾ ಸರಳವಾದ ಪಾನೀಯವನ್ನು ಮಾಡಬಹುದು. ಅದನ್ನು ಹೇಗೆ ಮಾಡಬೇಕೆಂದು ನೋಡೋಣ... 
ಪಾನಿಯಾವನ್ನು ತಯಾರಿಸಲು, ಮೊದಲು ಕೆಲವು ಒಣ ಕರಿಬೇವಿನ ಎಲೆಗಳನ್ನು ಒಂದು ಲೋಟ ಮಜ್ಜಿಗೆಯಲ್ಲಿ ಪುಡಿಮಾಡಿ ಹಾಕಿ. ಸ್ವಲ್ಪ ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಕುಡಿಯಿರಿ ಈ ಪಾನೀಯವನ್ನು ಕುಡಿಯುವುದರಿಂದ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

 ಹಸಿರು ಪಾನಿಯ:
ಸ್ವಲ್ಪ ಕೊತ್ತಂಬರಿ ಸೊಪ್ಪು , ಒಂದು ಗೊಂಚಲು ಪುದೀನ ಸೊಪ್ಪು, ಸೌತೆಕಾಯಿ ಚೂರುಗಳು, ಅರ್ಧ ಚಮಚ ನಿಂಬೆ ರಸ, ಉಪ್ಪು. ಈ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ಇದಕ್ಕೆ ಸ್ವಲ್ಪ ನೀರು ಸೇರಿಸಿ. ರಾತ್ರಿ ಊಟದ ನಂತರ ಇದನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

ಇದನ್ನೂ ಓದಿ: ಮೊಟ್ಟೆ ತಿಂದ ನಂತರ ಇವುಗಳನ್ನು ತಿನ್ನುವ ತಪ್ಪನ್ನು ಮಾಡಬೇಡಿ..!

ಗುಲಾಬಿ ಪಾನಿಯ:
ಗುಲಾಬಿ ಜ್ಯೂಸ್ ಮಾಡಲು ಬೀಟ್ ರೂಟ್, ಸೌತೆಕಾಯಿ, ಕ್ಯಾರೆಟ್, ಸೇಬು, ನೆಲ್ಲಿಕಾಯಿ  ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಜ್ಯೂಸ್ ಮಾಡಿ. ಅಂತಿಮವಾಗಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ನಿಂಬೆ ರಸವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ರಸದಲ್ಲಿ ಬೆರೆಸಿದ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು. ಇದು ಚರ್ಮ, ಆರೋಗ್ಯ, ತೂಕ ನಷ್ಟ, ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News