Ambulance Blast : ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಗರ್ಭಿಣಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಬಾಂಬ್ ನಂತೆ ಸ್ಪೋಟಗೊಂಡಿದೆ. ಗರ್ಭಿಣಿಯನ್ನು ಆಕೆಯ ಮನೆಯವರು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಆಂಬುಲೆನ್ಸ್ ನಲ್ಲಿ ಬಾಂಬ್ ಸ್ಫೋಟದಂತೆ ಭಾರಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಮಾಧಾನದ ವಿಷಯವೆಂದರೆ ಸ್ಫೋಟದ ವೇಳೆ ಆಂಬ್ಯುಲೆನ್ಸ್‌ನಲ್ಲಿ ಇದ್ದವರೆಲ್ಲಾ ಹೊರಗೆ ಬಂದಿದ್ದರು. ಆಂಬ್ಯುಲೆನ್ಸ್ ಡ್ರೈವರ್ ವಾಹನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಅವ್ರು ಆಂಬ್ಯುಲೆನ್ಸ್ ಅನ್ನು ನಿಲ್ಲಿಸಿ ಎಲ್ಲರನ್ನೂ ಆಂಬ್ಯುಲೆನ್ಸ್ ನಿಂದ ಹಿರ ಬರುವಂತೆ ಸೂಚಿಸಿದ್ದಾರೆ. ಅಲ್ಲದೆ ಹತ್ತಿರದಲ್ಲಿದ್ದವರನ್ನು ಕಾರಿನಿಂದ ದೂರ ಸರಿಯುವಂತೆ ಹೇಳಿದ್ದಾರೆ.
ಇದನ್ನೂ ಓದಿ : Daily GK Quiz: 'ದಕ್ಷಿಣ ಭಾರತದ ಮ್ಯಾಂಚೆಸ್ಟರ್' ಎಂದು ಯಾವ ನಗರವನ್ನು ಕರೆಯಲಾಗುತ್ತದೆ?
ಇಷ್ಟಾಗಿ ಕೆಲವೇ ನಿಮಿಷಗಳಲ್ಲಿ ಇಡೀ ವಾಹನ ಬೆಂಕಿಗೆ ಆಹುತಿಯಾಯಿತು. ಈ ಬೆಂಕಿ, ಆಂಬ್ಯುಲೆನ್ಸ್‌ನ ಆಕ್ಸಿಜನ್ ಟ್ಯಾಂಕ್‌ಗೆ ತಲುಪಿ ಭಾರೀ ಸ್ಫೋಟಕ್ಕೆ ಕಾರಣವಾಯಿತು. ವಿಡಿಯೋದಲ್ಲಿ ಸ್ಫೋಟದ ಸದ್ದು ಕೂಡಾ ಕೇಳಿಬರುತ್ತಿದೆ.
#Breaking | Ambulance carrying pregnant woman blasts after catching fire in Maharashtra's #Jalgaon
Notably, no one was reported hurt as the driver's alertness made him notice the smoke coming out from vehicle, leading to quick evacuation of those on board.
More details awaited.… pic.twitter.com/sh0YMA59tn
— Abdul khabir jamily (@JamilKhabir396) November 13, 2024
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕೆಲ ಸಮಯದ ಹಿಂದೆ ಯುಪಿಯ ಪ್ರತಾಪಗಢದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆಗ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಆಂಬ್ಯುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಸ್ಫೋಟಗೊಂಡಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.