Kavya Thapar : ಕಾವ್ಯ ಥಾಪರ್.. ಈ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಮನಸ್ಸು ಝಲ್ ಎನ್ನುತ್ತದೆ.. ಹಾರ್ಟ್ ಬೀಟ್ ಹೆಚ್ಚುತ್ತದೆ... ʼಏಕ್ ಮಿನಿ ಕಥಾʼ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಇಂದು ಸಾಲು ಸಾಲು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾಳೆ.. ಸಧ್ಯ ನಟಿಗೆ ಸಂಬಂಧಿಸಿ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಸಿನಿರಂಗಕ್ಕೆ ಎಂಟ್ರಿ ಕೊಡುವ ಹೊಸ ಚೆಲುವೆಯರು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ. ತಮ್ಮ ನಟನೆ ಮತ್ತು ಸೌಂದರ್ಯದಿಂದ ಸಿನಿರಸಿಕರ ಮನಗೆಲ್ಲುತ್ತಿದ್ದಾರೆ.. ಈ ಪೈಕಿ ನಟಿ ಕಾವ್ಯಾ ಥಾಪರ್ ಕೂಡ ಒಬ್ಬರು.
ಮಾಡೆಲಿಂಗ್ ಕ್ಷೇತ್ರದ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ಚೆಲುವೆ, ʼಏಕ್ ಮಿನಿ ಕಥಾʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು..
ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಟಾಕ್ ಪಡೆದುಕೊಂಡಿತು. ನಂತರ ಸುಂದರಿಗೆ ಸಾಕಷ್ಟು ಆಫರ್ಗಳು ಬರಲು ಪ್ರಾರಂಭಿಸಿದರು..
ಸಧ್ಯ ಕಾವ್ಯ ತಮಿಳು ಹಾಗೂ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಇತ್ತಿಚಿಗೆ ಭಿಕ್ಷುಕ 2, ಇಗಲ್, ಊರು ಪೇರು ಭೈರವಕೋಣ, ಡಬಲ್ ಸ್ಮಾರ್ಟ್, ವಿಶ್ವಂ ಸಿನಿಮಾದಲ್ಲಿ ನಟಿಸಿದ್ದರು.
ನಟನೆಯಷ್ಟೇ ಅಲ್ಲ ತನ್ನ ಗ್ಲಾಮರ್ನೊಂದಿಗೆ ಹುಡುಗನನ್ನು ಸೆಳೆಯುತ್ತಿರುವ ನಟಿ, ಸಿನಿಮಾಗಳ ರಿಸಲ್ಟ್ ಏನೇ ಇರಲಿ, ತನ್ನ ಸೌಂದರ್ಯದ ಮೋಡಿಯಿಂದ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಿದ್ದಾಳೆ.
ಸಿನಿಮಾಗಳ ಜೊತೆ ಕಾವ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳನ್ನು ಆಕರ್ಷಿಸುತ್ತಾಳೆ.
ಈ ಮಧ್ಯ ಇತ್ತೀಚಿನ ಸಂದರ್ಶನವೊಂದರಲ್ಲಿ, ಈ ಚೆಲುವೆ ಆಘಾತಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾಳೆ. ಈ ಹಾಟ್ ಬ್ಯೂಟಿ ತನ್ನ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾಳೆ.
ಆ್ಯಡ್ ಆಡಿಷನ್ಗೆ ಹೋದಾಗ ವ್ಯಕ್ತಿವೊಬ್ಬ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದ ವಿಚಾರವನ್ನು ಕಾವ್ಯಾ ಬಹಿರಂಗ ಪಡಿಸಿದ್ದಾರೆ..
ಜಾಹೀರಾತಿನಲ್ಲಿ ಆಫರ್ ಬಂದಿತ್ತು, ಆಡಿಷನ್ ನೀಡಲು ಕಚೇರಿಗೆ ಬರಲು ವ್ಯಕ್ತಿಯೊಬ್ಬರು ಹೇಳಿದರು. ನಾನು ಸರಿ ಎಂದು ಅಲ್ಲಿಗೆ ಹೋದೆ. ಆ ನಂತರ ನಾಲ್ಕು ಜಾಹೀರಾತುಗಳಲ್ಲಿ ಅವಕಾಶ ಕೊಡುತ್ತಾನೆ.. ಅದಕ್ಕೆ ಆಯ್ಕೆಯಾಗಬೇಕಾದರೆ.. ಕಮಿಟ್ ಮೆಂಟ್ ಕೊಡಿ ಎಂದು ಕೇಳಿದರು. ನನಗೆ ಇದ್ದಕ್ಕಿದ್ದಂತೆ ಶಾಕ್ ಆಯ್ತು... ನನಗೆ ಅಂತಹ ವಿಷಯಗಳು ಇಷ್ಟವಿಲ್ಲ ಎಂದು ಹೇಳಿ ಎದ್ದು ಬಂದೆ ಎಂದರು..
ನನ್ನನ್ನು ನಟಿಯಾಗಿ ನೋಡಬೇಕೆಂಬುದು ನನ್ನ ತಂದೆಯ ಕನಸಾಗಿತ್ತು. ಈ ಹಿಂದೆ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದೆ, ನಂತರ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು ಎಂದಿದ್ದಾರೆ ಕಾವ್ಯ ಥಾಪರ್..