Madal Bribe Case : ʼಮಾಡಾಳ್‌ʼ ಮಾಯ, ಕೋಟಿ ಕೋಟಿ ಹಣಕ್ಕಿಲ್ಲ ಸ್ಪಷ್ಟನೆ..! ಕೋರ್ಟ್‌ ಜಾಮೀನು ಕೊಡುತ್ತಾ..?

ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ‌ ಮಾಡಿ 5 ದಿನ ಕಳೆಯಿತು. ಈ ವೇಳೆ ಕೋಟಿ.. ಕೋಟಿ.. ಹಣ ಸಿಕ್ಕಿತ್ತು.. ಆದರೆ ಹಣದ ಬಗ್ಗೆ ಶಾಸಕ ಮಾಡಾಳ್ ಇಲ್ಲಿವರೆಗೂ ಸ್ಪಷ್ಟನೆ ‌ಕೊಟ್ಟಿಲ್ಲ. ತಲೆತಪ್ಪಿಸಿಕೊಂಡು ಓಡಾಡುತ್ತಿರುವ ಎಂಎಲ್‌ಎ ಇಂದು ನೀರಿಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೋರೆ ಹೊಗಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Mar 6, 2023, 07:06 PM IST
  • ಲೋಕಾ ಅಧಿಕಾರಿಗಳ ಕೈಗೆ ಸಿಗದ ಶಾಸಕ..!
  • ನೀರಿಕ್ಷಣಾ ಜಾಮೀನಿಗಾಗಿ ವಿರೂಪಾಕ್ಷಪ್ಪ ಹೈಕೋರ್ಟ್ ಮೊರೆ
  • ಎಂಎಲ್‌ಗೆ ನೋಟೀಸ್ ನೀಡಲು ಲೋಕಾ ಸಿದ್ಧತೆ..!?
Madal Bribe Case : ʼಮಾಡಾಳ್‌ʼ ಮಾಯ, ಕೋಟಿ ಕೋಟಿ ಹಣಕ್ಕಿಲ್ಲ ಸ್ಪಷ್ಟನೆ..! ಕೋರ್ಟ್‌ ಜಾಮೀನು ಕೊಡುತ್ತಾ..? title=

ಬೆಂಗಳೂರು : ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ‌ ಮಾಡಿ 5 ದಿನ ಕಳೆಯಿತು. ಈ ವೇಳೆ ಕೋಟಿ.. ಕೋಟಿ.. ಹಣ ಸಿಕ್ಕಿತ್ತು.. ಆದರೆ ಹಣದ ಬಗ್ಗೆ ಶಾಸಕ ಮಾಡಾಳ್ ಇಲ್ಲಿವರೆಗೂ ಸ್ಪಷ್ಟನೆ ‌ಕೊಟ್ಟಿಲ್ಲ. ತಲೆತಪ್ಪಿಸಿಕೊಂಡು ಓಡಾಡುತ್ತಿರುವ ಎಂಎಲ್‌ಎ ಇಂದು ನೀರಿಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೋರೆ ಹೊಗಿದ್ದಾರೆ.

ಯೆಸ್.. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಯುಕ್ತ ದಾಳಿ ಮಾಡಿ ಸರಿ ಐದು ದಿನಗಳು ಕಳೆದಿದೆ..‌ ಆದರೆ ಶಾಸಕರ ಪುತ್ರನ ಮನೆಯಲ್ಲಿ ಸಿಕ್ಕ ಕಂತೆ ಕಂತೆ ನೋಟಿನ ಬಗ್ಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತ್ರ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಮತ್ತೊಂದು ಕಡೆ ಲೋಕಾಯಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ವಿಶೇಷ ತಂಡ ರಚಿಸಿ ಶಾಸಕ ಮಾಡಾಳ್ ಗಾಗಿ ತಲಾಶ್ ನಡೆಸಿದ್ದಾರೆ. ಆದರೆ ಇಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತ್ರ ಯಾರ ಕೈಗೂ ಸಿಗದೇ ನೀರಿಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿ ಶೀಘ್ರ ವಿಚಾರಣೆ ನಡೆಸುವಂತೆ ಕೋರಿದ್ದಾರೆ,, ಆದರೆ ಕೋರ್ಟ್‌ ನಾಳೆ ಲಿಸ್ಟ್‌ ಮಾಡಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ಇದನ್ನೂ ಓದಿ: Sumalatha Ambarish: ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕನ್ಫರ್ಮ್ ಆಯ್ತಾ?

