ದೆಹಲಿ ಆಸ್ಪತ್ರೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಅಭಿನಂದನ್ ಭೇಟಿ

ಪಾಕ್ ವಶದಲ್ಲಿದ್ದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಭಾರತಕ್ಕೆ ಮರಳಿದ ಒಂದು ದಿನದ ನಂತರ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆರೋಗ್ಯ ವಿಚಾರಿಸಿದರು.

Last Updated : Mar 2, 2019, 05:38 PM IST
ದೆಹಲಿ ಆಸ್ಪತ್ರೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಅಭಿನಂದನ್ ಭೇಟಿ  title=
photo:ANI

ನವದೆಹಲಿ: ಪಾಕ್ ವಶದಲ್ಲಿದ್ದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಭಾರತಕ್ಕೆ ಮರಳಿದ ಒಂದು ದಿನದ ನಂತರ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ಅವರು 60 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದ ವಿಚಾರವಾಗಿ ವಿವರಣೆಯನ್ನು ಸಚಿವರು ಪಡೆದುಕೊಂಡಿದ್ದಾರೆ.ಶುಕ್ರವಾರದಂದು ಭಾರತಕ್ಕೆ ತಡರಾತ್ರಿ ಆಗಮಿಸಿದ ಅಭಿನಂದನ್ ವರ್ತಮಾನ್ ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಇಂದು ಸಚಿವರ ಭೇಟಿಗೂ ಮುನ್ನ ಮುಂಚೆ ವರ್ತಮಾನ್ ಕುಟುಂಬದ ಸದಸ್ಯರನ್ನು ಮತ್ತು ಐಎಎಫ್ ನ ಹಲವು ಉನ್ನತ ಅಧಿಕಾರಿಗಳು ಭೇಟಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರದಂದು 11.45 ರ ವೇಳೆಗೆ ದೆಹಲಿಗೆ ಆಗಮಿಸಿದ ನಂತರ ಅವರನ್ನು  ಆಗಮಿಸಿದ ಬಳಿಕ ಏರ್ಫೋರ್ಸ್ ಸೆಂಟ್ರಲ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ (ಎಎಫ್ಸಿಎಂಇ)ನಲ್ಲಿರುವ  ವಿಶೇಷ ವೈದ್ಯಕೀಯ ಮೌಲ್ಯಮಾಪನ ಕೇಂದ್ರಕ್ಕೆ ಸಾಗಿಸಲಾಯಿತು.

ಅಭಿನಂದನ್ ಭಾರತಕ್ಕೆ ಮರಳಿದ ನಂತರ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಟ್ವೀಟ್ ಮಾಡುತ್ತಾ " "ಜೈ ಹಿಂದ್ ... ನಿಮ್ಮ ಬಗ್ಗೆ ಹೆಮ್ಮೆ ಅನಿಸುತ್ತದೆ ಅಭಿನಂದನ್,ಇಡೀ ದೇಶವು ನಿಮ್ಮ ಶೌರ್ಯ ಹಾಗೂ ಕಾಠಿಣ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ.ಇಂತಹ ಕಷ್ಟದ ಸ್ಥಿತಿಯಲ್ಲಿಯೂ ಸಹಿತ ನೀವು ಶಾಂತತೆಯನ್ನು ಹೊಂದಿದ್ದೀರಿ, ನಮ್ಮ ಯುವಜನರಿಗೆ ಸ್ಪೂರ್ತಿಯಾಗಿದ್ದಿರಿ ಎಂದು ಟ್ವೀಟ್ ಮಾಡಿದ್ದರು. 

 

Trending News