T20 World Cup: ನ್ಯೂಜಿಲೆಂಡ್-ಅಫ್ಘಾನಿಸ್ತಾನ್ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ ನಿಗೂಢ ಸಾವು!

ಮೂಲತಃ ಉತ್ತರಾಖಂಡ ಮೂಲದವರಾಗಿರುವ ಮೋಹನ್ ಸಿಂಗ್ 2000ರ ಆರಂಭದಲ್ಲಿ ಯುಎಇಗೆ ವಲಸೆ ಹೋಗಿದ್ದರು.

Written by - Puttaraj K Alur | Last Updated : Nov 8, 2021, 12:10 PM IST
  • ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನ ಮುಖ್ಯ ಪಿಚ್ ಕ್ಯುರೇಟರ್ ಮೋಹನ್ ಸಿಂಗ್ ನಿಗೂಢ ಸಾವು
  • ನ್ಯೂಜಿಲೆಂಡ್-ಅಫ್ಘಾನಿಸ್ತಾನ್ ಪಂದ್ಯಕ್ಕೂ ಕೆಲ ಗಂಟೆಗಳ ಮುನ್ನವೇ ಮೋಹನ್ ಸಿಂಗ್ ಶವವಾಗಿ ಪತ್ತೆ
  • ಮೋಹನ್ ಸಿಂಗ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಯುಎಇ ಕ್ರಿಕೆಟ್, ಐಸಿಸಿ ಮತ್ತು ದಲ್ಜಿತ್ ಸಿಂಗ್
T20 World Cup: ನ್ಯೂಜಿಲೆಂಡ್-ಅಫ್ಘಾನಿಸ್ತಾನ್ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ ನಿಗೂಢ ಸಾವು! title=
ಪಿಚ್ ಕ್ಯುರೇಟರ್ ನಿಗೂಢ ಸಾವು!

ಅಬುಧಾಬಿ: ಭಾನುವಾರ ನಡೆದ ನ್ಯೂಜಿಲೆಂಡ್-ಅಫ್ಘಾನಿಸ್ತಾನ್ ನಡುವಿನ ಟಿ-20 ವಿಶ್ವಕಪ್ ಪಂದ್ಯ(New Zealand-Afghanistan T20 game)ಕ್ಕೂ ಕೆಲವೇ ಗಂಟೆಗಳ ಮುನ್ನ ಅಬುಧಾಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಮುಖ್ಯ ಪಿಚ್ ಕ್ಯುರೇಟರ್ ಮೋಹನ್ ಸಿಂಗ್(Mohan Singh) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯುಎಇ ಕ್ರಿಕೆಟ್(UAE Cricket) ಮೂಲಗಳ ಪ್ರಕಾರ, ಕಳೆದ ಕೆಲ ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದ 45 ವರ್ಷದ ಮೋಹನ್ ಸಿಂಗ್ ಅವರು ಭಾನುವಾರ ಬೆಳಗ್ಗೆ ಕ್ರೀಡಾಂಗಣದದಲ್ಲಿ ಪಿಚ್ ಪರಿಶೀಲಿಸಿದ್ದರು(Abu Dhabi stadium). ಬಳಿಕ ತಮ್ಮ ಕೋಣೆಗೆ ಮರಳಿದ್ದ ಅವರು ಪಂದ್ಯ ಪ್ರಾರಂಭಕ್ಕೂ ಮುನ್ನವೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ಉತ್ತರಾಖಂಡ ಮೂಲದವರಾಗಿರುವ ಮೋಹನ್ ಸಿಂಗ್ 2000ರ ಆರಂಭದಲ್ಲಿ ಯುಎಇಗೆ ವಲಸೆ ಹೋಗಿದ್ದರು. ಇದಕ್ಕೂ ಮುನ್ನ ಮೊಹಾಲಿಯಲ್ಲಿ ಬಿಸಿಸಿಐ ಮಾಜಿ ಮುಖ್ಯ ಕ್ಯುರೇಟರ್ ದಲ್ಜಿತ್ ಸಿಂಗ್ ಗರಡಿಯಲ್ಲಿ ಕೆಲಸ ನಿರ್ವಹಿಸಿದ್ದರು. ಮೋಹನ್ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅಬುಧಾಬಿ ಕ್ರಿಕೆಟ್ ಸಂಸ್ಥೆ ಮತ್ತು ಐಸಿಸಿ ಸಂತಾಪ ಸೂಚಿಸಿದ್ದರೂ, ಮೋಹನ್ ಸಾವಿಗೆ ನಿಖರ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಹರ್ಭಜನ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ T20 XI ಕ್ರಿಕೆಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ..!

