ಈ ಅಗ್ಗದ 7 ಸೀಟರ್ ಖರೀದಿಗೆ ಮುಗಿ ಬೀಳುತ್ತಿರುವ ಗ್ರಾಹಕರು !

ಮಾರುತಿ ಆಲ್ಟೊ ಡಿಸೆಂಬರ್ 2022 ರಲ್ಲಿ ಟಾಪ್-10 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಿಂದ ಹೊರಬಂದಿದೆ. ವ್ಯಾಗನ್ಆರ್  ಈ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ಎರ್ಟಿಗಾ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Written by - Ranjitha R K | Last Updated : Jan 20, 2023, 02:30 PM IST
  • ಒಂದು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟವಾಗಿರುವ ಮಾರುತಿ ಆಲ್ಟೊ
  • ಅತಿ ಹೆಚ್ಚು ಮಾರಾಟವಾದ ಈ ಕಂಪನಿಯ ಕಾರೆಂದರೆ ಬಲೆನೊ.
  • ಡಿಸೆಂಬರ್ 2022 ರಲ್ಲಿ ಟಾಪ್-10 ಲಿಸ್ಟ್ ನಿಂದ ಹೊರ ಬಿದ್ದ ಮಾರುತಿ ಆಲ್ಟೊ
ಈ ಅಗ್ಗದ 7 ಸೀಟರ್ ಖರೀದಿಗೆ ಮುಗಿ ಬೀಳುತ್ತಿರುವ ಗ್ರಾಹಕರು ! title=

ಬೆಂಗಳೂರು : ಮಾರುತಿ ಸುಜುಕಿ ಡಿಸೆಂಬರ್ 2022 ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ. ಈ ಸಮಯದಲ್ಲಿ ಅತಿ ಹೆಚ್ಚು ಮಾರಾಟವಾದ ಈ ಕಂಪನಿಯ ಕಾರೆಂದರೆ ಬಲೆನೊ. ಕಳೆದ ವರ್ಷ ಬಲೆನೊದ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿದಾಗಿನಿಂದ, ಈ ಕಾರಿನ ಮಾರಾಟದಲ್ಲಿ ಕೂಡಾ ಭಾರೀ ಹೆಚ್ಚಳ ಕಂಡು ಬಂದಿದೆ. ಹಲವಾರು ತಿಂಗಳುಗಳಿಂದ ಬಲೆನೊ ಹೆಚ್ಚು ಮಾರಾಟವಾದ ಕಾರಾಗಿತ್ತು. ಇನ್ನು ಕೆಲವು ಸಮಯದವರೆಗೆ ವ್ಯಾಗನ್ಆರ್ ಮತ್ತು ಮಾರುತಿ ಸುಜುಕಿ ಆಲ್ಟೊ ಹೆಚ್ಚು ಮಾರಾಟವಾದ ಕಾರುಗಳ ಸಾಲಿನಲ್ಲಿ ನಿಂತಿತ್ತು. 

ಆದರೆ, ಮಾರುತಿ ಆಲ್ಟೊ ಡಿಸೆಂಬರ್ 2022 ರಲ್ಲಿ ಟಾಪ್-10 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಿಂದ ಹೊರಬಂದಿದೆ. ವ್ಯಾಗನ್ಆರ್  ಈ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಅಂದರೆ, ಸಾಮಾನ್ಯವಾಗಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಅಗ್ರಸ್ಥಾನದಲ್ಲಿದ್ದ ಮಾರುತಿಯ ಎರಡೂ ಮಾಡೆಲ್‌ಗಳು ಸಾಕಷ್ಟು ಕುಸಿತ ಕಂಡಿವೆ. ಈ ಮಧ್ಯೆ, ಟಾಪ್-5 ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಮಾರುತಿ ಎರ್ಟಿಗಾ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ  ಮಾರುತಿ ಎರ್ಟಿಗಾ 7 ಸೀಟರ ನ  ಒಟ್ಟು 12,273 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಇದನ್ನೂ ಓದಿ : ಹುಂಡೈ ಕ್ರೆಟಾಗೆ ಭಾರೀ ಪೈಪೋಟಿ ನೀಡಲು ರೋಡಿಗಿಳಿಯುತ್ತಿದೆ ಈ SUV

ಮಾರುತಿ ಎರ್ಟಿಗಾ ಎಂಜಿನ್ ಮತ್ತು ಬೆಲೆ :
ಮಾರುತಿ ಎರ್ಟಿಗಾದಲ್ಲಿ 1.5-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗುತ್ತದೆ. ಇದು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು  ಹೊಂದಿದೆ. ಇದರ ಎಂಜಿನ್ 103 PS/136.8 Nm ಅನ ಜನರೇಟ್ ಮಾಡುತ್ತದೆ. ಕಾರನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. CNG ಕಿಟ್ ಅನ್ನು ಸಹ ಈ ಕಾರಿನಲ್ಲಿ ನೀಡಲಾಗುತ್ತದೆ. 

ಎರ್ಟಿಗಾ ಬೆಲೆ 8.35 ಲಕ್ಷದಿಂದ 12.79 ಲಕ್ಷ ರೂ.ವರೆಗೆ ಇರಲಿದೆ.  ಕಾರು 209 ಲೀಟರ್ ಬೂಟ್ ಸ್ಪೇಸ್ ಪಡೆಯುತ್ತದೆ. ಇದರ ಥರ್ಡ್ ರೋ ಸೀಟುಗಳನ್ನು ಮಡಚಿದರೆ ಬೂಟ್ ಸ್ಪೇಸ್ 550 ಲೀಟರ್ ನಷ್ಟಾಗುತ್ತದೆ. 

ಇದನ್ನೂ ಓದಿ : Yamaha: ಈ ಅಗ್ಗದ ಸ್ಕೂಟರ್ ರಹಸ್ಯವಾಗಿ ಬಿಡುಗಡೆ ಮಾಡಿದ ಯಮಹಾ: ಹೋಂಡಾ ಆಕ್ಟಿವಾಗೆ ಭಾರೀ ಪೆಟ್ಟು!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News