ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದು ತುಂಬಾ ಮುಖ್ಯ..! ಏಕೆ ಗೊತ್ತೆ..?

Health benefits : ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ನೀರು ಕುಡಿಯುವುದು. ಕೆಲವರು ಸಾಮಾನ್ಯ ನೀರನ್ನು ಕುಡಿಯುತ್ತಾರೆ, ಇತರರು ಬೆಚ್ಚಗಿನ ನೀರನ್ನು ಕುಡಿಯುತ್ತಾರೆ. ಆದರೆ, ರಾತ್ರಿ ಈ ಬಿಸಿ ನೀರು ಕುಡಿದರೆ ಆರೋಗ್ಯಕ್ಕೆ ಎಷ್ಟು ಲಾಭಗಳಿಗೆ ಗೊತ್ತೆ..? ಇದರ ಬಗ್ಗೆ ತಜ್ಞರು ಏನ್‌ ಹೇಳುತ್ತಾರೆ.. ಬನ್ನಿ ನೋಡೋಣ…

Written by - Krishna N K | Last Updated : Nov 15, 2024, 08:08 PM IST
    • ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದು ಒಳ್ಳೆಯದು.
    • ಬಿಸಿ ನೀರು ಕುಡಿಯುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
    • ಬಿಸಿ ನೀರು ಕುಡಿದರೆ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.
ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದು ತುಂಬಾ ಮುಖ್ಯ..! ಏಕೆ ಗೊತ್ತೆ..? title=

Drinking hot water at Night : ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಏಕೆಂದರೆ... ಬಿಸಿನೀರು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ರಾತ್ರಿಯ ಹೆಚ್ಚಿಗೆ ಊಟ ಮಾಡಿದಾಗ, ನಮಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹೊಟ್ಟೆಯಲ್ಲಿ ಏನೋ ತೊಂದರೆಯಾದಂತೆ ಭಾಸವಾಗುತ್ತದೆ. ಆಗ ಈ ಬಿಸಿ ನೀರು ಕುಡಿದರೆ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.  

ಬಿಸಿನೀರು ನಮ್ಮ ದೇಹದಲ್ಲಿರುವ ನರಮಂಡಲವನ್ನೂ ಸಡಿಲಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಇಂತಹವರು ಮಲಗುವ ಮುನ್ನ ಬಿಸಿ ನೀರು ಕುಡಿದರೆ ಒತ್ತಡ ಕಡಿಮೆಯಾಗಿ ಶಾಂತದಿಂದ ಮಲಗಬಹುದು.. 

ಇದನ್ನೂ ಓದಿ: ಸಕ್ಕರೆ ಕಾಯಿಲೆಗೆ ರಾಮಬಾಣ ಈ ಪಾನೀಯಗಳು..! ನೀವು ಸೇವಿಸಿರದಿದ್ದರೆ ಈಗಲೇ ಟ್ರೈ ಮಾಡಿ..!

ಮಹಿಳೆಯರಿಗೆ ಪ್ರತಿ ತಿಂಗಳು ಪಿರಿಯಡ್ಸ್ ಇರುತ್ತದೆ. ಆ ಅವಧಿಯಲ್ಲಿ ವಿಪರೀತ ನೋವು ಇರುತ್ತದೆ. ಇಂತಹ ಸಮಯದಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿದರೆ ನೋವು ಕಡಿಮೆಯಾಗುತ್ತದೆ. ಶಾಂತಿಯುತವಾಗಿ ಮಲಗಬಹುದು. ಅಷ್ಟೇ ಅಲ್ಲ ಬಿಸಿ ನೀರು ನೋಯುತ್ತಿರುವ ಗಂಟಲು ಸಮಸ್ಯೆಗಳನ್ನೂ ಸಹ ಕಡಿಮೆ ಮಾಡುತ್ತದೆ.

ಅಷ್ಟೇ ಏಕೆ.. ಮಲಗುವ ಮುನ್ನ ಬಿಸಿ ನೀರು ಕುಡಿದರೆ.. ನಿಮ್ಮ ಹಲ್ಲಿನಲ್ಲಿ ಅಂಟಿಕೊಂಡಿರುವ ಸೂಕ್ಷ್ಮಾಣುಗಳನ್ನು ಹೋಗಲಾಡಿಸುತ್ತದೆ. ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಬಿಸಿನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಹಾಗಿದ್ರೆ ತಡ ಏಕೆ ಇಂದಿನಿಂದಲೇ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯಲು ಮರೆಯಬೇಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News