ಲೋಕಸಭಾ ಚುನಾವಣೆ: ಬೆಂಗಳೂರಿನಲ್ಲಿ ಮತಚಲಾಯಿಸಿದ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಪ್ರಕಾಶ್ ರಾಜ್

ಭೂಪಸಂದ್ರ ಮತಗಟ್ಟೆ ಸಂಖ್ಯೆ 56 ಕ್ಕೆ  ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಡಿ.ವಿ. ಸದಾನಂದ ಗೌಡ.

Last Updated : Apr 18, 2019, 09:29 AM IST

Trending Photos

ಲೋಕಸಭಾ ಚುನಾವಣೆ: ಬೆಂಗಳೂರಿನಲ್ಲಿ ಮತಚಲಾಯಿಸಿದ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಪ್ರಕಾಶ್ ರಾಜ್ title=
Pic Courtesy: ANI

ಬೆಂಗಳೂರು: ಏಳು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಇಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ಒಟ್ಟು 95 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 

ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದು ಮೊದಲ ಹಂತದ ಮತದಾನ ಆರಂಭವಾಗಿದ್ದು, ಬೆಳಗ್ಗೆ 7 ಗಂಟೆಯಿಂದ ರಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರಾಜ್ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 54 ರಲ್ಲಿ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅವರು ಮತ ಚಲಾಯಿಸಿದರೆ, ಭೂಪಸಂದ್ರ ಮತಗಟ್ಟೆ ಸಂಖ್ಯೆ 56 ಕ್ಕೆ  ಕುಟುಂಬ ಸಮೇತರಾಗಿ ಆಗಮಿಸಿ ಡಿ.ವಿ. ಸದಾನಂದ ಗೌಡರು ಮತ ಚಲಾಯಿಸಿದರು.

ಮತದಾನದ ಬಳಿಕ ಮಾತನಾಡಿದ ಸದಾನಂದಗೌಡರು, ತಿಬಾರಿ ಕ್ಯೂ ನಲ್ಲಿ ನಿಂತು ಮತದಾನ ಪ್ರಾರಂಭವಾಗುವ ವೇಳೆಗೆ ಕುಟುಂಬ ಸಮೇತ ಮತದಾನ ಮಾಡುತ್ತೇವೆ. ಇಡೀ ಕ್ಷೇತ್ರ ವ್ಯಾಪಿ ಸಂಚಾರ‌ ನಡೆಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಬೆಳಗ್ಗೆ ಮತದಾನ ಮಾಡಿ ತೆರಳುತ್ತೇನೆ ಎಂದರು.

ಬೆಂಗಳೂರಿಗೆ ಒಂದು ಅಪವಾದವಿದೆ: 
ಬೆಂಗಳೂರಿಗೆ ಒಂದು ಅಪವಾದವಿದೆ, ಅದರಲ್ಲೂ ವಿದ್ಯಾವಂತರು ಮತದಾನ ಮಾಡುವುದಿಲ್ಲವೆಂದು ಅಪವಾದವಿದೆ ಎಂದು ಬೇಸರ ವ್ಯಕ್ತಪಡಿಸಿದ ಸದಾನಂದ ಗೌಡರು, ಬೆಂಗಳೂರಿನ ಜನರು ಈ ಅಪವಾದ ಅಳಿಸಿಹಾಕಲು ಹೆಚ್ವಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಕರೆನೀಡಿದರು.

ದೇಶದ ಹಿತ ದೃಷ್ಟಿಯಿಂದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲಿದ್ದಾರೆ. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ನೀಡಬೇಕಿದೆ ಎಂದು ಹೇಳಿದರು.

Trending News