ಸಿನಿರಂಗದಲ್ಲಿ ಸಂಚಲನ.. ಒಂಟಿಯಾಗಿ ಬದುಕಲಾಗದೇ ಕಿರಿಯ ನಟನೊಂದಿಗೆ ಮದುವೆಗೆ ಸಜ್ಜಾದ ಪ್ರಖ್ಯಾತ ಹಿರಿಯ ನಟಿ!?

Famous Senior Actress: ಆ ಕಾಲದ ಬ್ಯೂಟಿ ಸ್ಟಾರ್ ಮೀನಾ ಅವರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ತೆಲುಗಿನಲ್ಲಿ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ರಾಜಶೇಖರ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ಮತ್ತು ತಮಿಳಿನಲ್ಲಿ ರಜನಿಕಾಂತ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ.  

Written by - Savita M B | Last Updated : Nov 15, 2024, 08:10 AM IST
  • ನಟಿ ಮೀನಾ ಬಾಲನಟಿಯಾಗಿ ಉದ್ಯಮಕ್ಕೆ ಪ್ರವೇಶಿಸಿದರು ಮತ್ತು ದಕ್ಷಿಣದ ಪ್ರಮುಖ ನಟಿಯಾದರು.
  • ಮೀನಾ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಿನಿರಂಗದಲ್ಲಿ ಸಂಚಲನ.. ಒಂಟಿಯಾಗಿ ಬದುಕಲಾಗದೇ ಕಿರಿಯ ನಟನೊಂದಿಗೆ ಮದುವೆಗೆ ಸಜ್ಜಾದ ಪ್ರಖ್ಯಾತ ಹಿರಿಯ ನಟಿ!?  title=

Actress Meena: ನಟಿ ಮೀನಾ ಬಾಲನಟಿಯಾಗಿ ಉದ್ಯಮಕ್ಕೆ ಪ್ರವೇಶಿಸಿದರು ಮತ್ತು ದಕ್ಷಿಣದ ಪ್ರಮುಖ ನಟಿಯಾದರು. ಇತ್ತೀಚೆಗೆ ಅವರ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ನಿಧನರಾದರು. ಅಂದಿನಿಂದ ಅವರು ಒಬ್ಬಳೇ ಮಗಳು ನೈನಿಕಾ ಜೊತೆ ಒಂಟಿಯಾಗಿ ವಾಸಿಸುತ್ತಿದ್ದಾರೆ. ಕೆಲವು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮೀನಾ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ-ಅಭಿಮಾನಿ ದೇವರುಗಳಿಗೆ ನಿತ್ಯ ದಾಸೋಹ..! ಕಾಣಲು ಬಂದವರನ್ನು ಎಂದಿಗೂ ಉಪವಾಸ ಕಳುಹಿಸಿಲ್ಲ ʼದೇವತಾಮನುಷ್ಯʼ

ನಟಿ ಧನುಷ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ.. ಮೀನಾ ಮದುವೆಯ ಸುದ್ದಿಗಳೆಲ್ಲವೂ ವದಂತಿ ಎಂದು ಕೆಲವರು ಅಲ್ಲಗಳೆಯುತ್ತಿದ್ದಾರೆ. ಮೀನಾ ಇತ್ತೀಚೆಗೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಕೆಲವು ವಿಷಯಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ಮದುವೆಯ ಬಗ್ಗೆ ವಿವಿಧ ಸುದ್ದಿಗಳನ್ನು ಬರೆಯಲಾಗುತ್ತಿದ್ದು, ಅವೆಲ್ಲವೂ ಫೇಕ್ ನ್ಯೂಸ್ ಎಂದು ನಿರಾಕರಿಸಿದ್ದಾರೆ.. ಮೀನಾ ಅವರು ತಮಿಳಿನ ಸ್ಟಾರ್ ಹೀರೋ ಧನುಷ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಕೆಲವು ಕಾಲಿವುಡ್ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ.. ಪ್ರಸ್ತುತ ಅವರಿಬ್ಬರೂ ಒಂಟಿ ಜೀವನ ನಡೆಸುತ್ತಿರುವುದರಿಂದ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಮಾದ್ಯಮಗಳಲ್ಲಿ ಸುದ್ದಿಗಳನ್ನು ಬಿತ್ತರಿಸಲಾಗಿದೆ.. 

ಇದನ್ನೂ ಓದಿ-ಖ್ಯಾತ ನಟಿಗೆ ಕಿರುಕುಳ..! ಆಫರ್‌ ನೀಡಲು ಕಚೇರಿ ಕರೆಸಿ ಆ ವ್ಯಕ್ತಿ ಮಾಡಿದ್ದೇನು.. ಗೊತ್ತೆ..? ಶಾಕ್‌ ಆಗ್ತೀರಾ..

ಕೆಲವರು ಯಾವುದೋ ವಿಚಾರವನ್ನು ಹೈಲೈಟ್ ಮಾಡುವ ಉದ್ದೇಶದಿಂದ ಕ್ರೇಜಿ ನ್ಯೂಸ್ ಬರೆಯುತ್ತಿದ್ದು.. ಹೀಗೆ ಧನುಷ್ ಜೊತೆ ವಿವಾಹವಾಗಲಿದ್ದಾರೆ ಎಂದು ಸುದ್ದಿ ಬರೆದಿದ್ದಾರೆ. ಆದರೆ ನಾನು ಒಂಟಿಯಾಗಿ ಬದುಕಲು ಪ್ರಯತ್ನಿಸುದ್ದೇನೆ.. ನನಗೆ ಒಬ್ಬ ಮಗಳಿದ್ದಾಳೆ, ಅವಳ ಭವಿಷ್ಯ ಬಹಳ ಮುಖ್ಯ, ಜೀವನದಲ್ಲಿ ಏನು ನಡೆಯುತ್ತದೋ... ಅದೇ ರೀತಿ ಮುನ್ನಡೆಯಲು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಧನುಷ್ ಮತ್ತು ಮೀನಾ ಮದುವೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಮುಂದೆ ಈ ರೀತಿಯ ಸುದ್ದಿಗಳನ್ನು ಬರೆಯಬೇಡಿ ಎಂದು ಮಾಧ್ಯಮಗಳಿಗೆ ಮನವಿಯನ್ನೂ ನಟಿ ಮಾಡಿದ್ದಾರೆ.. ಇದರಿಂದ ಭಾವುಕರಾಗಿ ನರಳಬೇಕಾಗುತ್ತದೆ ಎಂದು ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ. ಮೀನಾ ಅವರ ಕಾಮೆಂಟ್‌ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News