ಗ್ಯಾಸ್ ಮೇಲಿಟ್ಟಿರುವ ಹಾಲು ಉಕ್ಕಿ ಚೆಲ್ಲಬಾರದು ಎಂದಾದರೆ ಈ ಟಿಪ್ಸ್ ಅನುಸರಿಸಿ !ಒಂದು ಹನಿ ಹಾಲೂ ಕೆಳಗೆ ಬೀಳುವುದಿಲ್ಲ

ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲಿ ಹೋದಾಗ ಅದನ್ನು ಶುಚಿಗೊಳಿಸುವುದಕ್ಕೆ   ಸಮಯ ವ್ಯರ್ಥವಾಗುತ್ತದೆ. ಆದರೆ ಹಾಲು ಎಷ್ಟೇ ಕುದ್ದರೂ ಉಕ್ಕಿ ಬಾರದಂತೆ ತಡೆಯುವ ಕೆಲವು ಸಿಂಪಲ್ ಟೆಕ್ನಿಕ್ ಗಳು ಇವೆ.

Written by - Ranjitha R K | Last Updated : Nov 14, 2024, 05:33 PM IST
  • ಮಹಿಳೆಯರ ಮೊದಲ ಆದ್ಯತೆ ಅಡುಗೆ ಮನೆ.
  • ಕುದಿಯಲು ಇಟ್ಟ ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲುವುದು.
  • ಹಾಲು ಎಷ್ಟೇ ಕುದ್ದರೂ ಉಕ್ಕಿ ಬಾರದಂತೆ ತಡೆಯುವ ಕೆಲವು ಸಿಂಪಲ್ ಟೆಕ್ನಿಕ್
ಗ್ಯಾಸ್ ಮೇಲಿಟ್ಟಿರುವ ಹಾಲು ಉಕ್ಕಿ ಚೆಲ್ಲಬಾರದು ಎಂದಾದರೆ ಈ ಟಿಪ್ಸ್ ಅನುಸರಿಸಿ !ಒಂದು ಹನಿ ಹಾಲೂ ಕೆಳಗೆ ಬೀಳುವುದಿಲ್ಲ  title=

ಬೆಂಗಳೂರು : ಮಹಿಳೆಯರ ಮೊದಲ ಆದ್ಯತೆ ಅಡುಗೆ ಮನೆ. ಅಡುಗೆ ಮಾಡುವುದರ ಜೊತೆಗೆ ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದಕ್ಕೂ ಪ್ರಾಶಸ್ತ್ಯ ನೀಡಲಾಗುತ್ತದೆ. ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಅಡುಗೆ ಮನೆಯಲ್ಲಿ ಅಲ್ಲಿ ಇಲ್ಲಿ ಚೆಲ್ಲುವುದು ಸಾಮಾನ್ಯವಾಗಿರುತ್ತದೆ. ಅದರಲ್ಲಿ ಒಂದು ಕುದಿಯಲು ಇಟ್ಟ ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲುವುದು. ಹಾಲು ಉಕ್ಕಿ ಬಂದು ಗ್ಯಾಸ್ ಮೇಲೆಲ್ಲಾ ಚೆಲ್ಲಿ ಹೋದಾಗ ಅದನ್ನು ಶುಚಿಗೊಳಿಸುವುದಕ್ಕೆ   ಸಮಯ ವ್ಯರ್ಥವಾಗುತ್ತದೆ. ಆದರೆ, ಹಾಲು ಎಷ್ಟೇ ಕುದ್ದರೂ ಉಕ್ಕಿ ಬಾರದಂತೆ ತಡೆಯುವ ಕೆಲವು ಸಿಂಪಲ್ ಟೆಕ್ನಿಕ್ ಗಳು ಇವೆ.