‘ಅಬುಧಾಬಿ ಕ್ರಿಕೆಟ್ ಮುಖ್ಯ ಕ್ಯುರೇಟರ್ ಮೋಹನ್ ಸಿಂಗ್(Abu Dhabi stadium Chief Curator)ಅವರು ಇಂದು ನಿಧನರಾಗಿದ್ದಾರೆ ಎಂದು ಘೋಷಿಸಲು ಬಹಳ ದುಃಖವಾಗಿದೆ. ಮೋಹನ್ ಅವರು 15 ವರ್ಷಗಳಿಂದ ಅಬುಧಾಬಿ ಕ್ರಿಕೆಟ್‌ನಲ್ಲಿದ್ದಾರೆ. ಈ ಸಮಯದಲ್ಲಿ ನಡೆದ ಎಲ್ಲಾ ಪಂದ್ಯಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಅಬುಧಾಬಿ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ. ‘ಮೋಹನ್ ಅವರ ನಿಗೂಢ ಸಾವಿನ ಮಧ್ಯೆಯೂ ಭಾನುವಾರ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ ನಡುವಿನ ಪಂದ್ಯವು ಮೈದಾನದ ಸಿಬ್ಬಂದಿ ಬೆಂಬಲದೊಂದಿಗೆ ನಡೆಯಿತು. ಮೋಹನ್ ಮತ್ತು ಅವರ ಅದ್ಭುತ ಸಾಧನೆಗಳಿಗೆ ಮುಂದಿನ ದಿನಗಳಲ್ಲಿ ಗೌರವ ಸಲ್ಲಿಸಲಾಗುವುದು. ಅವರ ಕುಟುಂಬಕ್ಕೆ ದುಃಖ ಬರಿಸುವ ನೀಡಲಿ ಎಂದು ಪಾರ್ಥಿಸುತ್ತೇವೆ’ ಎಂದು ತಿಳಿಸಲಾಗಿದೆ.

‘ಮೋಹನ್ ಸಿಂಗ್(Mohan Sing) ಅವರು ಪ್ರತಿಭಾನ್ವಿತ ವ್ಯಕ್ತಿ ಮತ್ತು ಕಠಿಣ ಪರಿಶ್ರಮಿಯಾಗಿದ್ದರು. ಯುಎಇಗೆ ಹೋದ ಬಳಿಕವೂ ಪ್ರತಿ ಬಾರಿ ತವರಿಗೆ ಬಂದಾಗ ನನ್ನನ್ನು ಭೇಟಿಯಾಗುತ್ತಿದ್ದರು. ಆದರೆ ಇತ್ತೀಚೆಗೆ ಅಷ್ಟಾಗಿ ತವರಿಗೆ ಬಂದಿರಲಿಲ್ಲ. ಅವರು ಬಹಳ ಬೇಗನೆ ಹೋದರು. ಇದು ನಿಜಕ್ಕೂ ದುರಂತ’ ಎಂದು ದಲ್ಜಿತ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: T20 World Cup 2021: ಇಂದು ಕೊನೆಗೊಳ್ಳಲಿದೆ ವಿರಾಟ್ ಕೊಹ್ಲಿಯ ಟಿ20 ನಾಯಕತ್ವ, ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News