Good Loan vs Bad Loan: ಈ ದುಬಾರಿ ದುನಿಯಾದಲ್ಲಿ ಪ್ರತಿ ವ್ಯಕ್ತಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಕೊಳ್ಳುವುದು ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಹೋಮ್ ಲೋನ್, ಎಜುಕೇಶನ್ ಲೋನ್, ಕಾರ್ ಲೋನ್, ಎಮರ್ಜೆನ್ಸೀ ಲೋನ್ ಹೀಗೆ ಬ್ಯಾಂಕ್ ಗಳು ಹಲವು ರೀತಿಯ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಸಾಲ ಸಣ್ಣದಾಗಿರಬಹುದು, ಇಲ್ಲವೇ ದೊಡ್ಡದಾಗಿರಬಹುದು. ಅದನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕಾಗುತ್ತದೆ. ಆದರೆ, ಸಾಲ ತೆಗೆದುಕೊಳ್ಳುವ ಮುನ್ನ ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವ ರೀತಿಯ ಸಾಲಗಳು ಅಪಾಯಕಾರಿ ಎಂಬ ಬಗ್ಗೆ ಅರಿವಿರಬೇಕು.
ಹೌದು, ಸಾಲವನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ. ಇದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ.
ಇದನ್ನೂ ಓದಿ- ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಕೂಡಲೇ ಈ ದಾಖಲೆಗಳನ್ನು ನೀಡಿ ಹಣ ಪಡೆಯಿರಿ!
ಉತ್ತಮ/ಒಳ್ಳೆಯ ಸಾಲ ಯಾವುದು?
ಉತ್ತಮ/ಒಳ್ಳೆಯ ಸಾಲ (Good Loan) ಎಂಬುದು ಸಾಲಗಾರರ ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಸಾಲವಾಗಿದೆ. ಇಂತಹ ಸಾಲದಲ್ಲಿ ಸಾಲದ ಮೇಲಿನ ಬಡ್ಡಿಗಿಂತ ವ್ಯಕ್ತಿಗೆ ದೊರೆಯುವ ಲಾಭವೇ ಅಧಿಕವಾಗಿರುತ್ತದೆ. ಇಂತಹ ಸಾಲಗಳು ವ್ಯಕ್ತಿಯ ಪ್ರಗತಿಗೆ ಪೂರಕವಾಗಿರುತ್ತದೆ. ಜೊತೆಗೆ ಭವಿಷ್ಯದಲ್ಲಿ ಉತ್ತಮ ಹೂಡಿಕೆ ಎಂದು ಸಾಬೀತುಪಡಿಸುತ್ತದೆ. ಆರ್ಥಿಕ ತಜ್ಞರ ಪ್ರಕಾರ, ಹೋಮ್ ಲೋನ್ (Home Loan), ಎಜುಕೇಶನ್ ಲೋನ್, ಬಿಸಿನೆಸ್ ಲೋನ್ ಗಳನ್ನು ಉತ್ತಮ ಸಾಲಗಳ ವರ್ಗಕ್ಕೆ ಸೇರಿಸಲಾಗುತ್ತದೆ.
ಕೆಟ್ಟ/ಅಪಾಯಕಾರಿ ಸಾಲ ಯಾವುದು?
ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಭವಿಷ್ಯದ ಚಿಂತನೆಯಿಲ್ಲದೆ ಮಾಡುವ ಸಾಲ ಕೆಟ್ಟ/ಅಪಾಯಕಾರಿ ಸಾಲ. ಇಂತಹ ಸಾಲಗಳಲ್ಲಿ ಹೂಡಿಕೆಯಿಂದ ಹೆಚ್ಚೇನು ಲಾಭವಿರುವುದಿಲ್ಲ. ಅಷ್ಟೇ ಅಲ್ಲ, ಸಾಲ ಮತ್ತು ಅದರ ಮೇಲೆ ವಿಧಿಸಲಾಗುವ ಬಡ್ಡಿ ಸಾಲ ಪಡೆಯುವವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. ಪರ್ಸನಲ್ ಲೋನ್ (Personal Loan), ವಾಹನ ಸಾಲ, ಕ್ರೆಡಿಟ್ ಕಾರ್ಡ್ ಸಾಲದಂತಹ ಸಾಲಗಲು ಅಪಾಯಕಾರಿ/ಕೆಟ್ಟ ಸಾಲದ ವರ್ಗದಲ್ಲಿ ಬರುವ ಸಾಲಗಳು.
ಇದನ್ನೂ ಓದಿ- ನಿಮ್ಮ ATM Card ಮೂಲಕವೇ ಪಡೆಯಬಹುದು 5 ಲಕ್ಷ ರೂಪಾಯಿಗಳ ವಿಮೆ !ಹಾಗಿದ್ದರೆ ಯಾವ ಕಾರ್ಡ್ ನಿಮ್ಮ ಬಳಿ ಇರಬೇಕು ?
ಸಾಲ ಪಡೆಯುವಾಗ ನೆನಪಿಡಬೇಕಾದ ವಿಷಯಗಳು:
* ಅನಿವಾರ್ಯತೆ ಇದ್ದಾಗಷ್ಟೇ ಸಾಲ ಪಡೆಯುವುದನ್ನು ಪರಿಗಣಿಸಿ.
* ಅಗತ್ಯಕ್ಕಿಂತ ಹೆಚ್ಚು ಸಾಲವನ್ನು ತೆಗೆದುಕೊಳ್ಳಬೇಡಿ.
* ನಿಮ್ಮ ಶಕ್ತಿಗನುಸಾರವಾಗಿ ಆದಾಯದ ಅನುಪಾತಕ್ಕೆ ಸಾಲದ ಪ್ರಮಾಣವು 30% ಮೀರದಂತೆ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ನೀಡುವ ಸಾಲಗಳಿಗೆ ಆದ್ಯತೆ ನೀಡಿ.
* ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಸುಲಭವಾಗಿ ಬ್ಯಾಂಕ್ ಸಾಲ ಲಭ್ಯವಾಗುತ್ತದೆ. ಹಾಗಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳಿ.
* ಒಟ್ಟಿಗೆ ಹಲವು ಸಾಲಗಳನ್ನು ಪಡೆದಿದ್ದರೆ ಹೆಚ್ಚು ಬಡ್ಡಿಯಿರುವ ಸಾಲವನ್ನು ಮೊದಲು ತೀರಿಸಿ.
* ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವುದನ್ನು ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.