Afghanistan Blast: ಕಾಬೂಲ್ ಮಿಲಿಟರಿ ಆಸ್ಪತ್ರೆಯ ಬಳಿ ಸ್ಫೋಟ, 19 ಸಾವು 50 ಜನರಿಗೆ ಗಾಯ

Kabul Twin Blasts: ಆಫ್ಘಾನಿಸ್ತಾನದ ಕಾಬೂಲ್‌ನ ಮಿಲಿಟರಿ ಆಸ್ಪತ್ರೆ ಬಳಿ ಸ್ಫೋಟಗಳು ಮತ್ತು ಗುಂಡಿನ ದಾಳಿಗಳು ವರದಿಯಾಗಿವೆ.

Written by - Nitin Tabib | Last Updated : Nov 2, 2021, 05:37 PM IST
  • ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಬಾಂಬ್ ವಿಸ್ಫೋಟ.
  • ಸ್ಫೋಟದಲ್ಲಿ 19 ಜನರ ಸಾವು, 50ಕ್ಕೂ ಅಧಿಕ ಜನರಿಗೆ ಗಾಯ
  • ಇದುವರೆಗೆ ಯಾವ ಸಂಘಟನೆಯೂ ಕೂಡ ಈ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
Afghanistan Blast: ಕಾಬೂಲ್ ಮಿಲಿಟರಿ ಆಸ್ಪತ್ರೆಯ ಬಳಿ ಸ್ಫೋಟ, 19 ಸಾವು 50 ಜನರಿಗೆ ಗಾಯ title=
Afghanistan Bomb Blast (Representational Image)

Blast In Kabul: ಅಫ್ಘಾನಿಸ್ತಾನದ (Afghanistan)ರಾಜಧಾನಿ ಕಾಬೂಲ್‌ನಲ್ಲಿ (Kabul) ಸ್ಫೋಟಗಳು ಮತ್ತು ಗುಂಡಿನ ದಾಳಿಗಳು ವರದಿಯಾಗಿವೆ. ಅಧಿಕೃತ ಮಾಹಿತಿಯ ಪ್ರಕಾರ, ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಜೊತೆಗೆ 50 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆಫ್ಘಾನ ಮಾಧ್ಯಮಗಳ ವರದಿಗಳ ಪ್ರಕಾರ, ಕಾಬೂಲ್ ನಗರದ ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ಮಿಲಿಟರಿ ಆಸ್ಪತ್ರೆ (Sardar Mohammed Dawood Militari Hospital) ಬಳಿ ಮಂಗಳವಾರ ಎರಡು ಸ್ಫೋಟಗಳು ಸಂಭವಿಸಿದ್ದು, ನಂತರ ಗುಂಡಿನ ಸದ್ದು ಕೂಡ ಕೇಳಿಬಂದಿದೆ ಎನ್ನಲಾಗಿದೆ. ಸ್ಫೋಟದ ನಂತರ ಹೊಗೆ ಹರಡಿರುವ ಫೋಟೋಗಳನ್ನೂ ಸ್ಥಳದ ಸಮೀಪ ವಾಸಿಸುವ ಜನರು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ-ಅಫ್ಘಾನಿಸ್ತಾನದ ಕಂದಹಾರ್‌ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ, 32 ಸಾವು

ಕಾಬೂಲ್‌ನ ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ಮಿಲಿಟರಿ ಆಸ್ಪತ್ರೆಯ ಹೊರಗೆ ನಾಗರಿಕರನ್ನು ಗುರಿಯಾಗಿಸಿಕೊಂಡು ಸ್ಫೋಟವನ್ನು ನಡೆಸಲಾಗಿದೆ ಎಂದು ತಾಲಿಬಾನ್ ಉಪ ವಕ್ತಾರ ಬಿಲಾಲ್ ಕರಿಮಿ ಅಸೋಸಿಯೇಟೆಡ್ ಪ್ರೆಸ್ (AP) ಗೆ ತಿಳಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿರುವುದನ್ನು ಅವರು ಖಚಿತಪಡಿಸಿಲ್ಲ. ಅಲ್ಲದೆ, ಈ ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಇದುವರೆಗೆ ಹೊತ್ತುಕೊಂಡಿಲ್ಲ.

ಇದನ್ನೂ ಓದಿ-J&Kಗೆ Taliban ನುಸುಳುವ ಸಾಧ್ಯತೆ, ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ

ಇದಕ್ಕೂ ಮೊದಲು, ಅಫ್ಘಾನಿಸ್ತಾನದ ಕುಂದುಜ್ ನಗರದ ಶಿಯಾ ಮಸೀದಿಯಲ್ಲಿ ಭಾವಿಕರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು,  ಕನಿಷ್ಠ 55 ಜನರು ಸಾವನ್ನಪ್ಪಿದ್ದರು. ಅಫ್ಘಾನಿಸ್ತಾನದ ತಾಲಿಬಾನ್ (Taliban) ಕಬಳಿಕೆಯ ನಂತರ, ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ISIS) ಸ್ಥಳದಿಂದ ಸ್ಥಳಕ್ಕೆ ಅನೇಕ ದಾಳಿಗಳನ್ನು ನಡೆಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ. 2017 ರಲ್ಲಿ ನಡೆದ ಇದೇ ರೀತಿಯ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಈ ಪ್ರದೇಶದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ.

ಇದನ್ನೂ ಓದಿ-ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ಸ್ಫೋಟ, 12 ಸಾವು; ಹಲವರಿಗೆ ಗಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News