ಬಜೆಟ್ 2019: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರ ಈ ತಂಡದ ಸಹಾಯದಿಂದ ಸಿದ್ಧವಾಗಿದೆ ಬಜೆಟ್!

ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಮಹಿಳಾ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಲಿದ್ದು, ಬೆಳಿಗ್ಗೆ 11 ರಿಂದ ಬಜೆಟ್ ಭಾಷಣ ಪ್ರಾರಂಭವಾಗಲಿದೆ. 

Last Updated : Jul 5, 2019, 08:26 AM IST
ಬಜೆಟ್ 2019: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರ ಈ ತಂಡದ ಸಹಾಯದಿಂದ ಸಿದ್ಧವಾಗಿದೆ ಬಜೆಟ್! title=

ನವದೆಹಲಿ: ಇಂದು ಎಲ್ಲರ ಗಮನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ (ಬಜೆಟ್ 2019) ಮೇಲೆ ನೆಟ್ಟಿದೆ. ಬಜೆಟ್‌ಗೆ ಒಂದು ದಿನ ಮೊದಲು ಗುರುವಾರ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಪರಿಚಯಿಸಲಾಯಿತು. ಭಾರತದ ಸಂಸತ್​ ಇತಿಹಾಸದಲ್ಲಿ ಹಣಕಾಸು ಖಾತೆ ಪಡೆದು, ಬಜೆಟ್​ ಮಂಡಿಸಲಿರುವ ಮೊದಲ ಮಹಿಳೆ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ. ಈ ಬಾರಿ ಮೋದಿ ಸರ್ಕಾರಕ್ಕೆ 2014 ಕ್ಕಿಂತ ಹೆಚ್ಚು ಬಹುಮತ ಸಿಕ್ಕಿದೆ. ಆದ್ದರಿಂದ, ಸರ್ಕಾರದಿಂದ ಪ್ರತಿಯೊಂದು ವಲಯದ ಜನರಿಂದ ಸರ್ಕಾರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. 

ತೆರಿಗೆದಾರರು ತಮಗೆ ಹೆಚ್ಚಿನ ವಿನಾಯಿತಿ ದೊರೆಯುವ ನಿರೀಕ್ಷೆಯಲ್ಲಿದ್ದರೆ, ಕೈಗಾರಿಕೋದ್ಯಮಿಗಳು ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವ ನಿರೀಕ್ಷೆ ಹೊಂದಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಜಿಎಸ್‌ಟಿ ಇಳಿಕೆ ಬಗ್ಗೆ ಜನರಲ್ಲಿ ನಿರೀಕ್ಷೆಗಳಿವೆ. ಯಾವ ಕ್ಷೇತ್ರಕ್ಕೆ ಏನು ಅನುಕೂಲ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ರ ಈ ತಂಡದ ಸಹಾಯದಿಂದ ಸಿದ್ಧವಾಗಿದೆ ಬಜೆಟ್:
ಈ ಎಲ್ಲದರ ಮಧ್ಯೆ ಬಜೆಟ್ ಸಿದ್ಧಪಡಿಸಿದ ಮತ್ತು ಆರ್ಥಿಕ ನೀತಿಗಳನ್ನು ನಿರ್ಧರಿಸುವ ಜನರ ಬಗ್ಗೆ ನಿಮಗೆ ನಿಮಗೆ ತಿಳಿದಿದೆಯೇ? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮುಖ್ಯ ಹಣಕಾಸು ಸಲಹೆಗಾರ ಕೆ.ವಿ.ಸುಬ್ರಮಣ್ಯಂ, ಹಣಕಾಸು ಮತ್ತು ಆರ್ಥಿಕ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ವಿಸ್ತರಣಾ ಕಾರ್ಯದರ್ಶಿ ಜಿ.ಸಿ.ಮರ್ಮು, ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್, ಡಿಐಪಿಎಎಂ ಕಾರ್ಯದರ್ಶಿ ಅಟನು ಚಕ್ರವರ್ತಿ, ಹಣಕಾಸು ಸಚಿವಾಲಯದ ಮುಖ್ಯ ಹಣಕಾಸು ಸಲಹೆಗಾರ ಸಂಜೀವ್ ಸನ್ಯಾಲ್ ಬಜೆಟ್ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸುವಾಗ, 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ನಮ್ಮ ಗುರಿ ಎಂದು ಹಣಕಾಸು ಸಚಿವರು ಹೇಳಿದ್ದರು. ಇದಕ್ಕಾಗಿ ಉದ್ಯೋಗ ಮತ್ತು ಹೂಡಿಕೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು. ಹೂಡಿಕೆಯು ಉದ್ಯೋಗದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಬೇಡಿಕೆ ಹೆಚ್ಚಿಸುವುದರಿಂದ ಆರ್ಥಿಕತೆಯು ಹೆಚ್ಚಾಗುತ್ತದೆ ಎಂದು ವಿತ್ತ ಸಚಿವರು ಹೇಳಿದರು.
 

Trending News