Bribe case: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗಾಗಿ ತೀವ್ರ ಹುಡುಕಾಟ!

Karnataka Bribe case: ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿದಂತೆ ಬೇರೆ ಬೇರೆ ಕಡೆ ಲೋಕಾಯುಕ್ತ ಪೊಲೀಸರು ಆಕ್ಟಿವ್ ಅಗಿದ್ದಾರೆ. ಯಾವುದೇ ಕ್ಷಣದಲ್ಲಿ ಮಾಡಾಳು ವಿರೂಪಾಕ್ಷಪ್ಪರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

Written by - Zee Kannada News Desk | Last Updated : Mar 4, 2023, 01:59 PM IST
  • ಲಂಚದ ಪ್ರಕರಣ ಬಹಿರಂಗವಾದ ಬಳಿಕ KSDL ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ
  • ರಾಜೀನಾಮೆ ನೀಡಿದ ಬಳಿಕ ಯಾರಿಗೂ ಹೇಳದೆ ನಾಪತ್ತೆಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ
  • ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿ ವಿವಿಧ ಕಡೆ ಆಕ್ಟಿವ್ ಅಗಿರುವ ಲೋಕಾಯುಕ್ತ ಪೊಲೀಸರು
Bribe case: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗಾಗಿ ತೀವ್ರ ಹುಡುಕಾಟ! title=
ಮಾಡಾಳ್ ವಿರೂಪಾಕ್ಷಪ್ಪಗಾಗಿ ತೀವ್ರ ಹುಡುಕಾಟ!

ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‍ಹ್ಯಾಂಡ್‍ ಆಗಿ ಸಿಕ್ಕಿಬಿದ್ದಿದ್ದರು.

ಪುತ್ರನ ಲಂಚದ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ KSDL ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದರು. ಬಳಿಕ 2 ದಿನಗಳಿಂದ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಯಾವುದೇ ಸುಳಿವು ನೀಡದೆ, ಮನೆಯವರಿಗೂ ಮಾಹಿತಿ ನೀಡಿದೆ ಶಾಸಕರು ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೆ ಲೋಕಾಯಕ್ತ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: Shani Uday In Kumbha: ಕುಂಭ ರಾಶಿಯಲ್ಲಿ ಶನಿ ಉದಯ, ಈ 5 ರಾಶಿಯವರಿಗೆ ದೊಡ್ಡ ಗಂಡಾಂತರ!

ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿದಂತೆ ಬೇರೆ ಬೇರೆ ಕಡೆ ಲೋಕಾಯುಕ್ತ ಪೊಲೀಸರು ಆಕ್ಟಿವ್ ಅಗಿದ್ದಾರೆ. ಯಾವುದೇ ಕ್ಷಣದಲ್ಲಿ ಮಾಡಾಳು ವಿರೂಪಾಕ್ಷಪ್ಪರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ವಶಕ್ಕೆ ಪಡೆದು ಪ್ರಕರಣ ಸಂಬಂಧ ವಿಚಾರಣೆ ನಡೆಸಲಿದ್ದಾರೆ. ಪುತ್ರ ಪ್ರಶಾಂತ್ ಡೀಲ್‍ನಲ್ಲಿ ತಂದೆಯ ಪಾತ್ರದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಅಪ್ಪ-ಮಗ ಒಟ್ಟಿಗೆ ಸೇರಿ ಡೀಲ್ ನಡೆಸ್ತಿದ್ರಾ? ಇಲ್ಲ ಅಪ್ಪನಿಗೆ ಗೊತ್ತಿಲ್ಲದ ಹಾಗೆ ಮಗ ಒಬ್ಬನೆ ಡೀಲ್ ಮಾಡ್ತಿದ್ನಾ..? ಅನ್ನೋದರ ಬಗ್ಗೆ ವಿಚಾರಣೆ ನಡೆಯಲಿದೆ.

ಪುತ್ರನ ಲಂಚದ ಪ್ರಕರಣದಲ್ಲಿ ತಂದೆ ಇನ್ವಾಲ್ ಅಗಿದ್ರೆ ಅದಕ್ಕೆ ಸೂಕ್ತ ಸಾಕ್ಷ್ಯಗಳು ಬೇಕಾಗುತ್ತವೆ. ಈಗಾಗಲೇ ಮಾಡಾಳು ವಿರೂಪಾಕ್ಷಪ್ಪನ‌ನ್ನು ಲೋಕಾಯುಕ್ತ ಅಧಿಕಾರಿಗಳು ಪ್ರಕರಣದಲ್ಲಿ ಮೊದಲ ಆರೋಪಿ ಮಾಡಿದ್ದಾರೆ. ಹಾಗಿದ್ರೆ ಬಿಜೆಪಿ ಶಾಸಕರ ವಿರುದ್ಧ ಏನೆಲ್ಲಾ ಸಾಕ್ಷಿ ಸಿಕ್ಕಿರಬಹುದು..? ಟೆಂಡರ್ ಹಾಕಿದ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದ ಸಾಕ್ಷ್ಯಗಳು, ಕಿಕ್ ಬ್ಯಾಕ್ ಪಡೆಯುವಾಗ ದೂರುದಾರ ವಿಡಿಯೋ ಇಲ್ಲವೇ, ಅಡಿಯೋ ಮಾಡುಕೊಂಡಿರಬೇಕು, ಹಣ ಹಾಕಿಸಿಕೊಂಡ ಬ್ಯಾಂಕ್ ಮಾಹಿತಿ ನೀಡಿರಬೇಕು, ಅವರು ಎಷ್ಟು ಹಣವನ್ನು ಕಿಕ್ ಬ್ಯಾಕ್ ಪಡೆದ್ರು ಎಂದು ಹೇಳಿದ ಹಣಕ್ಕೆ ಟ್ಯಾಲಿ ಅಗಬೇಕು. ಈ ಎಲ್ಲಾ ಸಾಕ್ಷ್ಯಗಳು ಮಾಡಾಳು ವಿರೂಪಾಕ್ಷಪ್ಪನ ವಿರುದ್ಧ ಅಧಿಕಾರಿಗಳು ಕಲೆ ಹಾಕಿರಬಹುದು.

ಇದನ್ನೂ ಓದಿ: Holi 2023 : ಹೋಳಿ ಹಬ್ಬದಂದು ಈ 2 ಬಣ್ಣದ ಬಟ್ಟೆ ಧರಿಸಬೇಡಿ, ಮನೆಯಲ್ಲಿ ದುಷ್ಟ ಶಕ್ತಿಗಳ ಸಮಾಗಮವಾಗುತ್ತೆ

 ಅಲ್ಲದೆ ತಾಂತ್ರಿಕವಾಗಿ ಡಿಜಿಟಲ್‌ ಸಾಕ್ಷ್ಯಗಳನ್ನು ಲೋಕಾಯುಕ್ತ ಅಧಿಕಾರಿಗಳು ಕಲೆ ಹಾಕಲಿದ್ದಾರೆ. ಈ ಎಲ್ಲಾ ಮಾಹಿತಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ವಶಕ್ಕೆ‌ ಪಡೆದು ವಿಚಾರಣೆ ನಡೆಯಲಿದೆ. ವಿಚಾರಣೆಯ ವೇಳೆ ಭ್ರಷ್ಟಾಚಾರ ಸಾಬೀತು ಆದರೆ ತಕ್ಷಣವೇವಿರೂಪಾಕ್ಷಪ್ಪರನ್ನು ಬಂಧನ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News