ನಮ್ಮ ಸರ್ಕಾರ ಯಾವುದೇ ಕಾರ್ಯವನ್ನು ಕೈಗೊಂಡರೂ ಅದರಲ್ಲಿ ಗ್ರಾಮೀಣ ಜನತೆ, ಬಡವರು ಮತ್ತು ರೈತರನ್ನು ಹೆಚ್ಚು ಕೆಂದ್ರೀಕರಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಮ್ಮ ಉದ್ದೇಶ ಬಲಿಷ್ಠ ರಾಷ್ಟ್ರಕ್ಕಾಗಿ, ಬಲಿಷ್ಠ ನಾಗರಿಕರಿಗಾಗಿ ಆಗಿದೆ. ಹಾಗಾಗಿ ದೃಢ ನಿಶ್ಚಯದ ಮಾನವ ಪ್ರಯತ್ನದಿಂದ ಸರ್ವಕಾರ್ಯವೂ ಖಂಡಿತವಾಗಿ ಪೂರ್ಣಗೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಇಂದು ದೇಶದಲ್ಲಿ ಎಲ್ಲರ ಚಿತ್ತ ಕೇಂದ್ರ ಬಜೆಟ್ ನತ್ತ ನೆಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ತೆರಿಗೆದಾರರಿಗೆ ಈ ಬಾರಿ ಬಜೆಟ್ನಿಂದ ದೊಡ್ಡ ಪರಿಹಾರ ಪಡೆಯುವ ನಿರೀಕ್ಷೆಯಿದೆ.
ಬಜೆಟ್ಗೆ ಒಂದು ದಿನ ಮೊದಲು ಗುರುವಾರ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಪರಿಚಯಿಸಲಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇಲ್ಮನೆ ರಾಜ್ಯಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ತಮ್ಮ ಮನೆಯಲ್ಲಿ ಭೇಟಿಯಾದರು. ಜುಲೈ 5 ರಂದು ಎಂ.ಎಸ್. ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಿನ್ನಲೆಯಲ್ಲಿ ಅವರು ಭೇಟಿ ನೀಡಿದ್ದಾರೆ.
ದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯದಲ್ಲಿ ಬಜೆಟ್ ದಾಖಲೆಗಳ ಮುದ್ರಣಕ್ಕೆ ಚಾಲನೆ ನೀಡುವ ಮೊದಲು ಹಲ್ವಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ಸಾಮಾನ್ಯವಾಗಿ ಬಜೆಟ್ ದಾಖಲೆಗಳ ಮುದ್ರಣದ ಆರಂಭವನ್ನು ಸೂಚಿಸುತ್ತದೆ.
ಪಾಕ್ ವಶದಲ್ಲಿದ್ದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಭಾರತಕ್ಕೆ ಮರಳಿದ ಒಂದು ದಿನದ ನಂತರ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆರೋಗ್ಯ ವಿಚಾರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.