ಮನೆಯಲ್ಲಿ ಸಾವಿರ ಕೆಲಸ ಇರುವಾಗ ಒಂದೊಂದು ಕೆಲಸವನ್ನು ಅರ್ಧ ಮಾಡಿ ಮರೆತು ಬಿಡುವುದು ಸಾಮಾನ್ಯ. ಹೀಗೆ ಕೆಲಸದ ಭರಾಟೆಯಲ್ಲಿ ಗ್ಯಾಸ್ ನಲ್ಲಿ ಹಾಲು ಇಟ್ಟು ಬೇರೆ ಕೆಲಸದಲ್ಲಿ ಮಗ್ನರಾಗಿ ಬಿಡುವುದು ಮಹಿಳೆಯರು ಸಾಮಾನ್ಯವಾಗಿ ಮಾಡುವ ತಪ್ಪು. ಕೆಲಸದ ತರಾತುರಿಯಲ್ಲಿ ಹಾಲು ಉಕ್ಕಿ ಬರುವ ತನಕ ಸ್ಟವ್ ಮುಂದೆಯೇ ನಿಲ್ಲುವಷ್ಟು ಸಮಯವೂ ಇರುವುದಿಲ್ಲ. ಹಾಗಾಗಿ ಅನೇಕ ಬಾರಿ ಗ್ಯಾಸ್ ಮೇಲೆ ಹಾಲಿಟ್ಟಿರುವುದನ್ನೇ ಮರೆತು ಬಿಡುತ್ತಾರೆ. 

ಇದನ್ನೂ ಓದಿ : BSNLನಿಂದ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಕೊಡುಗೆ..!

ಹಾಲು ಕುದಿಸುವಾಗ ಕೆಲವು ಟಿಪ್ಸ್ ಮತ್ತು ಟ್ರಿಕ್ ಗಳನ್ನು ಅನುಸರಿಸಿದರೆ ಉತ್ತಮ :
೧.ಹಾಲು ಕಾಯಿಸಲು ಬಳಸುವ ಪಾತ್ರೆಯಲ್ಲಿ ಹಾಲು ಹಾಕುವುದಕ್ಕೂ ಮುನ್ನ ಸ್ವಲ್ಪ ನೀರು ಹಾಕಿ. ನಂತರ ಹಾಲನ್ನು ಹಾಕಿ ಬಿಸಿ ಮಾಡಿದರೆ ಹಾಲು ಉಕ್ಕಿ ಬರುವುದಿಲ್ಲ.
೨.ಹಾಲು ಕುದಿಸುವ ಪಾತ್ರೆಯ ಸುತ್ತಲೂ ಸ್ವಲ್ಪ ಬೆಣ್ಣೆಯನ್ನು ಹಚ್ಚಿದರೆ ಹಾಲು ಕುದಿಯುತ್ತದೆ ವಿನಃ ಉಕ್ಕಿ ಪಾತ್ರೆಯಿಂದ ಹೊರಗೆ ಚೆಲ್ಲುವುದಿಲ್ಲ.
೩.ಹಾಲು ಉಕ್ಕಿ ಬರುವಾಗ ಹಾಲಿನ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿದರೆ ಹಾಲು ಉಕ್ಕುವುದು ಅಲ್ಲಿಯೇ ನಿಲ್ಲುತ್ತದೆ.
೪.ಹಾಲು ಕುದಿಸುವಾಗ ಪಾತ್ರೆಯ ಒಳಗೆ ಒಂದು ಮರದ ಚಮಚವನ್ನು ಇರಿಸಿದರೆ ಕೂಡಾ ಹಾಲು ಉಕ್ಕಿ ಬರುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

೫. ಹಾಲು ಉಕ್ಕುತ್ತಿದೆ ಎಂದ ತಕ್ಷಣವೇ ಪಾತ್ರೆಯನ್ನು ಮೇಲೆತ್ತಿ ಅಲುಗಾಡಿಸಿ ನಂತರ ಕುದಿಯಲು ಇಟ್ಟರೆ ಹಾಲು ಉಕ್ಕುವುದನ್ನು ತಕ್ಷಣವೇ ನಿಲ್ಲಿಸಬಹುದು.
೬. ಹಾಲನ್ನು ಬಿಸಿ ಮಾಡುವಾಗ, ಸ್ಟವ್ ಉರಿಯನ್ನು ಸಿಮ್ ನಲ್ಲಿಯೇ ಇರಿಸಿ. ಹೀಗೆ ಮಾಡುವುದರಿಂದ ಹಾಲು ಕುದಿಯುತ್ತದೆ, ಪಾತ್ರೆಯಿಂದ ಉಕ್ಕಿ ಹೊರ ಬರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News