100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್!

ಬ್ರಿಟನ್ ಗೃಹ ಸಚಿವರಾದ ಸಾಜಿದ್ ಜಾವಿದ್ ಸೋಮವಾರ, ಭಾರತ ದಿನಾಚರಣೆ ಸಂದರ್ಭದಲ್ಲಿ ಸಂಸತ್ತಿನಲ್ಲಿ ಬ್ರಿಟನ್-ಭಾರತದ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದರು.

Last Updated : Jun 26, 2019, 12:55 PM IST
100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್! title=
File Image

ಲಂಡನ್: ಬ್ರಿಟನ್-ಇಂಡಿಯಾ ಸಂಬಂಧವನ್ನು ಮುನ್ನಡೆಸುತ್ತಿರುವ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಬ್ರಿಟನ್ನಿನ ಹಿರಿಯ ಕ್ಯಾಬಿನೆಟ್ ಸಚಿವರಾದ ಪೆನ್ನಿ ಮೊರಾಡೌಂಟ್ ಕೂಡ ಸೇರಿದ್ದಾರೆ. 

ಭಾರತ ದಿನಾಚರಣೆಯಂದು ಬ್ರಿಟನ್ ಗೃಹ ಸಚಿವ ಸಾಜಿದ್ ಜಾವಿದ್ ಸೋಮವಾರ, ಸಂಸತ್ತು ಬ್ರಿಟನ್-ಭಾರತ ಸಂಬಂಧಗಳ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಇದರಲ್ಲಿ, ಈ ಹಿಂದಿನ ರಕ್ಷಣಾ ಮಂತ್ರಿ ಮತ್ತು ಪ್ರಸ್ತುತ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಮುಖ ಪಾತ್ರ ವಹಿಸಿದ ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು ಎನ್ನಲಾಗಿದೆ. ನಿರ್ಮಲಾ ಸೀತಾರಾಮನ್ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನೂ ಕೂಡಾ ನಿರ್ವಹಿಸುತ್ತಿದ್ದಾರೆ.

ಲಂಡನ್‌ನ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡಿದ ನಿರ್ಮಲಾ ಸೀತಾರಾಮನ್ ಈ ಹಿಂದೆ ಯುಕೆಯಲ್ಲಿ ಕೆಲಸ ಮಾಡಿದ್ದರು ಎಂದು ಯುಕೆ ಮಾಧ್ಯಮ ಸಂಸ್ಥೆ ಇಂಡಿಯಾ ಇಂಕ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಈ ಪಟ್ಟಿಯಲ್ಲಿ ಯುಕೆ ರಕ್ಷಣಾ ಸಚಿವರಾದ ಪೆನ್ನಿ ಮೊರಾಡೌಂಟ್ ಪಟ್ಟಿಯಲ್ಲಿದ್ದಾರೆ. ಇದಲ್ಲದೆ ಈ ಪಟ್ಟಿಯಲ್ಲಿ ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಮತ್ತು ಬ್ಯಾರನೆಸ್ ಸ್ಯಾಂಡಿ ವರ್ಮಾ, ಚಲನಚಿತ್ರ ನಿರ್ಮಾಪಕರಾದ ಗುರುಂದರ್ ಚಾಧಾ, ಭಾರತೀಯ ಕಾನೂನು ಸಂಸ್ಥೆಯ ಮುಖ್ಯಸ್ಥ ಜಿಯೋ ಮೂಡಿ ಮತ್ತು ಅಪೊಲೊ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಸುನಿತಾ ರೆಡ್ಡಿ ಮತ್ತು ನಾಸ್ಕಾಂ ಅಧ್ಯಕ್ಷೆ ದೇವಜ್ನಾನಿ ಘೋಷ್ ಸ್ಥಾನ ಪಡೆದಿದ್ದಾರೆ.
 

Trending News