ಸ್ಕಾಟ್ಲೆಂಡ್ ವಿರುದ್ಧ ಗೆಲುವು: ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದೇವೆಂದ ವಿರಾಟ್ ಕೊಹ್ಲಿ..!

ಟೀಂ ಇಂಡಿಯಾದ ಪಾಲಿಗೆ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವು ತುಂಬಾ ಮಹತ್ವದ್ದಾಗಿದೆ. ಈ ಪಂದ್ಯದ ಫಲಿತಾಂಶದ ಮೇಲೆಯೇ ಕೊಹ್ಲಿ ಪಡೆಯ ಭವಿಷ್ಯ ನಿಂತಿದೆ.

Written by - Puttaraj K Alur | Last Updated : Nov 6, 2021, 10:38 AM IST
  • ಭಾನುವಾರ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ ಮಹತ್ವದ ಪಂದ್ಯ
  • ನ.7ರ ಪಂದ್ಯದ ಫಲಿತಾಂಶದ ಮೇಲೆ ನಮ್ಮ ಗಮನವಿದೆ ಎಂದ ವಿರಾಟ್ ಕೊಹ್ಲಿ
  • ನ್ಯೂಜಿಲೆಂಡ್ ಸೋತರೆ ಟೀಂ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ
ಸ್ಕಾಟ್ಲೆಂಡ್ ವಿರುದ್ಧ ಗೆಲುವು: ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದೇವೆಂದ ವಿರಾಟ್ ಕೊಹ್ಲಿ..! title=
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ನವದೆಹಲಿ: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಅಫ್ಘಾನಿಸ್ತಾನ್ ಮತ್ತು ಸ್ಕಾಂಟ್ಲೆಂಡ್ ವಿರುದ್ಧ ಭರ್ಜರಿ ಗೆಲವು ದಾಖಲಿಸಿದ್ದು, ಹೊಸ ಹುಮ್ಮಸ್ಸಿನಲ್ಲಿದೆ. ಟಿ-20 ವಿಶ್ವಕಪ್ ಟೂರ್ನಿ(T20 World Cup 2021)ಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಹರಸಾಹಸ ಪಡುತ್ತಿರುವ ವಿರಾಟ್ ಕೊಹ್ಲಿ ಪಡೆಯ ಚಿತ್ತ ಇದೀಗ ನಾಳೆ(ನ.7) ನಡೆಯಲಿರುವ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ ನಡುವಿನ ಪಂದ್ಯದ ಮೇಲೆ ನೆಟ್ಟಿದೆ.

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್(New Zealand vs Afghanistan)ತಂಡಗಳು ಮುಖಾಮುಖಿಯಾಗುತ್ತಿವೆ. ‘ಬಿ’ ಗುಂಪಿನಲ್ಲಿ ಆಡಿರುವ 4 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡವು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. 3 ಪಂದ್ಯಗಳನ್ನು ಗೆದ್ದಿರುವ ಕಿವೀಸ್ ಸೆಮಿಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಭಾರತ ಮತ್ತು ಅಫ್ಘಾನಿಸ್ತಾನ್ ತಲಾ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಅದೃಷ್ಟ ಪರೀಕ್ಷೆಯ ಹಂತದಲ್ಲಿವೆ. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಗೆಲುವು ಸಾಧಿಸಿದರೆ ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಸಿಗಲಿದೆ. ಇಲ್ಲದಿದ್ದರೆ ಕೊಹ್ಲಿ ಪಡೆ ಗಂಟುಮೂಟೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: IPL 2022 ರಲ್ಲಿ ಹೊಸ ತಂಡಗಳ ಆಗಮನ : ಇದರಿಂದ ಕ್ರಿಕೆಟ್ ಮತ್ತೆ ಆಟಗಾರರ ಆದಾಯಕ್ಕೆ ಬ್ರೇಕ್!

ಟೀಂ ಇಂಡಿಯಾ ಇದೀಗ ನ.7ರಂದುರಂದು ನಡೆಯಲಿರುವ ಆಫ್ಘಾನಿಸ್ತಾನ್(Afghanistan)ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ ಅಂತಾ ವಿರಾಟ್ ಕೊಹ್ಲಿ(Virat kohli) ಹೇಳಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಸ್ಕಾಟ್ಲೆಂಡ್ ವಿರುದ್ಧ ನಾವು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ. ಈಗ ನಮ್ಮ ಗುರಿ ಏನಿದ್ದರೂ ಸೆಮಿಫೈನಲ್ ಪ್ರವೇಶಿಸುವುದು. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡವು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ  ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಿತು. ವಿಶ್ವಕಪ್ ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಏನೇನು ಮಾಡಬೇಕಿತ್ತೋ ಅದನ್ನು ನಾವು ಮಾಡಿದ್ದೇವೆ.. ಇನ್ನೇನಿದ್ದರೂ ನ.7ರ ಪಂದ್ಯದ ಫಲಿತಾಂಶದ ಮೇಲೆ ನಮ್ಮ ಗಮನವಿದೆ’ ಅಂತಾ ಹೇಳಿದ್ದಾರೆ.

ಟೀಂ ಇಂಡಿಯಾದ ಪಾಲಿಗೆ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್(New Zealand)ನಡುವಿನ ಪಂದ್ಯವು ತುಂಬಾ ಮಹತ್ವದ್ದಾಗಿದೆ. ಈ ಪಂದ್ಯದ ಫಲಿತಾಂಶದ ಮೇಲೆಯೇ ಕೊಹ್ಲಿ ಪಡೆಯ ಭವಿಷ್ಯ ನಿಂತಿದೆ. ಒಂದು ವೇಳೆ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆಲುವು ಸಾಧಿಸಿದರೆ ಭಾರತದ ಸೆಮಿಫೈನಲ್ ಆಸೆಗೆ ಮರುಜೀವ ಬರಲಿದೆ. ನ್ಯೂಜಿಲೆಂಡ್ ಗೆದ್ದರೆ ಭಾರತಕ್ಕೆ ವಿಶ್ವಕಪ್ ಅಭಿಯಾನದ ಗೇಟ್ ಕ್ಲೋಸ್ ಆಗಲಿದೆ. ಹೀಗಾಗಿ ನಾಳೆಯ ಪಂದ್ಯದ ಫಲಿತಾಂಶ ಏನಾಗಲಿದೆ..? ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆಂಬುದು ತೀವ್ರ ಕುತೂಹಲ ಮೂಡಿಸಿದೆ. ಭಾರತ(Team India) ತನ್ನ ಕೊನೆಯ ಪಂದ್ಯವನ್ನು ನಮಿಬಿಯಾ ವಿರುದ್ಧ ನ.8ರಂದು ಆಡಲಿದೆ.  

ಇದನ್ನೂ ಓದಿ: ಟೀಂ ಇಂಡಿಯಾದ ಮುಂದಿನ ನಾಯಕ ಯಾರು..?: ಇಬ್ಬರ ಹೆಸರು ಸೂಚಿಸಿದ ದ್ರಾವಿಡ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News