ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್ :ಮಗವಿಗೂ ಖೈದಿ ಪೋಟೋ ಶೂಟ್!

ಇಲ್ಲೊಬ್ಬ ಒಂದು ವರ್ಷದ ಮಗುವಿಗೆ ಖೈದಿ ನಂಬರ್, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಪೋಟೋ ಶೂಟ್ ಮಾಡಿಸಲಾಗಿದೆ.

Written by - Ranjitha R K | Last Updated : Jul 2, 2024, 10:51 AM IST
  • ಹೆತ್ತ ಮಗುವನ್ನೇ ಖೈದಿ ಮಾಡಿದ ಅಭಿಮಾನಿ
  • ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್
  • ಮಗವಿಗೂ ಖೈದಿ ಪೋಟೋ ಶೂಟ್
ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್ :ಮಗವಿಗೂ ಖೈದಿ ಪೋಟೋ ಶೂಟ್! title=

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಹನ್ನೊಂದು ದಿನಗಳು ಕಳೆದಿವೆ.ದರ್ಶನ್  ಕೊಲೆ ಆರೋಪದಲ್ಲಿ  ಜೈಲು  ಪಾಲಾಗಿದ್ದರೂ ಅವರ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಅಭಿಮಾನಿಗಳು ದರ್ಶನ್ ಪರವಾಗಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರುತ್ತಲೇ ಇದ್ದಾರೆ.ಆದರೆ ಇಲ್ಲೊಬ ಅಭಿಮಾನಿ ಅಭಿಮಾನದ ಪರಾಕಾಷ್ಟೆ ತಲುಪಿದ್ದಾನೆ.ದರ್ಶನ್ ಮೇಲಿನ ಅಭಿಮಾನದ ಹುಚ್ಚಾಟದಲ್ಲಿ ತನ್ನ ಸ್ವಂತ ಮಗುವನ್ನೇ ಖೈದಿ ರೀತಿಯಲ್ಲಿ ಬಿಂಬಿಸಿದ್ದಾನೆ.   

ಹೆತ್ತ ಮಗುವನ್ನೇ ಖೈದಿ ಮಾಡಿದ ಅಭಿಮಾನಿ : 
ಇತ್ತೀಚೆಗೆ ಮಕ್ಕಳ ಫೋಟೋ ಶೂಟ್ ಕಾಮನ್ ಆಗಿದೆ. ತಮ್ಮ ಮಗುವಿನ ಬಾಲ್ಯವನ್ನು ಸಂಭ್ರಮಿಸುವ, ಆ ಮುದ್ದು ಬಾಲ್ಯದ ನೆನಪಿಗಾಗಿ ಮಗುವಿನ ಫೋಟೋ ಶೂಟ್ ಮಾಡಿಸುತ್ತಾರೆ. ಈ ಫೋಟೋಗಳ ಮೂಲಕ ತಮ್ಮ ಕರುಳ ಕುಡಿಯ ಬಾಲ್ಯವನ್ನು  ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿದು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ.ಆದರೆ ಹೆತ್ತ ಮಗುವನ್ನೇ ಖೈದಿ ರೀತಿ ಬಿಂಬಿಸುವುದು ಎಷ್ಟು ಸರಿ ? 

ಇದನ್ನೂ ಓದಿ : ತಾಯಿಯಾಗುತ್ತಿದ್ದಾರೆ ನಟಿ ಹರ್ಷಿಕಾ ಪೂಣಚ್ಚ... ಮೊದಲ ಮಗುವಿನ ನಿರೀಕ್ಷೆಯಲ್ಲಿ ಭುವನ್ ಪೊನ್ನಣ್ಣ

ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್ :
ಫೋಟೋ ಶೂಟ್ ಅಂದರೆ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಪೋಟೋ ಶೂಟ್ ಮಾಡಿಸುವುದು ಸಾಮಾನ್ಯವಾಗಿ ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಅಥವಾ ಮುದ್ದು ಮಗುವಿಗೆ ಒಪ್ಪುವಂಥಹ ರೀತಿಯಲ್ಲಿ ವಿಶೇಷ ರೀತಿಯಲ್ಲಿ ಫೋಟೋ ಶೂಟ್ ಮಾಡಿಸುವುದು ಕೂಡಾ ಟ್ರೆಂಡ್. ಆದರೆ ಒಂದು ವರ್ಷದ ಮಗುವಿಗೆ ಖೈದಿಯ ರೀತಿ ಬಿಳಿ ಬಟ್ಟೆ ಹಾಕಿ ಪೊಟೋ‌ಶೂಟ್ ಮಾಡಿಸಿದರೆ ಏನೆನ್ನಬೇಕು. ಹೌದು, ಇಲ್ಲೊಬ್ಬ ಒಂದು ವರ್ಷದ ಮಗುವಿಗೆ ಖೈದಿ ನಂಬರ್, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಪೋಟೋ ಶೂಟ್ ಮಾಡಿಸಲಾಗಿದೆ. 

ಮಗವಿಗೂ ಖೈದಿ ಪೋಟೋ ಶೂಟ್ : 
ಇನ್ನು ಈ ರೀತಿಯ ಫೋಟೋ ಶೂಟ್ ಟ್ರೆಂಡ್ ಎಂದು ಬೇರೆ ಹೇಳಲಾಗಿದೆ.
ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಕ್ರಿಯೇಟ್ ಆಗುತ್ತಿದೆ. ಮಗುವಿಗೆ ಖೈದಿ ಪೊಟೋ ಶೂಟ್ ಮಾಡಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ : ಮೊದಲ ಸಿನಿಮಾದಲ್ಲೆ ನಟಿ ಮಂಜುಳಾ ಫೋಟೊ ದುಷ್ಟ್‌ಬಿನ್ ಸೇರಿದ್ದೇಕೆ..? ಇದುವೇ ಬಂಗಾರದ ಪಂಜರ ಸಿನಿಮಾ ಕೈತಪ್ಪಲು ಕಾರಣವಾಯ್ತು...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News