ಅಫ್ಘಾನಿಸ್ತಾನದ ಅರಿಯಾನಾ ಅಫ್ಘಾನ್ ಏರ್ಲೈನ್ಸ್ ಮತ್ತು ಕಾಮಾ ಏರ್ನ ಇಬ್ಬರು ಅಧಿಕಾರಿಗಳು, ಈ ಆದೇಶದ ಬಗ್ಗೆ ತಿಳಿಸಿದ್ದಾರೆ. ಪುರುಷ ಸಂಬಂಧಿ ಇಲ್ಲದೆ ಮಹಿಳೆಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡದಂತೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನ್ ನೇತೃತ್ವದ ಸರ್ಕಾರವು ದೇಶಾದ್ಯಂತ ಬಾಲಕಿಯರಿಗಾಗಿ ಶಾಲೆಗಳನ್ನು ಪುನಃ ತೆರೆಯುವುದು ತಮ್ಮ ಜವಾಬ್ದಾರಿಯಾಗಿದೆಯೇ ಹೊರತು ಪ್ರಪಂಚದ ಒತ್ತಡದಿಂದಲ್ಲ ಎಂದು ಹೇಳಿದೆ.
2022 ರ ಹೊಸ ವರ್ಷದ ಮೊದಲ ದಿನದಂದು ಲಸಿಕೆಗಳನ್ನು ಸರಬರಾಜು ಮಾಡಿದ ನಂತರ ಮುಂಬರುವ ವಾರಗಳಲ್ಲಿ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಕಳುಹಿಸಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.
Imran Khan blames US: ಅಫ್ಘಾನಿಸ್ತಾನದಲ್ಲಿ (Afghanistan) ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಗೆ ಯುನೈಟೆಡ್ ಸ್ಟೇಟ್ಸ್ ಕಾರಣ. ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ತಪ್ಪಾಗಿ $8 ಮಿಲಿಯನ್ ಮೊತ್ತವನ್ನು ತಜಕಿಸ್ತಾನಕ್ಕೆ ವರ್ಗಾಯಿಸಿದೆ. ಈಗ ಅದನ್ನು ಮರಳಿ ಕೇಳುತ್ತಿದೆ, ಆದರೆ ತಜಕಿಸ್ತಾನ್ ಮೊತ್ತವನ್ನು ಹಿಂದಿರುಗಿಸಲು ನಿರಾಕರಿಸಿದೆ.
ಕಾಮ್ ಏರ್ವೇಸ್ ಮೂಲಕ ಭಾರತವು ಶನಿವಾರ 1.6 ಮೆಟ್ರಿಕ್ ಟನ್ಗಳಷ್ಟು ಔಷಧಿಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ.ಆಗಸ್ಟ್ನಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ನವದೆಹಲಿಯಿಂದ ಕಾಬೂಲ್ಗೆ ನೀಡಿರುವ ಮೊದಲ ಸಹಾಯ ಇದಾಗಿದೆ.
ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಮತ್ತು ಹದಗೆಡುತ್ತಿರುವ ಆರ್ಥಿಕತೆಯಿಂದ ಅಫ್ಘಾನಿಸ್ತಾನ ಕಂಗೆಟ್ಟಿದೆ. ಹಲವಾರು ಕಾಬೂಲ್ ನಿವಾಸಿಗಳು ಅಫ್ಘನ್ ಕರೆನ್ಸಿ ವಿರುದ್ಧ ಡಾಲರ್ನ ಹೆಚ್ಚುತ್ತಿರುವ ಮೌಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Afghanistan Latest News: ಅಫ್ಘಾನಿಸ್ತಾನದ ಆಕ್ರಮಣದ ನಂತರ, ತಾಲಿಬಾನ್ ಪ್ರತಿದಿನ ಹೊಸ ತೀರ್ಪುಗಳನ್ನು ನೀಡುವುದನ್ನು ಮುಂದುವರೆಸಿದೆ. ಆದರೆ ಈ ನಡುವೆ ಭಯೋತ್ಪಾದಕ ಸಂಘಟನೆ ತಾಲಿಬಾನ್ ಉತ್ತಮ ನಿರ್ಧಾರ ಕೈಗೊಂಡಿದೆ.
ಅಫ್ಘಾನಿಸ್ತಾನದಾದ್ಯಂತ ಕಳೆದ ಮೂರು ತಿಂಗಳಲ್ಲಿ ಕನಿಷ್ಠ 600 ಐಸಿಸ್ (ದಾಶ್) ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ದೇಶದ ಗುಪ್ತಚರ ಇಲಾಖೆ ಹೇಳಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
Afghanistan: ಇಸ್ಲಾಮಿಕ್ ಸ್ಟೇಟ್ ವಿಶೇಷ ತಾಲಿಬಾನ್ ಕಮಾಂಡರ್ ಅನ್ನು ಹತ್ಯೆಗೈದಿದ್ದು ತಾಲಿಬಾನ್ ಮತ್ತು ಪಾಕಿಸ್ತಾನ ಭಾರೀ ಹಿನ್ನಡೆ ಅನುಭವಿಸಿವೆ. ಈ ಕಮಾಂಡರ್ ಹಕ್ಕಾನಿ ನೆಟ್ವರ್ಕ್ನೊಂದಿಗೆ ಸಂಬಂಧ ಹೊಂದಿದ್ದನು ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.