SSMB 28 : ಮಹೇಶ್‌ ಬಾಬು ಜೊತೆ ಕನ್ನಡತಿ ಶ್ರೀಲೀಲಾ ನಟನೆ..!

ಸೂಪರ್‌ಸ್ಟಾರ್ ಮಹೇಶ್ ಬಾಬು ತೆಲುಗು ಸೇರಿದಂತೆ ಕನ್ನಡ ಸಿನಿ ಪ್ರೇಕ್ಷಕರಿಗೆ ಅವರ ಕುರಿತು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಏಕೆಂದ್ರೆ ಅವರಗೆ ಎರಡೂ ರಾಷ್ಟ್ರಗಳಲ್ಲಿ ಅಪಾರ ಅಭಿಮಾನಿ ಬಳಗ ಇದೆ. ಸದ್ಯ ಮಹೇಶ್‌ ಬಾಬು ತ್ರಿವಿಕ್ರಮ್ ನಿರ್ದೇಶನದಲ್ಲಿ ತಮ್ಮ 28ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲವು ಭಾಗಗಳು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

Written by - Krishna N K | Last Updated : Nov 26, 2022, 04:46 PM IST
  • ಹೇಶ್‌ ಬಾಬು ತ್ರಿವಿಕ್ರಮ್ ನಿರ್ದೇಶನದಲ್ಲಿ ತಮ್ಮ 28ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ
  • ಚಿತ್ರದ ಕೆಲವು ಭಾಗಗಳು ಈಗಾಗಲೇ ಚಿತ್ರೀಕರಿಸಲಾಗಿದೆ
  • ಎರಡನೇ ನಾಯಕಿ ಪಾತ್ರಕ್ಕೆ ಕನ್ನಡತಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ
SSMB 28 : ಮಹೇಶ್‌ ಬಾಬು ಜೊತೆ ಕನ್ನಡತಿ ಶ್ರೀಲೀಲಾ ನಟನೆ..! title=

SSMB 28 : ಸೂಪರ್‌ಸ್ಟಾರ್ ಮಹೇಶ್ ಬಾಬು ತೆಲುಗು ಸೇರಿದಂತೆ ಕನ್ನಡ ಸಿನಿ ಪ್ರೇಕ್ಷಕರಿಗೆ ಅವರ ಕುರಿತು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಏಕೆಂದ್ರೆ ಅವರಗೆ ಎರಡೂ ರಾಷ್ಟ್ರಗಳಲ್ಲಿ ಅಪಾರ ಅಭಿಮಾನಿ ಬಳಗ ಇದೆ. ಸದ್ಯ ಮಹೇಶ್‌ ಬಾಬು ತ್ರಿವಿಕ್ರಮ್ ನಿರ್ದೇಶನದಲ್ಲಿ ತಮ್ಮ 28ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲವು ಭಾಗಗಳು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಈ ನಡುವೆ ಮಹೇಶ್ ಬಾಬು ಅವರ ತಾಯಿ ಮತ್ತು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ನಿಧನರಾದರು. ಇದರಿಂದ ಅವರು ತೀವ್ರ ದುಃಖಿತರಾಗಿದ್ದಾರೆ. ಸದ್ಯಕ್ಕೆ ಯಾವುದೇ ಶೂಟಿಂಗ್‌ನಲ್ಲಿ ಮಹೇಶ್‌ ಭಾಗವಹಿಸುವುದಿಲ್ಲ. ಆದರೆ ಮಹೇಶ್ ಬಾಬು ತ್ರಿವಿಕ್ರಮ ನಿರ್ದೇಶನದ ಚಿತ್ರದ ಸಂಪೂರ್ಣ ಕಥೆಯನ್ನು ಬದಲಾಯಿಸಲು ಕೇಳಿದ್ದಾರೆ, ಆದ್ದರಿಂದ ತ್ರಿವಿಕ್ರಮ್ ಕೂಡ ಕಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಆದರೆ, ಆ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲವಾದರೂ ಈ ಸಿನಿಮಾದಲ್ಲಿ ನಾಯಕಿಯರ ವಿಚಾರದಲ್ಲಿ ಸ್ಪಷ್ಟತೆ ಇದೆ. 

ಇದನ್ನೂ ಓದಿ: Harshika Poonacha : ಇಷ್ಟು ಕ್ಯೂಟಾಗಿ ಕಾಲೇಜ್‌ಗೆ ಹೋದ್ರೆ ಹೇಗಮ್ಮಾ ಹುಡುಗರ ಪರಿಸ್ಥಿತಿ...!

SSMB 28 ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಎರಡನೇ ನಾಯಕಿ ಪಾತ್ರಕ್ಕೆ ಕನ್ನಡತಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಚಿತ್ರತಂಡದಿಂದ ಬಂದಿರುವ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಹೀರೋಯಿನ್ ಜೊತೆ ಮಹೇಶ್‌ ಕ್ರೇಜಿ ಐಟಂ ಸಾಂಗ್ ಮಾಡಲಿದ್ದಾರಂತೆ. ಇಂತಹ ಐಟಂ ಸಾಂಗ್‌ಗಳ ವಿಚಾರದಲ್ಲಿ ತ್ರಿವಿಕ್ರಮ್ ಸ್ವಲ್ಪ ದೂರ. ಆದರೆ ತ್ರಿವಿಕ್ರಮ್ ಈ ಬಾರಿ ಐಟಂ ಸಾಂಗ್ ಮಾಡಲು ಆಸಕ್ತಿ ತೋರಿದ್ದು ವಿಶೇಷ. ಸದ್ಯಕ್ಕೆ ಆ ಕ್ರೇಜಿ ಹೀರೋಯಿನ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಇನ್ನು ಅಣ್ಣನನ್ನು ಕಳೆದುಕೊಂಡಿದ್ದ ಮಹೇಶ್‌ ಬಾಬುಗೆ ತಾಯಿ ನಿಧನದಿಂದ ತೀವ್ರ ನೋವಾಗಿತ್ತು. ಇದೀಗ ಪ್ರೀತಿಯ ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಅವರ ಅಗಲಿಕೆ ಅವರನ್ನು ಆಘಾತಕ್ಕೆ ದೂಡಿದೆ. ಕೃಷ್ಣ ಅವರ ನಿಧನ ಬರೀ ಮಹೇಶ್‌ ಕುಟುಂಬಕ್ಕೆ ಅಲ್ಲದೆ, ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಒಟ್ಟಾರೆಯಾಗಿ ಮಹೇಶ್‌ ಬಾಬು ಸಿರಿರಂಗಕ್ಕೆ ಯಾವಾಗ ಕಮ್‌ಬ್ಯಾಕ್‌ ಮಾಡ್ತಾರೆ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News