Women Cricket: ತಾಲಿಬಾನಿಗಳ ಹಸ್ತಕ್ಷೇಪ, ಅಫ್ಘನ್ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಲಾಗುತ್ತದೆಯೇ?

Women Cricket: ತಾಲಿಬಾನ್ ಆಡಳಿತದ ನಂತರ ಅಫ್ಘಾನಿಸ್ತಾನವು ಮಹಿಳಾ ಕ್ರಿಕೆಟ್ ಆಡುವುದನ್ನು ನಿಷೇಧಿಸಿತು, ಆದರೂ ಪುರುಷರಿಗೆ 'ಜಂಟಲ್‌ಮ್ಯಾನ್ಸ್ ಆಟ' ಆಡಲು ಅವಕಾಶವಿತ್ತು.

Written by - Yashaswini V | Last Updated : Nov 23, 2021, 07:03 AM IST
  • ಅಫ್ಘಾನಿಸ್ತಾನದಲ್ಲಿ ವಿಚಿತ್ರ ಕಾನೂನುಗಳು
  • ಮಹಿಳೆಯರು ಕ್ರಿಕೆಟ್ ಆಡುವುದಕ್ಕೆ ನಿಷೇಧ
  • ಮಹಿಳಾ ಕ್ರಿಕೆಟ್‌ಗೆ ಯಾವಾಗ ಅನುಮತಿ ನೀಡಲಾಗುತ್ತದೆ?
  • ಈಗ ಐಸಿಸಿಯ ಮುಂದಿನ ಹೆಜ್ಜೆ ಏನು
Women Cricket: ತಾಲಿಬಾನಿಗಳ ಹಸ್ತಕ್ಷೇಪ, ಅಫ್ಘನ್ ಕ್ರಿಕೆಟ್ ಮಂಡಳಿಯನ್ನು ನಿಷೇಧಿಸಲಾಗುತ್ತದೆಯೇ?  title=
Afghanistan Women Cricket Team

Women Cricket: ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ತಾಲಿಬಾನ್‌ಗಳು ತಮ್ಮ ದೇಶದಲ್ಲಿ ಮಹಿಳೆಯರು ಕ್ರಿಕೆಟ್ ಆಡುವುದನ್ನು ನಿಷೇಧಿಸಿದ್ದು, ಇದಕ್ಕೆ ವಿಶ್ವದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ದೇಶದಲ್ಲಿ ಕ್ರಿಕೆಟ್ ಜೊತೆಗೆ ಮಹಿಳೆಯರ ಎಲ್ಲಾ ರೀತಿಯ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಮಹಿಳಾ ಕ್ರಿಕೆಟ್ ಯಾವಾಗ AFG ಗೆ ಮರಳುತ್ತದೆ?
ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರಿಕೆಟ್ (Women cricket in afghanistan) ಯಾವಾಗ ಮರಳುತ್ತದೆ ಎಂಬುದರ ಕುರಿತು ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಐಸಿಸಿಯ ಸದಸ್ಯ ರಾಷ್ಟ್ರಗಳು ಪುರುಷ ಹಾಗೂ ಮಹಿಳಾ ತಂಡಗಳನ್ನು ಹೊಂದಿರುವುದು ಅಗತ್ಯವಾಗಿದ್ದು, ಅಫ್ಘಾನ್ ತಂಡದ ಸದಸ್ಯತ್ವ ರದ್ದಾಗಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬೆಳಕಿನಲ್ಲಿ ಕ್ರಿಕೆಟ್ ಅನ್ನು ಪರಿಶೀಲಿಸಲು ಐಸಿಸಿ ಕಳೆದ ವಾರ ವರ್ಕಿಂಗ್ ಗ್ರೂಪ್ ಅನ್ನು ಸ್ಥಾಪಿಸಿತು.

ಇದನ್ನೂ ಓದಿ- ಈ 3 ಭಾರತೀಯ ಕ್ರಿಕೆಟಿಗರ ವೃತ್ತಿಜೀವನಕ್ಕೆ ಕ್ಷಣಗಣನೆ ಶುರುವಾಗಿದೆಯೇ?: ಶೀಘ್ರವೇ ಗೇಟ್ ಪಾಸ್ ಸಾಧ್ಯತೆ!

ಐಸಿಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು!
ಐಸಿಸಿ ಅಧ್ಯಕ್ಷ  (ICC President) ಗ್ರೆಗ್ ಬಾರ್ಕ್ಲೇ (Greg Barclay), 'ಅಫ್ಘಾನಿಸ್ತಾನ ಐಸಿಸಿಯ ಪೂರ್ಣಾವಧಿ ಸದಸ್ಯ. ನಾವು ಅಲ್ಲಿ ಮಹಿಳಾ ಮತ್ತು ಪುರುಷರ ಕ್ರಿಕೆಟ್ ಕಾರ್ಯಕ್ರಮವನ್ನು ಬೆಂಬಲಿಸುವುದನ್ನು ಮುಂದುವರಿಸಲು ಬಯಸುತ್ತೇವೆ. ನಾವು ಅದನ್ನು ಮುಂದುವರಿಸುತ್ತೇವೆ, ಆದರೆ ICC ಯ ಸದಸ್ಯರಾಗಲು, ಕೆಲವು ಮಾನದಂಡಗಳನ್ನು ಪೂರೈಸುವುದು ಅವಶ್ಯಕ. ನಾವು ಅವರ ಉಲ್ಲಂಘನೆಯನ್ನು ನೋಡಿಲ್ಲ ಮತ್ತು ICC ಸದಸ್ಯರಾಗಿ ನಾವು ಅವರಿಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲಿ (ಸಂಗ್ರಹ ಚಿತ್ರ) 

ಇದನ್ನೂ ಓದಿ- IPL 2022 Mega Auction : ಪ್ರೀತಿ ಜಿಂಟಾ ನೆಚ್ಚಿನ ಆಟಗಾರನ ಮೇಲೆ ಧೋನಿ ಕಣ್ಣು!

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (Afghanistan Cricket Board) ಕ್ರಿಕೆಟ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪರಿಗಣಿಸುತ್ತಿದೆ ಎಂದು ಸೂಚಿಸಿತ್ತು. ಮಂಡಳಿಯು ಈ ತಿಂಗಳ ಮಹಿಳಾ ಕ್ರಿಕೆಟಿಗರ ಚಿತ್ರವನ್ನು ಹಂಚಿಕೊಂಡಿದೆ. ಎಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ ಇಬ್ಬರು ಹುಡುಗಿಯರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿರುವ ಚಿತ್ರವಿದೆ.  ಇದರೊಂದಿಗೆ 'ಅಫ್ಘಾನಿಸ್ತಾನದಲ್ಲಿ  ಕ್ರಿಕೆಟ್ ಕೇವಲ ಕ್ರೀಡೆ ಅಥವಾ ಮನರಂಜನೆಯನ್ನು ಉತ್ತೇಜಿಸುವುದು ಮಾತ್ರವಲ್ಲ ಇದು ಯುವ ಆಫ್ಘನ್ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ದೇಶದಲ್ಲಿ ಏಕತೆ ಮತ್ತು ಶಾಂತಿಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ' ಎಂದು ಟ್ವಿಟ್ಟರ್ನಲ್ಲಿ ಬರೆಯಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News