ಕರ್ನಾಟಕ ರಾಜ್ಯಸಭಾ ಸಂಸದೆ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಮಹಿಳಾ ವಿತ್ತ ಸಚಿವೆ!

ಹಿಮಾಚಲ ಪ್ರದೇಶದ ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.

Last Updated : May 31, 2019, 02:17 PM IST
ಕರ್ನಾಟಕ ರಾಜ್ಯಸಭಾ ಸಂಸದೆ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಮಹಿಳಾ ವಿತ್ತ ಸಚಿವೆ! title=

ಬೆಂಗಳೂರು: ಹಿಂದಿನ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕರ್ನಾಟಕ ರಾಜ್ಯಸಭಾ ಸಂಸದೆ ನಿರ್ಮಲಾ ಸೀತಾರಾಮನ್ ಇದೀಗ ವಿತ್ತ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವನ್ನು ನಿರ್ಮಲ ಸೀತಾರಾಮನ್ ಅವರಿಗೆ ನೀಡಲಾಗಿದೆ.

ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರಾಗಿ ಸೆಪ್ಟೆಂಬರ್ 2017 ರಿಂದ ಮೇ 2019ರವರೆಗೆ ಕಾರ್ಯ ನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್, ಇದೀಗ ದೇಶದ ಮೊದಲ ಮಹಿಳಾ ವಿತ್ತ ಸಚಿವರಾಗಿದ್ದಾರೆ. ಇದಕ್ಕೆ ಮುಂಚೆ ಇಂದಿರಾ ಗಾಂಧಿಯವರು 1970-71ರಲ್ಲಿ ಹಣಕಾಸು ಮಂತ್ರಿಯ ಹುದ್ದೆ ಹೊಂದಿದ್ದರು.

1970-71ರ ಅವಧಿಯನ್ನು ಹೊರತು ಪಡಿಸಿದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆರ್ಥಿಕ ಖಾತೆ ನಿರ್ವಹಿಸಲಿದ್ದಾರೆ.

ಹಿಮಾಚಲ ಪ್ರದೇಶದ ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.

Trending News