ಇನ್ನೂ ಕೆ ಎಸ್ ಡಿಎಲ್ ಇಲಾಖೆಯ ಟೆಂಡರ್ ವಿಚಾರವಾಗಿ ಕಮಿಷನ್ ಹಣ ಕೇಳಿದ್ರು ಅನ್ನೋ ಆರೋಪ ಶಾಸಕರ ಮೇಲೆ ಇದೆ. ಸದ್ಯ ಅಧಿಕಾರಿಗಳು ಸಿಆರ್ ಪಿಸಿ 41(a) ಅಡಿಯಲ್ಲಿ ಶಾಸಕರ ವಿರೂಪಾಕ್ಷಪ್ಪ ಮನೆ, ಎಲ್ ಹೆಚ್ ನಿವಾಸ 119 ಕೊಠಡಿ ಕೆಎಸ್ ಡಿಎಲ್ ಕಚೇರಿಗೆ ಹಾಗೂ ಚನ್ನಗಿರಿ ಮನೆಗೆ ನೊಟೀಸ್ ಕಳಿಸಲು ಸಿದ್ಧತೆ ನಡೆಸಿದ್ದಾರೆ.  

ಇನ್ನೂ ಪ್ರಶಾಂತ್‌ ಮಾಡಾಳ್‌ ಮನೆಯಲ್ಲಿ ಡೈರಿಯೊಂದು ಅಧಿಕಾರಿಗಳಿಗೆ ದೊರೆತಿದ್ದು, ಅದರಲ್ಲಿ ಕೋಡ್‌ ವರ್ಡ್‌ ಮೂಲಕ ಹಣದ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಇದೆ. ಶಾಸಕ ವಿರುಪಾಕ್ಷಪ್ಪ ಮಾಡಾಳ್ ರವರ ಸಂಜಯನಗರದ ಡಾಲರ್ಸ್ ಕಾಲೋನಿ ಮನೆಯಲ್ಲಿ ಸಿಕ್ಕ ಆರು ಕೋಟಿ ಹಣದ ಬಗ್ಗೆ ಶಾಸಕನ ಪುತ್ರ ಪ್ರಶಾಂತ್ ಪತ್ನಿಯಿಂದ ಲೋಕಯುಕ್ತ ಅಧಿಕಾರಿಗಳು ಹೇಳಿಕೆ ಪಡಿದಿದ್ದಾರೆ. 6 ಕೋಟಿ ಹಣ ಸಿಕ್ಕಿದು ನಮ್ಮ ಮಾವ ಮಲಗುವ ಕೋಣೆಯಲ್ಲಿ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಶಾಸಕ ಮಾಡಾಳ್‌ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. 

ಇದನ್ನೂ ಓದಿ: Siddaramaiah: ʼಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷʼ-ಮಾಜಿ ಸಿಎಂ ಸಿದ್ದರಾಮಯ್ಯ

ಅದಸದ್ಯ ಶಾಸಕ ವಿರೂಪಾಕ್ಷಪ್ಪ ನೀರಿಕ್ಷಣಾ ಜಾಮೀನು ಅರ್ಜಿ ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಲೋಕಾ ಆಧಿಕಾರಿಗಳಿಂದ  ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಾಳೆ ಶಾಸಕರಿಗೆ ನೀರಿಕ್ಷಣಾ ಜಾಮೀನ ಸಿಗುತ್ತಾ ಇಲ್ವಾ ಅನ್ನೋದು ಕಾಯ್ದು ನೋಡ್ಬೇಕಾಗಿದೆ. ಅದೆನೇ ಇರ್ಲಿ. ಪ್ರಕರಣದಲ್ಲಿ ಶಾಸಕರೇ ಎ1 ಆರೋಪಿಯಾಗಿದ್ದಾರೆ. ಆದರೆ ವಿಚಾರಣೆ ಎದುರಿಸದೇ ಅಧಿಕಾರಿಗಳ ಕೈಗೆ ಸಿಗದಿರುವುದು ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ಕೊಟ್ಟಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News